ಬ್ರೇಕಿಂಗ್ ನ್ಯೂಸ್
02-09-20 12:31 pm Times of India - Report ಕರಾವಳಿ
ಮಂಗಳೂರು, ಸೆಪ್ಟಂಬರ್ 2 : ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಕಂಪ್ಲೀಟ್ ಆಗೋದಕ್ಕೆ ಹತ್ತು ವರ್ಷಗಳನ್ನು ತೆಗೆದುಕೊಂಡಿದ್ದು , ಆನಂತ್ರ ಅರ್ಜೆಂಟಾಗಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಕುರಿತ ಸುದ್ದಿಗಳು ಜಾಲತಾಣದಲ್ಲಿ ಟೀಕೆ, ಟಿಪ್ಪಣಿಗಳಿಗೆ ಆಹಾರ ಆಗಿದ್ದೂ ಆಗಿತ್ತು. ಈಗ ಅಲ್ಲಿನ ಅಕ್ಕಪಕ್ಕದ ಸರ್ವಿಸ್ ರೋಡ್ ಗುಂಡಿ ಬಿದ್ದು ಗಬ್ಬೆದ್ದು ಹೋಗಿದೆ. ಇದನ್ನು ಅಣಕಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಸೆಳೆಯಲು ಒಂದಷ್ಟು ಸಮಾನ ಮನಸ್ಕ ಮಹಿಳೆಯರು ಸೇರಿ ರಸ್ತೆ ಮಧ್ಯೆ ಹೊಸ ರೀತಿಯಲ್ಲಿ ಓಣಂ ಆಚರಿಸಿದ್ದಾರೆ.



ಕೊರೊನಾದಿಂದಾಗಿ ಓಣಂ ಆಚರಣೆ ಮನೆಯ ಒಳಗೆ ಮಾತ್ರ ಸೀಮಿತ ಆಗಿರುವಾಗ ಈ ಮಹಿಳೆಯರು ಮಾತ್ರ ರೋಡಿಗೆ ಬಂದು ಪೂಕಳಂ ಹಾಕಿದ್ದಾರೆ. ಮಂಗಳೂರಿನ ಎಜುಕೇಶನಲ್ ಕನ್ಸಲ್ಟೆಂಟ್ ರಾಧಿಕಾ ಧೀಮಂತ್ ಸುವರ್ಣ, ನೆಲೋಫರ್, ಯುವಿಕಾ ಮತ್ತು ಸುಪ್ರೀತಾ ಹೀಗೊಂದು ಹೊಸ ಪ್ಲಾನ್ ಹಾಕಿದವರು. ರಸ್ತೆಯಲ್ಲಿ ಗುಂಡಿ ಬಿದ್ದ ಜಾಗದಲ್ಲಿ ಹೂಗಳನ್ನು ಹಾಕಿ, ಶೃಂಗರಿಸಿದ್ದಾರೆ. ಕೇರಳದ ಓಣಂ ಶೈಲಿಯ ಉಡುಗೆ ತೊಟ್ಟ ನಾರಿಯರು ಹೀಗೆ ರಸ್ತೆಯ ಮಧ್ಯೆ ನಿಂತು ಪೂಕಳಂ ಹಾಕಿದ್ದು, ಜಾಲತಾಣದಲ್ಲಿ ಮತ್ತೆ ಪಂಪ್ವೆಲ್ ಸದ್ದು ಮಾಡುವಂತಾಗಿದೆ.
ಚಿತ್ರ ಕೃಪೆ: ರವಿ ಪೊಸವಣಿಕೆ (ಟೈಮ್ಸ್ ಓಫ್ ಇಂಡಿಯಾ)
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm