ಬ್ರೇಕಿಂಗ್ ನ್ಯೂಸ್
25-06-21 05:19 pm Mangalore Correspondent ಕರಾವಳಿ
ಮಂಗಳೂರು, ಜೂನ್ 25: ಕಾಂಗ್ರೆಸಿನವರು 2023ರಲ್ಲಿ ಅಧಿಕಾರಕ್ಕೆ ಬರ್ತೇವೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಸಿಎಂ ಯಾರು ಎನ್ನುವುದರ ಬಗ್ಗೆಯೇ ಈಗ ಅವರಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಒಂದ್ಕಡೆ ಶಿವಕುಮಾರ್, ಸಿದ್ದರಾಮಯ್ಯ, ಮತ್ತೊಂದ್ಕಡೆ ಪರಮೇಶ್ವರ್ ಗುಂಪು ಹೀಗೆ ಅವರಲ್ಲೇ ಮೂರಾಬಟ್ಟೆಯಾಗಿದೆ. ಅಧಿಕಾರಕ್ಕೆ ಬರುವುದು ನಿಶ್ಚಿತ ಇಲ್ಲ. ಆದ್ರೂ ಸಿಎಂ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ..
ಹೀಗೆಂದು ಕಾಂಗ್ರೆಸ್ ನಾಯಕರನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಡೀಲು ಭೂಮಿಯ ಕೃಷಿ ಮಾಡುವ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ಪಾಟೀಲ್, 2023ರಲ್ಲಿಯೂ ಬಿಜೆಪಿ ಪಕ್ಷವೇ ಅತ್ಯಂತ ಬಹುಮತದಿಂದ ಗೆದ್ದು ಬರಲಿದೆ. ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಆದರೆ, ಕಾಂಗ್ರೆಸಿಗರು ಈಗಲೇ ಸಿಎಂ ಸ್ಥಾನಕ್ಕೆ ಗುದ್ದಾಟ ಆರಂಭಿಸಿದ್ದಾರೆ ಎಂದರು.


ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡಲು ಮುಂದಾಗಿದ್ದಾರಲ್ಲಾ ಎಂಬ ಪ್ರಶ್ನೆಗೆ, ಜಾರಕಿಹೊಳಿಯವರು ಶಾಸಕರಿದ್ದಾರೆ. ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಅನಿವಾರ್ಯತೆ ಬಂದಿಲ್ಲ. ಖಾಸಗಿ ವಿಚಾರದಲ್ಲಿ ಅವರ ವಿರುದ್ಧ ಕೇಸು ಆಗಿದ್ದು, ನೈತಿಕ ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆಯಾಗುತ್ತಿದ್ದು, ಏನು ವರದಿ ಬರುತ್ತೋ ಅದರ ನೆಲೆಯಲ್ಲಿ ಸರಕಾರ ಕ್ರಮ ಕೈಗೊಳ್ಳುತ್ತೆ. ನಿರ್ದೋಷಿ ಅಂತ ಬಂದರೆ ಸರಕಾರ ಅವರನ್ನು ಗೌರವಿಸುವ ಕೆಲಸ ಮಾಡಲಿದೆ ಎಂದರು.
ಜಾರಕಿಹೊಳಿ ಈಗ ಮುಂಬೈಗೆ ಹೋಗಿದ್ದಾರಲ್ಲಾ.. ಹಿಂದೆಯೂ ಮುಂಬೈಗೆ ಹೋಗಿ ಸರಕಾರ ಬೀಳಿಸಿದ್ದರು ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಅಂದಿನ ಸಮಯದಲ್ಲಿ ಸರಕಾರವನ್ನು ಬೀಳಿಸುವುದೇ ಉದ್ದೇಶ ಆಗಿತ್ತು. ಅದಕ್ಕಾಗಿ ಮುಂಬೈಗೆ ಹೋಗಿದ್ದೆವು. ಅಂದಿನ ಸ್ಥಿತಿಗೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸ ಇದೆ. ಈಗ ಬಿಜೆಪಿ ಆಡಳಿತದಲ್ಲಿದೆ. ಪಕ್ಷದಲ್ಲಿ ಆ ರೀತಿಯ ಸನ್ನಿವೇಶ ಇಲ್ಲ. ಎಲ್ಲವೂ ಸರಿಯಾಗೇ ನಡೀತಿದೆ. ಅವರು ಖಾಸಗಿ ವಿಚಾರದಲ್ಲಿ ಮುಂಬೈಗೆ ಹೋಗಿದ್ದಾರೆ ಅಷ್ಟೇ.. ಸಿಡಿ ವಿಚಾರದಲ್ಲಿ ಸರಕಾರ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.
Video:
ಅಧಿಕಾರಕ್ಕೆ ಬರೋ ಮೊದ್ಲೇ ಕಾಂಗ್ರೆಸಿನಲ್ಲಿ ಸಿಎಂ ಸ್ಥಾನಕ್ಕೆ ಗುದ್ದಾಟ ಆಗ್ತಿದೆ ; ಬಿ.ಸಿ.ಪಾಟೀಲ್ ವ್ಯಂಗ್ಯ
Posted by Headline Karnataka on Friday, June 25, 2021
Mangalore Minister of State for Agriculture of Karnataka BC Patil slams Congress leaders to say they are fighting for the position even before power. There is no chance of Congress into power in Karnataka he said.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am