ಬ್ರೇಕಿಂಗ್ ನ್ಯೂಸ್
12-06-21 05:50 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ನಗರದ ಹೃದಯಭಾಗದಲ್ಲಿರುವ ನವಭಾರತ ವೃತ್ತವನ್ನು ನಿನ್ನೆ ರಾತ್ರಿ ಕೆಡವಿ ಹಾಕಲಾಗಿತ್ತು. ಅಲ್ಲಿ ಹೊಸತಾಗಿ ಸರ್ಕಲ್ ನಿರ್ಮಿಸಲಾಗುವುದೆಂದು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ, ಸರ್ಕಲ್ ನೆಲಸಮಗೊಳಿಸಿ ಗುಂಡಿ ಅಗೆಯುವಷ್ಟರಲ್ಲಿ ವೃತ್ತದ ಅಡಿಭಾಗದಲ್ಲಿ ಹಳೆಯ ಕಾಲದ ಬಾವಿ ಇರುವುದು ಪತ್ತೆಯಾಗಿದೆ.
ನವಭಾರತ ವೃತ್ತ ಅನ್ನುವುದು ಬ್ರಿಟಿಷರ ಕಾಲದಿಂದಲೂ ಹೆಸರು ಪಡೆದಿದ್ದ ಜಾಗ. ಯಾಕಂದ್ರೆ, ಈಗ ಓಷ್ಯನ್ ಪರ್ಲ್ ಹೊಟೇಲ್ ಇರುವ ಜಾಗದಲ್ಲಿ ಹಿಂದೆ ಸಿಪಿಸಿ ಬಿಲ್ಡಿಂಗ್ ಇತ್ತು. ಸಿಪಿಸಿ ಮೋಟರ್ಸ್ ಬಸ್ ಗಳು, ಗ್ಯಾರೇಜ್ ಅಲ್ಲಿದ್ದವು. 15 ವರ್ಷಗಳ ಹಿಂದೆ ಅದನ್ನು ಕೆಡವಿ ಓಷ್ಯನ್ ಪರ್ಲ್ ಹೊಟೇಲ್ ಕಟ್ಟಡ ನಿರ್ಮಿಸಲಾಗಿತ್ತು.
ಆದರೆ, ಅದೇ ಸಿಪಿಸಿ ಮೋಟರ್ಸ್ ಕಟ್ಟಡದಲ್ಲೇ ಹಿಂದೆ ಸ್ವಾತಂತ್ರ್ಯ ಕಾಲದಲ್ಲಿ ನವಭಾರತ ಪ್ರಿಂಟಿಂಗ್ ಪ್ರೆಸ್ ಇತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭೂಗತವಾಗಿ ಕರಪತ್ರಗಳನ್ನು ಮುದ್ರಿಸಿ, ಮಂಗಳೂರಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದೇ ನವಭಾರತ ಪ್ರಿಂಟಿಂಗ್ ಪ್ರೆಸ್. ಮಂಗಳೂರಿನ ಮಟ್ಟಿಗೆ ಅತ್ಯಂತ ಹಳೆಯ ಹೆಸರಾಗಿರುವ ನವಭಾರತ ಪ್ರಿಂಟಿಂಗ್ ಪ್ರೆಸ್ ಇದ್ದ ಕಾರಣಕ್ಕೆ ಆ ಜಾಗಕ್ಕೂ ನವಭಾರತ ವೃತ್ತ ಅನ್ನುವ ಹೆಸರು ಬಂದಿತ್ತು.
ಅತ್ತ ಡೊಂಗರಕೇರಿ ಇತ್ತ ವೆಂಕಟರಮಣ ದೇವಸ್ಥಾನದ ನಡುವೆ ಇರುವ ಕೇಂದ್ರ ಸ್ಥಾನವಾಗಿದ್ದ ನವಭಾರತ ವೃತ್ತ ಸ್ವಾತಂತ್ರ್ಯ ಚಳವಳಿಗೆ ನಾಂದಿ ಹಾಡಿತ್ತು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ ಗಾಂಧೀಜಿಯವರು ಮಂಗಳೂರು ಭೇಟಿ ನೀಡಿದ್ದಾಗ ಇದೇ ನವಭಾರತದ ವೃತ್ತದ ಮೂಲಕ ಕೆನರಾ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಇವೆಲ್ಲ ಹಿರಿಮೆ- ಗರಿಮೆಗಳಿಗೆ ಹೆಸರಾಗಿದ್ದ ನವಭಾರತ ವೃತ್ತಕ್ಕೆ ಇತ್ತೀಚೆಗೆ ಹತ್ತು ವರ್ಷಗಳ ಹಿಂದೆ ಗೋವಿಂದ ಪೈ ವೃತ್ತ ಎಂದು ನಾಮಕರಣ ಮಾಡಲಾಗಿತ್ತು.
ಆದರೆ, ಹಳೆ ಕಾಲದಿಂದಲೂ ಇದ್ದ ವೃತ್ತದ ಅಡಿಭಾಗದಲ್ಲಿ ಬಾವಿ ಇದ್ದ ಬಗ್ಗೆ ಈಗಿನ ಮಂದಿಗೆ ಯಾರಿಗೂ ಗೊತ್ತಿಲ್ಲ. ಅದರ ಇತಿಹಾಸದ ಬಗ್ಗೆಯೂ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಸಿಪಿಸಿ ಮೋಟರ್ಸ್, ನವಭಾರತ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದ ವಿ.ಎಸ್. ಕುಡ್ವಾ ಈಗ ಇಲ್ಲ. ಅವರ ಪೀಳಿಗೆಯವರಿಗೂ ಬಾವಿಯ ಬಗ್ಗೆ ಮಾಹಿತಿ ಇಲ್ಲ. ವೃತ್ತ ಇದ್ದ ಜಾಗದಲ್ಲಿ ಹಳೆ ಕಾಲದ ಬಾವಿ ಪತ್ತೆ ಆಗಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಅಂದಾಜು 150 ವರ್ಷಗಳ ಹಿಂದಿನ ಬಾವಿಯೇ ಆಗಿರುವ ಸಾಧ್ಯತೆಯಿದೆ.
ಇತ್ತೀಚೆಗೆ ಹಂಪನಕಟ್ಟೆಯ ವೃತ್ತದಲ್ಲಿಯೂ ರಸ್ತೆ ಅಗೆದ ಸಂದರ್ಭದಲ್ಲಿ ಪ್ರಾಚೀನ ಬಾವಿ ಪತ್ತೆಯಾಗಿತ್ತು. ಹಿಂದೆ ಹಂಪಣ್ಣ ಎಂಬವರು ಕುಳಿತುಕೊಂಡಿದ್ದ ಕಾರಣಕ್ಕೆ ಬಾವಿ ಕಟ್ಟೆಗೆ ಹಂಪಣ್ಣನ ಕಟ್ಟೆ ಎನ್ನುವ ಹೆಸರಾಗಿತ್ತು ಅನ್ನುವ ಹಿನ್ನೆಲೆ ಅದಕ್ಕಿತ್ತು. ಆ ಬಾವಿಯನ್ನೂ ಸ್ಮಾರ್ಟ್ ಸಿಟಿಯ ಕಾಂಕ್ರೀಟ್ ಕೆಲಸ ನಡೆಯುವಾಗ ಉಳಿಸಿಕೊಳ್ಳಲಾಗಿದೆ.
A well, which is said to be over a century old, was found at Navabharath Circle in Mangalore. Strangely, the well is in good condition even now. It is very deep, and some claim it to be aout 100 feet deep.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm