ಬ್ರೇಕಿಂಗ್ ನ್ಯೂಸ್
01-06-21 05:23 pm Mangalore Correspondent ಕರಾವಳಿ
ಮಂಗಳೂರು, ಜೂನ್ 1: ಕೋವಿಡ್ ಲಸಿಕೆ ಕೇವಲ ಶ್ರೀಮಂತರಿಗೆ ಮಾತ್ರವಲ್ಲ, ಬಡವರಿಗೂ ಸಿಗಬೇಕು. ಹಳ್ಳಿಭಾಗದವರಿಗೂ ಸಿಗಬೇಕು. ಇದಕ್ಕಾಗಿ ನಮಗೂ ಲಸಿಕೆ ಬೇಕು ಎಂಬ ಬಗ್ಗೆ ಆಂದೋಲನ ಆರಂಭಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶದ ಜನತೆಗೆ, ಬಡವರಿಗೆ ಕೋವಿಡ್ ಲಸಿಕೆ ದೊರೆಯುತ್ತಿಲ್ಲ. ಬಿಜೆಪಿ ಸರಕಾರ ಕೇವಲ ಶ್ರೀಮಂತರಿಗೆ ಮಾತ್ರ ಲಸಿಕೆ ಪೂರೈಸುವ ನೀತಿಯನ್ನು ಅನುಸರಿಸುತ್ತಿದೆ. 18ರಿಂದ 44ರ ವಯಸ್ಸಿನವರಿಗೆ ಲಸಿಕೆ ನೀಡುವುದನ್ನು ಸರಕಾರ ಸ್ಥಗಿತ ಮಾಡಿದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರದಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಸರಕಾರದ ಜನವಿರೋಧಿ ಲಸಿಕೆ ನೀತಿಯ ವಿರುದ್ಧ ನಮಗೂ ಲಸಿಕೆ ಬೇಕು ಎಂಬ ಆಂದೋಲನವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ನೀಡಲಾಗುತ್ತಿರುವ ಲಸಿಕೆ ನೀತಿಯಲ್ಲಿ ಸರಕಾರ ಎಡವಿದೆ.
ಕೇಂದ್ರ ಸರ್ಕಾರ ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಬೇರೆ ಬೇರೆ ದರ ನಿಗದಿ ಪಡಿಸಲು ಅವಕಾಶ ನೀಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಖರೀದಿಸಲು ಮೂರು ವಿಧದ ದರಗಳನ್ನು ವಿಧಿಸಿದೆ. ಕೇಂದ್ರ ಸರಕಾರಕ್ಕೆ 150, ರಾಜ್ಯ ಸರಕಾರಕ್ಕೆ 400 ರೂ. (ಕೊವಿಶೀಲ್ದ್) ದರಗಳನ್ನು ನಿಗದಿ ಮಾಡಿರುವುದು ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಬಡವರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರಿಗೆ ಲಸಿಕೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಕೊರೊನಾ ಎರಡನೇ ಅಲೆಯು ಸಂಕಷ್ಟವನ್ನು ಉಂಟು ಮಾಡಲು ನರೇಂದ್ರ ಮೋದಿ ಸರಕಾರದ ವೈಫಲ್ಯ ಕಾರಣವಾಗಿದೆ. ಸಕಾಲದಲ್ಲಿ ಲಸಿಕೆ ಉತ್ಪಾದನೆಗೆ ಉತ್ತೇಜನ ನೀಡದೆ ಸಾವಿರಾರು ಮಂದಿ ಜೀವ ಕಳಕೊಂಡಿದ್ದಾರೆ. ಇದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎಂದವರು ಪ್ರಶ್ನಿಸಿದರು.
ದೇಶದಲ್ಲಿ ಪೊಲಿಯೋ, ಕಾಲರಾ ಇನ್ನಿತರ ರೋಗ ಎದುರಾದ ವೇಳೆ ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಉಚಿತವಾಗಿ ಪೂರೈಸಿದೆ. ಆದರೆ, ನರೇಂದ್ರ ಮೋದಿ ಸರ್ಕಾರದ ದೋಷಪೂರಿತ ನೀತಿಯಿಂದಾಗಿ ಕೇಂದ್ರ- ರಾಜ್ಯ ಮತ್ತು ಖಾಸಗಿ ಹೀಗೆ ದುಬಾರಿ ಹಣಕೊಟ್ಟು ಲಸಿಕೆ ಹಾಕಿಸಿಕೊಳ್ಳುವ ಕೆಟ್ಟ ವ್ಯವಸ್ಥೆ ಬಂದಿದೆ. ಇದರಿಂದ ದೇಶದ ಕೋಟ್ಯಾಂತರ ಜನರಿಗೆ ಅವರ ಹಕ್ಕಿನ ಲಸಿಕೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಲುಕ್ಮಾನ್ ಬಂಟ್ವಾಳ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ವ್ಯಾಕ್ಸಿನೇಷನ್ ವಿಚಾರಲ್ಲಿ ಕೇಂದ್ರೀಕೃತವಾಗಿ ಕ್ರಮ ಕೈಗೊಳ್ಳುವ ಬದಲು ನಿಯಮಗಳನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಿತು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ದರಕ್ಕೆ ವ್ಯಾಕ್ಸಿನೇಷನ್ ಸಿಗುವಂತಾಗಿದ್ದು, ಬ್ಲ್ಯಾಕ್ ಮಾರ್ಕೆಟ್ ಗೆ ಅವಕಾಶ ಕಲ್ಪಿಸಿದಂತಾಗಿದೆ. ಎರಡನೇ ಅಲೆಯಲ್ಲಿ ಗಂಭೀರ ಪರಿಣಾಮ ಎದುರಿಸಲು ಯುಎಸ್ ಸರ್ಕಾರ ಲಸಿಕೆಗಾಗಿ 40 ಕೋಟಿ ಡಾಲರ್ ಮೀಸಲಿಟ್ಟರೆ, ಭಾರತ ಸರ್ಕಾರ ನಯಾಪೈಸೆ ಮೀಸಲಿಡಲಿಲ್ಲ. ಅಲ್ಲದೆ ವೈಜ್ಞಾನಿಕ ಮನೋಭಾವನೆ ಮತ್ತು ಸಕ್ರಿಯವಾಗಿ ಕೆಲಸ ಮಾಡುವಲ್ಲಿ ವೈಫಲ್ಯ ಕಂಡಿದೆ. ಇದರ ಪರಿಣಾಮವಾಗಿ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ರಾಜಕೀಯ ಪಕ್ಷವಾಗಿ ಯುವಕಾಂಗ್ರೆಸ್ ನಿರಾಶ್ರಿತರು, ನೊಂದವರಿಗೆ ಸಹಾಯಹಸ್ತ ಚಾಚಿದೆ. ಯುವಕಾಂಗ್ರೆಸ್ ಸಹಾಯವಾಣಿಗೆ 1912 ಕರೆಗಳು ಬಂದಿದ್ದು ಅವುಗಳಲ್ಲಿ ಶೇ.90 ಕರೆಗಳಿಗೆ ಸ್ಪಂದಿಸಲಾಗಿದೆ. 202 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರೆ, 99 ಡಿಸ್ಚಾರ್ಜ್, ಆಕ್ಸಿಜನ್ 42, ಔಷಧ 153, ಇಬ್ಬರಿಗೆ ಪ್ಲಾಸ್ಮಾ, 130 ಮಂದಿಗೆ ವ್ಯಾಕ್ಸಿನೇಷನ್, 204 ಆಂಬ್ಯುಲೆನ್ಸ್, 94 ಯೂನಿಟ್ ರಕ್ತದ ವ್ಯವಸ್ಥೆ ಮಾಡಿದೆ. ಜಿಲ್ಲಾದ್ಯಂತ ಬೀದಿಬದಿ ಇರುವ ನಿರಾಶ್ರಿತರ ಸಹಿತ 13,730 ಮಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. 148 ರೋಗಿಗಳಿಗೆ ರಕ್ತದ ವ್ಯವಸ್ಥೆ ಮಾಡಲಾಗಿದ್ದು, ಇವೆಲ್ಲದರ ದಾಖಲೆಗಳು ತಮ್ಮಲ್ಲಿವೆ ಎಂದು ತಿಳಿಸಿದರು.
ರಾಜ್ಯ ಪ್ರ.ಕಾರ್ಯದರ್ಶಿಗಳಾದ ಸರ್ಫರಾಜ್ ನವಾಝ್, ಆಶಿತ್ ಪಿರೇರಾ, ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಾಹುಲ್ ಹಮೀದ್, ಜಿಲ್ಲಾ ಇಂಟಕ್ ಪ್ರ.ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, NSUI ರಾಷ್ಟ್ರೀಯ ಸಂಯೋಜಕ ಅನ್ವೀತ್ ಕಟೀಲ್, ನವಾಲ್ ಉಪ್ಪಿನಂಗಡಿ, ಎಂ ತೌಫೀಕ್, ದೀಕ್ಷಿತ್ ಅತ್ತಾವರ್, ರೋಷನ್ ರೈ, ಪ್ರಸಾದ್ ಗಾಣಿಗ, ಹಸನ್ ಡೀಲ್ಸ್, ಮೀನಾ ತೆಲ್ಲಿಸ್, ಇಸ್ಮಾಯಿಲ್ ಸಿದ್ದಿಕ್, ಅರ್ಷದ್ ಮುಲ್ಕಿ, ಫಯಾಜ್ ಅಮೇಮಾರ್, ಅಲ್ಫಾಝ್, ಶಾಫಿ ಕೈಕಂಬ ಮತ್ತು ಇಮ್ರಾನ್ ಶಾಂತಿಅಂಗಡಿ ಉಪಸ್ಥಿತರಿದ್ದರು.
Mangalore Poor have got no vaccines Youth Congress calls for Andolan
25-07-25 01:22 pm
HK News Desk
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
Lokayukta Raid, IAS Vasanthi: ಐಎಎಸ್ ಅಧಿಕಾರಿ ಮ...
24-07-25 07:29 pm
24-07-25 09:06 pm
HK News Desk
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
24-07-25 10:26 pm
Mangalore Correspondent
Dharmasthala Case, Investigation, Advocate,...
24-07-25 05:27 pm
Mangalore Indiana Hospital: ಮಂಗಳೂರಿನಲ್ಲಿ ಪ್ರಥ...
24-07-25 11:30 am
ಕರಾವಳಿ ಜಿಲ್ಲೆಗಳಿಗೆ ಜುಲೈ 26ರ ವರೆಗೆ ಭಾರೀ ಮಳೆಯ ರ...
23-07-25 10:49 pm
Mangalore Extortion Jail, Sudheer Kumar Reddy...
23-07-25 10:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am