ಬ್ರೇಕಿಂಗ್ ನ್ಯೂಸ್
19-01-21 05:31 pm Mangalore Correspondent ಕರಾವಳಿ
ಮಂಗಳೂರು, ಜ.19: ಈ ಹೆಣ್ಮಗಳಿಗೆ ಸಣ್ಣಂದಿನಿಂದಲೇ ಬೆಕ್ಕು, ನಾಯಿಗಳಂದ್ರೆ ಪಂಚಪ್ರಾಣ. ಬೀದಿಯಲ್ಲಿ ಹೋಗುವ ನಾಯಿಗಳೇ ಆದ್ರೂ ಅದನ್ನು ಮುದ್ದಿಸುತ್ತಾಳೆ. ಆಹಾರ ಕೊಡುತ್ತಾಳೆ. ಕೈಕಾಲು ಊನವಾಗಿದ್ದರೆ, ಆರೋಗ್ಯ ಸರಿ ಇಲ್ಲದಿದ್ದರೆ ತಾನೇ ಹೋಗಿ ಔಷಧಿ ನೀಡುತ್ತಾಳೆ. ಹೌದು.. ನಲ್ವತ್ತಕ್ಕೂ ಹೆಚ್ಚು ಬೆಕ್ಕು, ನಾಯಿಗಳ ಪಾಲಿಗೆ ಆಕೆಯೀಗ ಮುದ್ದಿನ ಅಮ್ಮನಾಗಿದ್ದಾಳೆ.

ಸುರತ್ಕಲ್ ಗೋವಿಂದಾಸ್ ಕಾಲೇಜಿನ ಬಳಿ ಮನೆಯನ್ನು ಹೊಂದಿರುವ ಸಾಕ್ಷಿ ಸುನಿಲ್ ಮೂಲತಃ ಕಾರ್ಕಳದವರು. ಸುನಿಲ್ ಅವರನ್ನು ಮದುವೆಯಾದ ಬಳಿಕ ಸುರತ್ಕಲ್ ನಲ್ಲಿ ಬಂದು ನೆಲೆಸಿದ್ದಾರೆ. ಐದು ವರ್ಷಗಳ ಹಿಂದೆ ಮದುವೆಯಾಗಿದ್ದರಂತೆ. ಮದುವೆಗೂ ಮೊದಲೇ ಆಕೆಗೆ ಬೆಕ್ಕು, ನಾಯಿಗಳನ್ನು ಸಾಕುವುದು, ಬೀದಿ ನಾಯಿಗಳಿಗೆ ಆಹಾರ ಕೊಡುವುದು ಹವ್ಯಾಸ ಆಗಿತ್ತು. ಮದುವೆಯಾದ ಬಳಿಕವೂ ತಮ್ಮ ಮನೆಯನ್ನು ಬೆಕ್ಕು, ನಾಯಿಗಳು ಜೊತೆಯಾಗಿ ಬದುಕುವಂತೆ ರೂಪಿಸಿಕೊಂಡಿದ್ದಾರೆ. 12 ವರ್ಷಗಳಿಂದ ನಿರಂತರವಾಗಿ ಹೀಗೆ ಬೆಕ್ಕು, ನಾಯಿಗಳ ಜೊತೆಗೇ ಬದುಕುತ್ತಿದ್ದೇನೆ ಎನ್ನುತ್ತಾರೆ, ಸಾಕ್ಷಿ.


ಮನುಷ್ಯರಾದರೆ ಏನೇ ತೊಂದರೆಗಳಾದರೆ ಬೈತಾರೆ. ಜಗಳ ಮಾಡುತ್ತಾರೆ. ಆದರೆ, ನಾಯಿ, ಬೆಕ್ಕುಗಳು ಹಾಗಲ್ಲ. ನಾವು ಮಾಡಿದ ಉಪಕಾರವನ್ನು ಯಾವತ್ತೂ ಮರೆಯುವುದಿಲ್ಲ. ಅವಕ್ಕೆ ನಾವಲ್ಲದೆ ಬೇರೆ ಯಾರು ಆಹಾರ ಕೊಡಬೇಕು. ಹಾಗಾಗಿ ಬೀದಿಯಲ್ಲಿ ಯಾವುದೇ ತೊಂದರೆಗೆ ಒಳಗಾಗಿ ಬಿದ್ದುಕೊಂಡ ನಾಯಿ, ಬೆಕ್ಕುಗಳ ಬಗ್ಗೆ ತಿಳಿದರೆ, ಅಲ್ಲೇ ಹೋಗಿ ಔಷಧಿ ಕೊಟ್ಟು ಸಾಕುತ್ತೇನೆ ಎಂದು ಹೇಳುತ್ತಾರೆ.
ಸದ್ಯಕ್ಕೆ ನಲ್ವತ್ತಕ್ಕೂ ಹೆಚ್ಚು ಬೆಕ್ಕು, ನಾಯಿಗಳು ತನ್ನ ಮನೆಯಲ್ಲೇ ಇದೆ. ಅದಲ್ಲದೆ, ಪ್ರತಿ ದಿನ ಸುರತ್ಕಲ್ ಪರಿಸರದಲ್ಲಿ ಒಂದಷ್ಟು ಬೀದಿನಾಯಿಗಳಿಗೂ ಆಹಾರ ಕೊಡುತ್ತೇನೆ. ಕುಚ್ಚಲಕ್ಕಿಯ ಅನ್ನ ಮತ್ತು ಇತರೇ ಒಣ ಉತ್ಪನ್ನಗಳನ್ನು ತಿನ್ನಲು ಕೊಡುತ್ತೇನೆ. ತಿಂಗಳಿಗೆ ನಲ್ವತ್ತು ಕೇಜಿಯಷ್ಟು ಪೆಟ್ ಫುಡ್ ಕೂಡ ಖಾಲಿಯಾಗುತ್ತದೆ. ಖರ್ಚು ಲೆಕ್ಕ ಹಾಕಿದರೆ, ಸುಮಾರು 12 ಸಾವಿರ ತಿಂಗಳಿಗೆ ಬೇಕಾಗುತ್ತದೆ ಎನ್ನುತ್ತಾರೆ.


ಸಿಟಿಯಲ್ಲಿರುವ ಕೆಲವು ಮಂದಿ ಬೆಕ್ಕು, ನಾಯಿಗಳಂದ್ರೆ ತುಂಬ ಇಷ್ಟ ಪಡುತ್ತಾರೆ. ಅವನ್ನು ಮನೆಯೊಳಗೇ ಸಾಕುತ್ತಾರೆ. ಆದರೆ, ಒಂದೆರಡು ಅಷ್ಟೇ ಇರುತ್ತದೆ. ಆದರೆ, ಸಾಕ್ಷಿ ಅವರದ್ದು ಇದು ಹವ್ಯಾಸ ಅಷ್ಟೇ ಅಲ್ಲ ಕಾಳಜಿಯಾಗಿದೆ. ಬೀದಿ ನಾಯಿಗಳು ಗಾಯಗೊಂಡಿರುವ ಬಗ್ಗೆ ಹೇಳಿದರೆ, ಅದು ಇದ್ದಲ್ಲಿಗೇ ಬಂದು ಔಷಧಿ ಕೊಡುತ್ತಿದ್ದಾರೆ. ಬಾಯಿ ಬಾರದ ಪ್ರಾಣಿಗಳ ವೇದನೆಯನ್ನು ಅರಿತು ಸಲಹುತ್ತಾರೆ. ನಿಜಕ್ಕೂ ಸಾಕ್ಷಿ ಸುನಿಲ್ ಅವರ ಮಾನವೀಯ ಕಾಳಜಿಯ ಸೇವೆ ಅಪರೂಪದಲ್ಲಿ ಅಪರೂಪ ಎನ್ನಬೇಕಷ್ಟೆ.
Photo Gallery: ಆಕೆಯೀಗ ಬೀದಿಯಲ್ಲಿ ಅಲೆಯುವ ಬೆಕ್ಕು, ನಾಯಿಗಳ ಪಾಲಿಗೆ ಮುದ್ದಿನ ಅಮ್ಮ..!!
Sakshi Sunil Kamath from Surathkal, Mangalore turns as an angel as she provides shelter to stray dogs and kittens at her home since 12 long years maintaining them with her own expense.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm