ಬ್ರೇಕಿಂಗ್ ನ್ಯೂಸ್
04-11-26 10:12 pm HK News Desk ಕರಾವಳಿ
ಮಂಗಳೂರು, ನ.4: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಏಕ ಭೂ ನಿರ್ವಹಣಾ ವ್ಯವಸ್ಥೆ (ಯುಎಲ್ಎಂಎಸ್) ಹೆಸರಲ್ಲಿ ಜನಸಾಮಾನ್ಯರಿಗೆ ತೊಂದರೆ ಮಾಡುತ್ತಿದ್ದು, ಎಲ್ಲಿಯೂ ಇಲ್ಲದ ಟೆಲಿಸ್ಕೋಪಿಕ್ ನಿಯಮವು ಜನರಿಗೆ ಕರಾಳವಾಗಿ ಪರಿಣಮಿಸಿದೆ. ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್ ಸೆಟ್ ಬ್ಯಾಕ್ ಎನ್ನುವ ನಿಯಮ ತಂದಿರುವುದು ಅಕ್ಷಮ್ಯ ಮತ್ತು ಸಾಮಾನ್ಯ ಜನರಿಗೆ ಎಸಗಿರುವ ದ್ರೋಹ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೃಷ್ಣ ಪಾಲೆಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನರು 3 ಸೆಂಟ್, 5 ಸೆಂಟ್ ನಲ್ಲಿ ಮನೆ ಕಟ್ಟಬೇಕಿದ್ದರೆ ಸುತ್ತಲೂ ಒಂದೂವರೆ ಮೀಟರ್ ಸ್ಥಳ ಬಿಡಬೇಕೆಂಬ ನಿಯಮ ಮಾಡಲಾಗಿದೆ. ಆದರೆ 70 ಮೀಟರ್ ಎತ್ತರದ ಏಳು ಅಂತಸ್ತಿನ ಕಟ್ಟಡಗಳಿಗೆ ಈ ನಿಮಯ ಸಡಿಲಿಕೆ ಮಾಡಿದ್ದು ಒಂದು ಮೀಟರ್ ಗೆ ಕಡಿತ ಮಾಡಲಾಗಿದೆ. ಕಟ್ಟಡದಲ್ಲಿ ಏನಾದರೂ ಅನಾಹುತಗಳಾದರೆ ಅಗ್ನಿಶಾಮಕ ವಾಹನ ಹೋಗುವುದು ಬಿಡಿ, ಒಂದು ಏಣಿ ಇಡುವುದಕ್ಕೂ ಸಾಧ್ಯವಾಗಲ್ಲ ಎಂದು ಆಕ್ಷೇಪಿಸಿದರು.
15 ವರ್ಷಗಳ ಹಿಂದೆ ನಾನು ಸಚಿವನಾಗಿದ್ದಾಗ ಮಂಗಳೂರು ನಗರದ ಅಭವೃದ್ಧಿ ದೃಷ್ಟಿಯಿಂದ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ತರಲಾಗಿತ್ತು. 2021ರಲ್ಲಿ ಈ ಯೋಜನೆಯನ್ನು ಸರ್ಕಾರ ಸ್ವೀಕರಿಸಿದ್ದರೂ, ಇನ್ನೂ ಜಾರಿಗೆ ತರಲಾಗಿಲ್ಲ. ಈಗ ಅದನ್ನೇ ತಿದ್ದುಪಡಿ ಮಾಡಿ ನಿಯಮಗಳನ್ನು ಜನಸಾಮಾನ್ಯರ ಮೇಲೆ ಹೇರಲಾಗಿದೆ. ಇದರಿಂದಾಗಿ ಕಟ್ಟಡ ಪರವಾನಗಿ ನಿಯಮಗಳು, ಲೇಔಟ್ ಅನುಮೋದನೆಯಲ್ಲಿ ತೊಂದರೆಗಳಾಗಿದ್ದು ಇದನ್ನು ರಾಜ್ಯ ಸರ್ಕಾರ ಮರು ಪರಿಶೀಲಿಸಬೇಕು. ಇಲ್ಲದಿದ್ದರೆ ಬಿಜೆಪಿ ಕಡೆಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮಸೀದಿ, ದೇವಸ್ಥಾನ, ಚರ್ಚ್ ಗಳಿಗೆ 12 ಅಡಿ ಅಗಲದ ರಸ್ತೆಯನ್ನು ಈಗ ಸಡಿಲಿಸಿದ್ದು, ರಸ್ತೆಗಾಗಿ ಜಾಗ ಬಿಟ್ಟುಕೊಟ್ಟ ಜನರಿಗೆ ಅನ್ಯಾಯ ಮಾಡಲಾಗಿದೆ. ನಗರದಲ್ಲಿ ಆರು ಮೀಟರ್ ಮತ್ತು 7.5 ಮೀಟರ್ ರಸ್ತೆಗಳಿಗೆ ಸಂಬಂಧಿಸಿದ ಟಿಡಿಆರ್ ನಿಯಮ ರದ್ದು ಮಾಡಿದ್ದು ಏಕೆ ಎಂದು ಪಾಲೆಮಾರ್ ಪ್ರಶ್ನಿಸಿದರು. ಯುಎಲ್ ಎಂಎಸ್ ನಿಯಮಗಳಿಂದಾಗಿ ಸಣ್ಣ ಮನೆಗಳಿಗೆ ಪರವಾನಗಿ ವಿಳಂಬವಾದರೆ, ದೊಡ್ಡ ಕಟ್ಟಡಗಳಿಗೆ ಶೀಘ್ರವಾಗಿ ಪರವಾನಗಿ ಸಿಗುವಂತೆ ಮಾಡಿದ್ದು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ. ಇ-ಖಾತಾ, ರೆವೆನ್ಯೂ ಇಲಾಖೆ, ಮುಡಾ ಮತ್ತು ಮಹಾನಗರ ಪಾಲಿಕೆಯ ನಡುವಿನ ಸಮನ್ವಯದ ಕೊರತೆಯಿಂದಾಗಿ ಕಟ್ಟಡ ಪರವಾನಗಿ ಪಡೆಯಲು ನಾಗರಿಕರು ಅಲೆಯುವಂತಾಗಿದೆ ಎಂದೂ ಪಾಲೆಮಾರ್ ಹೇಳಿದರು.
ಇದರಿಂದಾಗಿ ಬಿಲ್ಡರ್ ಗಳಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯ ಎಂಬಂತಾಗಿದೆ. ಹಿಂದಿನ ಸಿಡಿಪಿ ಯೋಜನೆಯಲ್ಲಿ ಜನಪರ ನಿಯಮಗಳಿದ್ದು ಅದನ್ನೀಗ ಕರಾಳ ಎನ್ನುವಂತೆ ಮಾಡಲಾಗಿದೆ. ಮಂಗಳಾ ಕಾರ್ನಿಶ್ ರಸ್ತೆಯನ್ನೂ ಅವೈಜ್ಞಾನಿಕ ರೂಪದಲ್ಲಿ ಜಾರಿಗೊಳಿಸುತ್ತಿದೆ ಎಂದು ದೂರಿದರು. ಸುದ್ದಿಗೋಷ್ಟಿಯಲ್ಲಿ ಇಂಜಿನಿಯರ್ ಸಂಘದ ಅಧ್ಯಕ್ಷ ಯೋಗೀಶ್ ಪೈ ಇದ್ದರು.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
04-11-26 10:30 pm
HK News Desk
ಸಿಡಿಪಿ ಹೆಸರಲ್ಲಿ ಮುಡಾದಿಂದ ಕರಾಳ ನಿಯಮ, ಸಾಮಾನ್ಯ ಮ...
04-11-26 10:12 pm
ಸೌಜನ್ಯಾ ಪ್ರಕರಣ ; 14 ವರ್ಷಗಳ ಬಳಿಕ ಹಳೆಯ ವೈದ್ಯಕೀಯ...
04-11-26 02:45 pm
ರಸ್ತೆ ಗುಂಡಿ ಬಿದ್ದಿದ್ದಕ್ಕೆ ಜನಪ್ರತಿನಿಧಿಗಳು, ಪೊಲ...
04-11-26 02:41 pm
ಎಸ್ಐಆರ್ ಹೆಸರಲ್ಲಿ ಕಾಂಗ್ರೆಸಿನಿಂದ ದೇಶದಲ್ಲಿ ಅರಾ...
03-11-26 10:51 pm
04-11-26 10:00 am
HK News Staffer
ಸ್ಟಿಂಗ್ ಆಪರೇಷನ್ ಬಗ್ಗೆ ರಾಹುಲ್ ಗಾಂಧಿಗೆ ದೂರು ಹೇಳ...
03-11-26 10:44 am
15 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಖತರ್ನಾಕ್...
02-11-26 09:48 pm
ಬೈಕಂಪಾಡಿಯಲ್ಲಿ ಲಾರಿ- ಸ್ಕೂಟರ್ ಡಿಕ್ಕಿ ; ಸವಾರ ತೀವ...
02-11-26 09:44 pm
ಕಾಪುವಿನ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ದಾಳಿ: ಕಟ್ಟಡ...
02-11-26 11:31 am