ಬ್ರೇಕಿಂಗ್ ನ್ಯೂಸ್
03-02-21 05:30 pm Mangalore Correspondent ಕರಾವಳಿ
ಮಂಗಳೂರು, ಫೆ.3: ಖಾಸಗಿ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಆರೋಪ, ಮಾಧ್ಯಮದ ಮುಂದೆಯೇ ಆರೋಪಿಗೆ ಕಪಾಳ ಮಾಡಿದ್ದ ಮೋಕ್ಷ ಪ್ರಕರಣದಲ್ಲಿ ಈಗ ಮತ್ತೊಬ್ಬ ಎಂಟ್ರಿಯಾಗಿದ್ದಾನೆ. ಮಾಧ್ಯಮ ಮತ್ತು ಪೊಲೀಸರ ಮುಂದೆ ಆರೋಪಿತ ವ್ಯಕ್ತಿಗೆ ಹೊಡೆದಿದ್ದು ಮಾನವ ಹಕ್ಕು ಉಲ್ಲಂಘನೆಯೆಂದು ಪೊಲೀಸ್ ಕಮಿಷನರ್ ಸೇರಿ ಪೊಲೀಸರ ವಿರುದ್ಧ ಮಂಗಳೂರಿನ ಜಿಲ್ಲಾ ಕೋರ್ಟಿಗೆ ದೂರು ಸಲ್ಲಿಸಿದ್ದಾರೆ.
ಮೂಲತಃ ಸುರತ್ಕಲ್ ಚೊಕ್ಕಬೆಟ್ಟು ನಿವಾಸಿಯಾಗಿರುವ, ಸದ್ಯ ದುಬೈನಲ್ಲಿ ಉದ್ಯೋಗದಲ್ಲಿ ಇಂಜಿನಿಯರ್ ಆಗಿರುವ ಜೊಹಾನ್ ಸಿಕ್ವೇರಾ, ಸದ್ರಿ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ವಿಚಾರವನ್ನು ಟೀಕಿಸಿ ಮತ್ತು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಮೈಲ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರುಷರ ಮೇಲಿನ ಹಿಂಸೆ ಪ್ರಕರಣಗಳಲ್ಲಿ ಅವರ ಪರವಾಗಿ ವಾದಿಸುವ ಮೆನ್ಸ್ ರೈಟ್ಸ್ ಆಕ್ಟಿವಿಸ್ಟ್ ಎನ್ನುವ ಸಂಘಟನೆಯ ಸದಸ್ಯನಾಗಿರುವ ಜೊಹಾನ್ ಸಿಕ್ವೇರಾ ಕಾನೂನನ್ನು ಅರೆದು ಕುಡಿದಿರುವ ರೀತಿ ಮಾತನಾಡುತ್ತಾರೆ. ಬಿಇ ಮತ್ತು ಕಾನೂನು ಓದಿರುವ ಜಾನ್, ಸ್ವತಃ ವಕೀಲನಲ್ಲದಿದ್ದರೂ, ವಕೀಲರಿಗಿಂತ ಹೆಚ್ಚು ಪ್ರಭಾವಯುತವಾಗಿ ಕಾನೂನಿನ ಬಗ್ಗೆ ವಾದ ಮಾಡುತ್ತಾರೆ.
ಈ ಬಗ್ಗೆ ಹೆಡ್ ಲೈನ್ ಕರ್ನಾಟಕದ ಜೊತೆ ಮಾತನಾಡಿದ ಜೊಹಾನ್, ಪೊಲೀಸ್ ಕಸ್ಟಡಿಯಲ್ಲಿರುವಾಗ ಆರೋಪಿಯ ಮೇಲೆ ಹಲ್ಲೆ ನಡೆಸುವುದು ಮಾನವ ಹಕ್ಕಿನ ಉಲ್ಲಂಘನೆ. ಅಷ್ಟೇ ಅಲ್ಲ, ಈ ಅಪರಾಧಕ್ಕೆ ಕಾರಣರಾದವರ ಮೇಲೆ ಏಳು ವರ್ಷದ ವರೆಗೆ ಶಿಕ್ಷೆ ಅಥವಾ ಅದಕ್ಕೆ ತಕ್ಕುದಾದ ದಂಡ ವಿಧಿಸಲು ಅವಕಾಶವಿದೆ. ದಂಡ ಸಂಹಿತೆ 41 ಎ ಸಿಆರ್ ಪಿಸಿ ಪ್ರಕಾರ, ಆರೋಪಿಯನ್ನು ಬಂಧಿಸುವುದು ಅಗತ್ಯವಿದ್ದರೆ ಮಾತ್ರ ಮತ್ತು ಅದರ ಬಗ್ಗೆ ವಿಚಾರಣೆಗಷ್ಟೇ ಬಂಧಿಸಿಡಬಹುದು. ಆದರೆ, ಆರೋಪಿ ಹುಸೇನ್ ಪ್ರಕರಣದಲ್ಲಿ ಈ ಕಾನೂನನ್ನು ಉಲ್ಲಂಘಿಸಲಾಗಿದೆ ಎನ್ನುತ್ತಾರೆ.
ಮಂಗಳೂರು ಪೊಲೀಸ್ ಕಮಿಷನರನ್ನು ಕೋರ್ಟಿಗೆ ಕರೆಸಿ ವಿಚಾರಣೆ ನಡೆಸಬೇಕು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹಲ್ಲೆ ಮಾಡಿದ್ದ ಯುವತಿ ವಿರುದ್ಧ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶರಿಗೆ ಮೈಲ್ ಮೂಲಕ ದೂರು ಸಲ್ಲಿಸಿರುವ ಜಾನ್ ಸಿಕ್ವೇರಾ, ಮೈಲ್ ಮಾಡಿದರೂ ದೂರನ್ನು ಪರಿಗಣಿಸಬೇಕು ಎಂದು ಕಾನೂನು ಇದೆ. ಸೆಕ್ಷನ್ 154 ಪ್ರಕಾರ ಅಪರಾಧ ಕುರಿತ ಯಾವುದೇ ದೂರನ್ನು ಮೇಲ್ ಮಾಡಿದ್ರೂ ದಾಖಲು ಮಾಡಬೇಕೆಂದಿದೆ. ದೇಶದ ಬೇರೆ ಕಡೆಗಳಲ್ಲಿ ಮೇಲ್ ದೂರನ್ನು ಸ್ವೀಕರಿಸುತ್ತಾರೆ ಎಂದಿದ್ದಾರೆ.
ಸ್ವತಃ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹಿಂಸೆ ಅನುಭವಿಸಿದ್ದ ಜಾನ್ ಸಿಕ್ವೇರಾ ವಿರುದ್ಧ 2015ರಲ್ಲಿ ಉರ್ವಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಿಜೈ ಫ್ಲಾಟ್ ನಲ್ಲಿದ್ದಾಗ ಮಹಿಳೆಯೊಬ್ಬರು ಉದ್ದೇಶಪೂರ್ವಕ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದರು. ಉರ್ವಾದಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ರವೀಶ್ ನಾಯಕ್ ನನ್ನನ್ನು ಒಂದು ದಿನ ಬಂಧಿಸಿ ಸ್ಟೇಶನ್ನಲ್ಲಿ ಇಟ್ಟಿದ್ದರು. ನಾನು ಬಳಿಕ ಕೋರ್ಟಿಗೆ ಅಪೀಲ್ ಮಾಡಿ ಸ್ವತಃ ವಾದ ಮಾಡಿ ಕೇಸು ಗೆದ್ದಿದ್ದೆ. 2015ರಲ್ಲಿ ಎರಡು ಬಾರಿ ಮತ್ತು 2016ರಲ್ಲಿ ಇಂಥದ್ದೇ ಕೇಸನ್ನು ಅದೇ ಮಹಿಳೆ ನನ್ನ ಮೇಲೆ ನೀಡಿದ್ದರು. ಲೈಂಗಿಕ ಕಿರುಕುಳದ ಕಾನೂನನ್ನು ದುರ್ಬಳಕೆ ಮಾಡಿ ಜೈಲಿಗಟ್ಟಲು ಪ್ರಯತ್ನಿಸಿದ್ದರು. ಆದರೆ, ಕೋರ್ಟಿನಲ್ಲಿ ವಾದಿಸಿ ಮೂರೇ ತಿಂಗಳಲ್ಲಿ ಕೇಸ್ ಗೆದ್ದಿದ್ದೆ ಎಂದು ಹೇಳಿದರು. ಮೈಲ್ ಮಾಡಿ, ನ್ಯಾಯಾಧೀಶರ ಗಮನ ಸೆಳೆದಿರುವ ಜಾನ್ ಸಿಕ್ವೇರಾ, ಕೇಸು ಸ್ವೀಕೃತವಾದರೆ ವಾದಿಸಲು ಸ್ವತಃ ಕೋರ್ಟಿಗೆ ಬರುತ್ತೇನೆ ಎಂದಿದ್ದಾರೆ.
ಜ.14ರಂದು ಖಾಸಗಿ ಬಸ್ಸಿನಲ್ಲಿ ನಡೆದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಾನ್, ಪ್ರಕರಣದಲ್ಲಿ ಬಸ್ಸನ್ನು ಜಪ್ತಿ ಮಾಡಿದ್ದು ತಪ್ಪು. ಅಲ್ಲಿ ರೇಪ್ ಆಗಿಲ್ಲ. ಮರ್ಡರ್ ಆಗಿಲ್ಲ. ಕಿರುಕುಳ ಆರೋಪ ಮಾಡಿದಷ್ಟಕ್ಕೇ ಬಸ್ ಜಪ್ತಿ ಮಾಡಲು ಬರಲ್ಲ ಎಂದಿದ್ದಾರೆ. ಬಸ್ಸಿನಲ್ಲಿ ಕಿರುಕುಳಕ್ಕೆ ಒಳಗಾಗಿದ್ದ ಯುವತಿ, ಆರೋಪಿತನ ಫೋಟೋ ಹಾಕಿ ಇನ್ ಸ್ಟಾ ಗ್ರಾಮಿನಲ್ಲಿ ದೂರು ಹೇಳಿಕೊಂಡಿದ್ದಳು. ಪೊಲೀಸರು ಸ್ವಯಂ ಆಗಿ ಎಚ್ಚತ್ತುಕೊಂಡು ಆರೋಪಿ ಕುಂಬಳೆಯ ಪೆರ್ಲ ನಿವಾಸಿ ಹುಸೇನನ್ನು ಬಂಧಿಸಿದ್ದರು. ಆದರೆ, ಆರೋಪಿಯನ್ನು ಮಾಧ್ಯಮ ಗೋಷ್ಠಿ ಸಂದರ್ಭ ಕರೆಸಿದ್ದ ವೇಳೆ ಅಲ್ಲಿಯೇ ಕುಳಿತಿದ್ದ ಯುವತಿ ಆತನ ಕಪಾಳಕ್ಕೆ ಪಂಚ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು.
ಖಾಸಗಿ ಬಸ್ಸಿನಲ್ಲಿ ಕಿಡಿಗೇಡಿಯ ಕಿರುಕುಳ ; ಮುಸ್ಲಿಂ ಯುವತಿಯ ಪೋಸ್ಟ್ ವೈರಲ್ !!
ಬಸ್ಸಿನಲ್ಲಿ ಕಿರುಕುಳ ನೀಡಿದ್ದ ಆರೋಪಿ ಸೆರೆ ; ಪೊಲೀಸರೆದುರಲ್ಲೇ ಕಪಾಳಕ್ಕೆ ಬಿಗಿದ ಯುವತಿ !!
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm