ಬ್ರೇಕಿಂಗ್ ನ್ಯೂಸ್
31-01-21 12:28 pm Mangaluru Reporter ಕರಾವಳಿ
ಕಾರ್ಕಳ, ಜ.31: ಕಂಬಳದ ಅಂಗಣದಲ್ಲಿ ಕೋಣದ ಜೊತೆ ಓಡುವುದು ಸಾಮಾನ್ಯರಿಂದ ಸಾಧ್ಯವಾಗದ ಮಾತು. ಅದಕ್ಕೆ ಅಂಥದ್ದೇ ತರಬೇತಿ ಮುಖ್ಯವಾಗತ್ತೆ. ಆದರೆ, ಇಲ್ಲೊಬ್ಬ ಒಂಬತ್ತರ ಹರೆಯದ ಪೋರ ಮನೆಯ ತೋಟದಲ್ಲಿ ಕೋಣದ ಜೊತೆ ಕಂಬಳ ಓಟಗಾರನ ರೀತಿಯಲ್ಲೇ ಓಡಿದ್ದು ಹುಬ್ಬೇರುವಂತೆ ಮಾಡಿದ್ದಾನೆ.
ಸಾಧಿಸಿದರೆ ಸಬ್ಬಲ್ ನುಂಗಬಹುದು ಎನ್ನುವ ಮಾತು ತುಳುವರಲ್ಲಿದೆ. ಹಾಗೆಯೇ ಈ ಹುಡುಗ ದಿನವೂ ಕೋಣದ ಜೊತೆ ಓಡುತ್ತಲೇ ತಾನೂ ಒಬ್ಬ ಕಂಬಳ ಓಟಗಾರನಾಗಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಹುಡುಗ ಕೋಣದ ಬಾಲ ಹಿಡಿದು ಓಡುವ ವಿಡಿಯೋ ಸಖತ್ ವೈರಲ್ ಆಗಿದೆ. ಅತ್ತ ಕಂಬಳ ಶುರುವಾಗುತ್ತಿದ್ದಂತೆ ಬಾಲಕನೊಬ್ಬ ಕೋಣದ ಜೊತೆ ಓಡಿ ಜನಮನ ಸೆಳೆದಿದ್ದಾನೆ.


ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್ಬೆಟ್ಟುವಿನ ಸುಹಾಸ್ ಪ್ರಭು- ಅಮೃತ ದಂಪತಿ ಪುತ್ರ ಅತಿಶ್ ಪ್ರಭು(9) ಈ ಪೋರ ಪ್ರತಿಭೆ. ಕಾರ್ಕಳದ ಎಸ್ವಿಟಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿರುವ ಅತಿಶ್ ಕಂಬಳ, ಕಂಬಳದಲ್ಲಿ ಸಾಧಕ ಓಟಗಾರರನ್ನು ನೋಡುತ್ತಲೇ ಕೋಣದ ಹಿಂದೆ ಓಡುವುದನ್ನು ಕಲಿತಿದ್ದಾನೆ.
ಅತಿಶ್ ಮನೆಯಲ್ಲಿ 3 ಕೋಣಗಳಿದ್ದು, ಇವನ್ನು ದಿನವೂ ಸ್ನಾನ ಮಾಡಿಸಲು ಈತನೇ ಕರೆದೊಯ್ಯುತ್ತಾನೆ. ಹಾಗೆಯೇ ಮನೆಗೆ ವಾಪಸ್ ಬರುವಾಗ ಅತಿಶ್ ಕೋಣಗಳ ಜೊತೆ ಓಡುವುದನ್ನು ರೂಢಿಸಿದ್ದಾನೆ. ಕಂಬಳ ಓಟಗಾರರ ರೀತಿಯಲ್ಲೇ ಆರ್ಭಟಿಸುತ್ತಾ ಕೋಣಕ್ಕೆ ಹಿಂದಿನಿಂದ ಬೆತ್ತದಿಂದ ಪೆಟ್ಟು ಕೊಡುತ್ತಲೇ ಬಾಲ ಹಿಡಿದು ಓಡುವ ಹುಡುಗನ ಶೈಲಿ ಬೆಳೆವ ಸಿರಿಯ ಮೊಳಕೆಯ ರೀತಿ ಕಾಣುತ್ತಾನೆ.
A nine-year-old boy has attracted the attention of many by determinedly racing behind the buffalos that are trained for participation in Kambalas.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 08:49 pm
HK News Desk
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm