ಬ್ರೇಕಿಂಗ್ ನ್ಯೂಸ್
01-09-20 02:46 pm Mangalore Reporter ಕರಾವಳಿ
ಮಂಗಳೂರು, ಸೆಪ್ಟೆಂಬರ್ 1: ಕೇಂದ್ರ ಸರಕಾರ ಅನ್ ಲಾಕ್ 4 ರಲ್ಲಿ ಅಂತಾರಾಜ್ಯ ಸಂಚಾರ ಸಂಪೂರ್ಣ ಮುಕ್ತಗೊಳಿಸಿದ್ದರೂ ಕೇರಳ ಸರಕಾರ ಮಾತ್ರ ಅದನ್ನು ಪಾಲನೆ ಮಾಡಿಲ್ಲ. ಹೀಗಾಗಿ ಕೇರಳ - ಕರ್ನಾಟಕದ ಹೆದ್ದಾರಿಗಳಲ್ಲಿ ಪೊಲೀಸರು ತಡೆ ಹಾಕಿರುವುದನ್ನು ವಿರೋಧಿಸಿ ಕಾಸರಗೋಡು ಜಿಲ್ಲಾ ಬಿಜೆಪಿಯಿಂದ ಗಡಿಭಾಗ ತಲಪಾಡಿಯಲ್ಲಿ ಪ್ರತಿಭಟನೆ ನಡೆಯಿತು.
ಕೇರಳ ಭಾಗದ ತುಮ್ಮಿನಾಡಿನಲ್ಲಿ ಹಾಕಿರುವ ಪೊಲೀಸರ ತಡೆಬೇಲಿಯನ್ನು ಉಲ್ಲಂಘಿಸಿ, ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದು ತಲಪಾಡಿ ಗಡಿಯಲ್ಲಿ ಧರಣಿ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯ ನಡುವಲ್ಲಿ ಧರಣಿ ಕುಳಿತ ಬಿಜೆಪಿ ಕಾರ್ಯಕರ್ತರು ಕೇರಳದ ಎಡರಂಗ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್, ಎಡಪಕ್ಷಗಳು ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು. ಮಂಜೇಶ್ವರದ ಶಾಸಕ ಮುಸ್ಲಿಂ ಲೀಗಿನ ಎಂ.ಸಿ ಕಮರುದ್ದೀನ್ ವಿರುದ್ಧ ಸರಕಾರಿ ಆಸ್ತಿ ದುರ್ಬಳಕೆ ಮಾಡಿದ್ದಕ್ಕೆ ವಂಚನೆ ಪ್ರಕರಣ ದಾಖಲಾಗಿದೆ. ಕಳ್ಳತನ ಆರೋಪ ಹೊತ್ತವರು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಾರೆಯೇ..? ಗಡಿಭಾಗದಲ್ಲಿ ಜನರು ಕಷ್ಟ ಪಡುತ್ತಿದ್ದರೆ ಸ್ಪಂದಿಸದೆ ಜನಪ್ರತಿನಿಧಿ ಯಾಕೆ ಬೇಕ್ರೀ ? ಇವರೆಲ್ಲ ಎಡಪಕ್ಷಗಳ ಜೊತೆ ಸೇರಿ ತಮ್ಮ ಕೇಸ್ ಮುಚ್ಚಿ ಹಾಕುವ ಯತ್ನದಲ್ಲಿದ್ದಾರೆ ಎಂದು ಶ್ರೀಕಾಂತ್ ಆರೋಪಿಸಿದರು.
ಉಣ್ಣಿತ್ತಾನ್, ಕಮರುದ್ದೀನ್ ಕಾಣೆಯಾಗಿದ್ದಾರೆಯೇ ?
ಇನ್ನು ಎಡಪಕ್ಷಗಳ ನಾಯಕರು ಕಳ್ಳದಾರಿಯಲ್ಲಿ ಚಿನ್ನಸಾಗಣೆ ಮಾಡಿ ಕಪ್ಪು ಹಣ ಸಂಗ್ರಹದಲ್ಲಿ ತೊಡಗಿದ್ದಾರೆ. ಲಾಕ್ ಡೌನ್ ಬಳಿಕ ಕೇಂದ್ರ ಸರಕಾರ ಎರಡು ಬಾರಿ ಅಂತಾರಾಜ್ಯ ಸಂಚಾರ ಮುಕ್ತಗೊಳಿಸಲು ಸೂಚನೆ ನೀಡಿದೆ. ಕೇರಳ ಹೈಕೋರ್ಟ್ ಕೂಡ ಅಂತಾರಾಜ್ಯ ಸಂಚಾರದ ನಿರ್ಬಂಧ ತೆರವಿಗೆ ಆದೇಶ ಮಾಡಿದೆ. ಆದರೆ ಕೇಂದ್ರ ಮತ್ತು ಹೈಕೋರ್ಟ್ ಆದೇಶ ಪಾಲಿಸದೆ ಕೇರಳ ಸರಕಾರ ಬಡ ಜನರ ಬವಣೆಯ ಜೊತೆ ಚೆಲ್ಲಾಟವಾಡುತ್ತಿದೆ. ಅಂದು ಲಾಕ್ ಡೌನ್ ಸಂದರ್ಭದಲ್ಲಿ ಗಡಿ ತೆರವು ಮಾಡಲು ಸುಪ್ರೀಂ ಕೋರ್ಟಿಗೆ ಹೋದ ಕಾಸರಗೋಡು ಸಂಸದರು ಈಗೆಲ್ಲಿದ್ದಾರೆ..? ಉಣ್ಣಿತ್ತಾನ್ ಈಗ ಯಾವ ಊರಿನಲ್ಲಿ ಅಡಗಿಕೊಂಡಿದ್ದಾರೆ ಎಂದು ಶ್ರೀಕಾಂತ್ ಪ್ರಶ್ನೆ ಮಾಡಿದ್ದಾರೆ.
ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ತಾಲೂಕಿನ ವಿವಿಧೆಢಯಿಂದ ಬಂದ ನೂರಾರು ಕಾರ್ಯಕರ್ತರು ಸೇರಿದ್ದರು.
ಇಂದಿನಿಂದ ಗಡಿ ತೆರವು ಸಾಧ್ಯತೆ
ಬಿಜೆಪಿ ಪ್ರತಿಭಟನೆ ಮತ್ತು ಕೇಂದ್ರ ಸರಕಾರದ ನಿರ್ದೇಶನ ಹಿನ್ನೆಲೆಯಲ್ಲಿ ಕಾಸರಗೋಡು - ಮಂಗಳೂರು ಗಡಿಭಾಗದ ಸಂಚಾರ ಮುಕ್ತಗೊಳ್ಳುವ ಸಾಧ್ಯತೆಯಿದೆ. ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ಬಿಜೆಪಿ ನಾಯಕರಿಗೆ ಸಂಚಾರ ಮುಕ್ತಗೊಳಿಸುವ ಭರವಸೆ ನೀಡಿದ್ದಾರೆ. ನಿತ್ಯ ಸಂಚರಿಸುವ ಮಂದಿಗೆ ಕ್ವಾರಂಟೈನ್ ಅಗತ್ಯವಿಲ್ಲ. ಅಲ್ಲದೆ, ಏಂಟಿ ಜೆನ್ ಟೆಸ್ಟ್ ಕೂಡ ಮಾಡಿಸಬೇಕಿಲ್ಲ. ನಾಳೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಇದ್ದು ಮುಕ್ತ ಸಂಚಾರದ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm