ಬ್ರೇಕಿಂಗ್ ನ್ಯೂಸ್
08-06-21 03:31 pm Mangalore Correspondent ಕರಾವಳಿ
ಉಳ್ಳಾಲ, ಜೂ.8: ಸೌದಿ ಅರೇಬಿಯಾದ ಜಿಝಾನ್ ನಲ್ಲಿ ಮಾ.19ರಂದು ತೊಕ್ಕೊಟ್ಟು ಮೂಲದ ರೊನಾಲ್ಡ್ ಡಿಸೋಜ ಮೃತಪಟ್ಟಿದ್ದು, ಬರೋಬ್ಬರಿ ಎರಡು ತಿಂಗಳ ನಂತರ ಮೃತರ ಕಳೇಬರವು ತಾಯ್ನಾಡಿಗೆ ಬಂದು ತಲುಪಿದ್ದು, ನಾಳೆ ಮೃತರ ಅಂತ್ಯಕ್ರಿಯೆ ನಡೆಯಲಿದೆ.
ಎರಡು ವರುಷದ ಹಿಂದಷ್ಟೆ ಸೌದಿ ಅರೇಬಿಯಾಕ್ಕೆ ಇಲೆಕ್ಟ್ರೀಷಿಯನ್ ವೃತ್ತಿಗೆ ತೆರಳಿದ್ದ ತೊಕ್ಕೊಟ್ಟು ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿ ಸೋಜ(53) ಅವರು ಮಾ.19 ರ ಸಂಜೆ ಅವರು ತಂಗಿದ್ದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಶುಕ್ರವಾರ ಸಂಜೆ ಪತ್ನಿ ಸರಿತಾ ಡಿಸೋಜರಲ್ಲಿ ವೀಡಿಯೋ ಕಾಲ್ ಸಂಭಾಷಣೆ ನಡೆಸಿ ನಂತರ ಮನೆ ಮಂದಿಯ ಸಂಪರ್ಕಕ್ಕೆ ಡಿಸೋಜ ಅವರು ಸಿಕ್ಕಿರಲಿಲ್ಲ. ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಜಿಝಾನ್ ನಲ್ಲಿ ಓಸೋಲ್ ಅಲ್ ಬನ್ನಾ ಎಂಬ ಕಂಪೆನಿಯಲ್ಲಿ ರೊನಾಲ್ಡ್ ಅವರು ಎಲೆಕ್ಟ್ರೀಶಿಯನ್ ಆಗಿ ದುಡಿಯುತ್ತಿದ್ದರು.
ಅಲ್ ಬನ್ನಾ ಕಂಪೆನಿಯವರು ಮೃತರ ಮನೆಯವರಿಗೆ ಸುದ್ದಿ ಮುಟ್ಟಿಸುವ ಸಲುವಾಗಿ ಯಾವುದೇ ರೀತಿಯ ಮಾಹಿತಿ ದೊರಕದೆ ಹೋದಾಗ ಕೊನೆಯ ಪ್ರಯತ್ನವಾಗಿ ಇವರನ್ನು ಸೌದಿ ಅರೇಬಿಯಾಗೆ ಕಳುಹಿಸಿದ ಮುಂಬೈನ ಏಜೆಂಟರಿಗೆ ವಿಷಯ ಮುಟ್ಟಿಸಿದರು. ಬಳಿಕ ತಮ್ಮ ಬಳಿ ಲಭ್ಯವಿರುವ ಮಂಗಳೂರಿನ ವಾಟ್ಸಾಪ್ ಗ್ರೂಪ್ ಗಳಲ್ಲಿ ಮೃತರ ಬಗ್ಗೆ ಮಾಹಿತಿ ಹರಿಯಬಿಟ್ಚಿದ್ದರು. ಆನಂತರ, ಅದರಂತೆ ಕಾರ್ಯ ಪ್ರವೃತ್ತರಾದ ಉಳ್ಳಾಲದ ಮೂಲದ ಸದಸ್ಯರನ್ನು ಒಳಗೊಂಡ ಇಂಡಿಯನ್ ಸೋಷಿಯಲ್ ಫೋರಂ (ISF) ಸಂಘಟನೆ ಜಿಝಾನ್ ದರ್ಬ್ ನಲ್ಲಿರುವ ಸಿದ್ದೀಕ್ ಉಳ್ಳಾಲ ಅವರ ಮೂಲಕ ಶವವನ್ನು ತರಿಸಲು ಕಾರ್ಯ ಪ್ರವೃತ್ತವಾಯಿತು.
ಇಂಡಿಯನ್ ಸೋಶಿಯಲ್ ಫೋರಂ (ISF) ಅಸೀರ್ ವಲಯ ಸಂಚಾಲಕರಾದ GK ಸಲೀಂ ಗುರುವಾಯನಕೆರೆ ಅವರನ್ನು ಮೃತರ ಮನೆಯವರು ಸಂಪರ್ಕಿಸಿ ಅಲ್ಲಿಂದ ಮೃತರ ಎಲ್ಲ ಮಾಹಿತಿಗಳನ್ನು ನೀಡಿದ್ದರು. ಮೃತರ ಪಾಸ್ಪೋರ್ಟ್ ಹಾಗೂ ಐಡಿ ದಾಖಲೆಗಳ ಮೂಲಕ ಹೊರಟ ISF ಜಿಝಾನ್ ಹಾಗೂ ಅಬು ಆರಿಸ್ ತಂಡವು ಜಿಝಾನ್ ಪ್ರಾಂತ್ಯದ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿ ಕೊನೆಯದಾಗಿ ಅಬು ಅರೀಸ್ ನ ಕಿಂಗ್ ಫಹಾದ್ ಅಸ್ಪತ್ರೆಯಲ್ಲಿ ಮೃತದೇಹ ಇರುವುದು ದೃಢಪಡಿಸಿದರು.
ಮೃತದೇಹವಿರುವ ಅಬು ಅರೀಸ್ ನ ಕಿಂಗ್ ಫಹಾದ್ ಅಸ್ಪತ್ರೆಗೆ ಹಾಗೂ ಅಲ್ ಬನ್ನಾನ್ ಕಂಪೆನಿಯ ಮುಖ್ಯಸ್ಥ ರೊಂದಿಗೆ ಭೇಟಿ ಮಾಡಿದ GK ಸಲೀಂ ಗುರುವಾಯನಕೆರೆ ಹಾಗೂ ಸಿದ್ದೀಕ್ ಉಳ್ಳಾಲ ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಲು ಬೇಕಾದ ಪೂರಕ ದಾಖಲೆಗಳನ್ನು ಅಲ್ ಬನ್ನಾ ಕಂಪೆನಿಗೆ ಒದಗಿಸಲು ಕೆಲಸ ಮಾಡಿದ್ದಾರೆ. ಅಲ್ಲದೆ, ಸೌದಿ ಅರೇಬಿಯಾದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲು ಇಂಡಿಯನ್ ಸೋಷಿಯಲ್ ಫಾರಂ (ISF) ಅಸೀರ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷರಾದ ಹನೀಫ್ ಮಂಜೇಶ್ವರ ಸಹಕರಿಸಿದ್ದರು. ಅಲ್ಲದೆ, ಮಂಗಳೂರು ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಅವರು ಮೃತರ ಕಳೇಬರವನ್ನು ತಾಯ್ನಾಡಿಗೆ ತರಿಸಲು ಶ್ರಮಪಟ್ಟಿದ್ದು ಎಲ್ಲರಿಗೂ ಮೃತ ರೊನಾಲ್ಡ್ ಕುಟುಂಬಸ್ಥರು ಕೃತಜ್ಞತೆ ಅರ್ಪಿಸಿದ್ದಾರೆ.
ಮೃತದೇಹವು ಇಂದು ಬೆಂಗಳೂರಿಗೆ ತಲುಪಿದ್ದು ಮಂಗಳೂರಿಗೆ ತರಿಸಿ ಶವಾಗಾರದಲ್ಲಿ ಇರಿಸಲಾಗುವುದು. ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 9 ಗಂಟೆಗೆ ಪಂಡಿತ್ ಹೌಸ್ನ ನಿತ್ಯಾಧರ್ ಚರ್ಚ್ ನಲ್ಲಿ ನಡೆಯಲಿರುವುದು. ಮೃತ ರೊನಾಲ್ಡ್ ಡಿಸೋಜ ಅವರು ಪತ್ನಿ ಸರಿತಾ ಡಿಸೋಜ ಮಕ್ಕಳಾದ ರಿಯೋನ್ (16) ಮತ್ತು ರೋವಿನ್ (14) ಅವರನ್ನ ಅಗಲಿದ್ದಾರೆ.
Read: ಸೌದಿ ಅರೇಬಿಯಾದಲ್ಲಿ ತೊಕ್ಕೊಟ್ಟು ಮೂಲದ ವ್ಯಕ್ತಿ ಸಾವು ; ಮೂರು ದಿನದ ಬಳಿಕ ಮನೆಯವರಿಗೆ ಮಾಹಿತಿ ! ಶವ ತರಲು ಪರದಾಟ !
Ronald Dsouza from Thokottu, Mangalore who was working in Saudi Arabia died of a Heart Attack two months ago and now his mortal remains have reached Mangaluru Airport. The final rites will be carried in Thokottu.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm