ಬ್ರೇಕಿಂಗ್ ನ್ಯೂಸ್
22-01-21 03:54 pm Mangalore Correspondent ಕರಾವಳಿ
ಮಂಗಳೂರು, ಜ.22: ನಗರದ ಫಾರ್ಮಸಿ ಕಾಲೇಜಿನಲ್ಲಿ ನಡೆದ ರ್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 9 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ವಳಚ್ಚಿಲ್ ನಲ್ಲಿರುವ ಶ್ರೀನಿವಾಸ್ ಕಾಲೇಜಿನ ಮೊದಲ ವರ್ಷದ ಬಿ- ಫಾರ್ಮಾ ಕಲಿಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ರ್ಯಾಗಿಂಗ್ ಗೆ ಒಳಗಾಗಿದ್ದು, ಅದೇ ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿದ್ದಾರೆ. ಆರೋಪಿಗಳೆಲ್ಲರೂ ಕೇರಳದ ಮಲಪ್ಪುರಂ, ಕಣ್ಣೂರು ಮೂಲದ ವಿದ್ಯಾರ್ಥಿಗಳಾಗಿದ್ದು ಐಪಿಸಿ ಮತ್ತು ಕರ್ನಾಟಕ ಎಜುಕೇಶನ್ ಏಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ತೃತೀಯ ಬಿ ಫಾರ್ಮಾದ ಜಿಷ್ಣು(20), ಶ್ರೀಕಾಂತ ಪಿ.ವಿ. (20), ಅಶ್ವಂತ್ (20), ಸಯಂತ್ (22), ಅಭಿರತ್ ರಾಜೀವ್ (21), ದ್ವಿತೀಯ ಬಿ ಫಾರ್ಮಾದ ರಾಹುಲ್ ಪಿ. (21), ಜಿಷ್ಣು (20), ಮುಕ್ತಾರ್ ಅಲಿ (19), ಮುಹಮ್ಮದ್ ರಝೀಮ್ ಕೆ. (20) ಬಂಧಿತರು. ಕಿರಿಯ ವಿದ್ಯಾರ್ಥಿ ಜ.10ರಂದು ತರಗತಿ ಮುಗಿಸಿ ಮಧ್ಯಾಹ್ನ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ವೇಳೆ, ಹಿರಿಯ ವಿದ್ಯಾರ್ಥಿಗಳು ಅಡ್ಡಗಟ್ಟಿ ತಲೆಕೂದಲು ಹಾಗೂ ಮೀಸೆ ತೆಗೆಸಿ ಬರುವಂತೆ ಗದರಿಸಿದ್ದಲ್ಲದೆ, ಓರ್ವ ಕೆನ್ನೆಗೆ ಬಾರಿಸಿದ್ದಾನೆ. ನಂತರ ಜ. 12ರಂದು ಅಪರಾಹ್ನ ಅದೇ ವಿದ್ಯಾರ್ಥಿಗಳು ಮೀಸೆ ಹಾಗೂ ತಲೆ ಕೂದಲು ತೆಗೆಯದೆ ಬಂದ ಕಾರಣ ಬೈದು, ಮೀಸೆ ತಲೆ ಕೂದಲು ತೆಗೆಯದಿದ್ದರೆ ತಾವೇ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು. ಆನಂತರ ಮೀಸೆ ಮತ್ತು ಕೂದಲನ್ನು ತೆಗೆದು ಹೋಗಿದ್ದ ವಿದ್ಯಾರ್ಥಿಯಲ್ಲಿ ಎಲ್ಲ ಹಿರಿಯ ವಿದ್ಯಾರ್ಥಿಗಳ ಹೆಸರು ಬರೆದು ತರುವಂತೆ ಹೊಸ ಬೇಡಿಕೆ ಇಟ್ಟಿದ್ದಾರೆ. ಮರುದಿನ ಹೇಗೂ ಹೆಸರನ್ನೂ ಬರೆದು ತಂದಿದ್ದು ಹೆಸರಿನ ಜೊತೆಗೆ ಅಣ್ಣ ಅಂತ ಬರೆದಿಲ್ಲ ಅಂತ ಕಿರಿಕ್ ಮಾಡಿದ್ದರು. ಇದರ ನಡುವೆ, ದಾರಿಯಲ್ಲಿ ಸಿಕ್ಕಾಗೆಲ್ಲ ಕೀಟಲೆ ಮಾಡಿದ್ದರಿಂದ ಬೇಸತ್ತ ವಿದ್ಯಾರ್ಥಿ ತನ್ನ ಮನೆಯವರಿಗೆ ಹೇಳಿ, ಪೊಲೀಸ್ ದೂರು ನೀಡಿದ್ದ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರ್ಯಾಗಿಂಗ್ ಒಳಗಾಗಿರುವ ವಿದ್ಯಾರ್ಥಿಯನ್ನು ಸುಮಾರು 2 ಲಕ್ಷ ರೂ. ಶುಲ್ಕ ಪಾವತಿಸಿ ಕಾಲೇಜು ಹಾಸ್ಟೆಲ್ ಸೇರಿಸಲಾಗಿತ್ತು. ಅದನ್ನು ಹಿಂಪಡೆಯಲು ಆತನ ಪೋಷಕರು ಡಿಸಿಪಿಗೆ ತಿಳಿಸಿದ್ದು ಸಂಬಂಧಪಟ್ಟ ಕಾಲೇಜಿನ ಆಡಳಿತ ಶುಲ್ಕ ಹಿಂತಿರುಗಿಸಲು ಒಪ್ಪಿಗೆ ನೀಡಿದೆ. ಈತನ ಜೊತೆಗೆ ಇನ್ನೊಬ್ಬ ಕಿರಿಯ ವಿದ್ಯಾರ್ಥಿಯೂ ಕಿರುಕುಳ ಅನುಭವಿಸಿದ್ದು ಅನುಚಿತವಾಗಿ ನಡೆಸಿಕೊಂಡು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಮಿಷನರ್ ಹೇಳಿದರು.
ರ್ಯಾಗಿಂಗ್ ಬಗ್ಗೆ ಆಯಾ ಸಂಸ್ಥೆಗಳೇ ಹೊಣೆ
ಮಂಗಳೂರಿಗೆ ದೇಶ- ವಿದೇಶದ ವಿದ್ಯಾರ್ಥಿಗಳು ಬರುತ್ತಿದ್ದು ಶಿಕ್ಷಣ ಕಾಶಿಯೆಂದೇ ಗುರುತಿಸಲ್ಪಟ್ಟಿದೆ. ಇಂಥ ಜಾಗದಲ್ಲಿ ಕಾಲೇಜು ವ್ಯಾಪ್ತಿಯಲ್ಲಿ ರ್ಯಾಗಿಂಗ್ ನಡೆಯದಂತೆ ಆಯಾ ಶಿಕ್ಷಣ ಸಂಸ್ಥೆಗಳೇ ಎಚ್ಚರಿಕೆ ವಹಿಸಬೇಕು. ತಮ್ಮ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಅವರ ಸುರಕ್ಷತೆ ಬಗ್ಗೆ ಖಾತರಿಪಡಿಸಬೇಕು. ರ್ಯಾಗಿಂಗ್ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳು ಯಾವುದೇ ರೀತಿ ಅಸಹಾಯಕತೆ ಪ್ರದರ್ಶಿಸಿದರೆ, ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದರು.

ಈ ರೀತಿಯ ರ್ಯಾಗಿಂಗ್ ಪ್ರಕರಣಗಳು ನಡೆದರೆ ಅದಕ್ಕೆ ಸಂಸ್ಥೆಗಳೂ ಜವಾಬ್ದಾರಿಯಾಗುತ್ತವೆ. ಕಿರಿಯ ವಿದ್ಯಾರ್ಥಿಗಳು ಕಿರುಕುಳ ನಡೆದಾಗ ದೂರು ನೀಡಲು ಹಿಂಜರಿಯುತ್ತಾರೆ. ಹಾಗಾಗಿ ತಮ್ಮ ಸಂಸ್ಥೆಗೆ ದಾಖಲಾದ ವಿದ್ಯಾರ್ಥಿಗಳ ಸುರಕ್ಷತೆ ಕಾಯ್ದುಕೊಳ್ಳುವುದು ಆಯಾ ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎಂದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.
ರ್ಯಾಗಿಂಗ್ ; ಕಾಲೇಜನ್ನೇ ತೊರೆದ ಬಿ ಫಾರ್ಮಾ ವಿದ್ಯಾರ್ಥಿ, ಫೀಸ್ ಹಿಂತಿರುಗಿಸುವಂತೆ ಪೊಲೀಸ್ ದೂರು
(1/2)Mangalore City Police has arrested 9 individuals who were involved in ragging 1st year student at Srinivas College of Pharmacy.Accused booked under Karnataka Education Act and IPC. pic.twitter.com/yPmjAnlI75
— N. Shashi Kumar CP Mangaluru City (@compolmlr) January 22, 2021
In connection to ragging Nine students of Srinivas College of Valachil have been arrested by Kankandy Rural Police Station.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm