ಬ್ರೇಕಿಂಗ್ ನ್ಯೂಸ್
10-01-21 02:35 pm Mangalore Correspondent ಕರಾವಳಿ
ಮಂಗಳೂರು, ಜ.10: ಒಂದು ವರ್ಷದ ಹಿಂದೆ ಭಾರತೀಯ ಕೋಸ್ಟ್ ಗಾರ್ಡ್ ಪಡೆ ಭಾರತೀಯ ಜಲಗಡಿಯನ್ನು ಉಲ್ಲಂಘಿಸಿ ಲಕ್ಷದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಿದ್ದ ಇರಾನ್ ಮೂಲದ ಮೀನುಗಾರರನ್ನು ಕರ್ನಾಟಕ ಹೈಕೋರ್ಟ್ ಬಿಡುಗಡೆ ಮಾಡಿದೆ.
2019ರ ಅ.21ರಂದು ಲಕ್ಷದ್ವೀಪದ ಬಳಿ ಎರಡು ಬೋಟ್ ಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಇರಾನ್ ಮೂಲದ 15 ಮೀನುಗಾರರನ್ನು ಕೋಸ್ಟ್ ಗಾರ್ಡ್ ಪಡೆ ಬಂಧಿಸಿತ್ತು. ಬಳಿಕ ಅಕ್ಟೋಬರ್ 30ರಂದು ಅವರನ್ನು ಮಂಗಳೂರಿನ ಎನ್ಎಂಪಿಟಿ ಬಂದರಿಗೆ ತರಲಾಗಿದ್ದು, 31ರಂದು ಕರಾವಳಿ ಕಾವಲು ಪಡೆಯ ಪಣಂಬೂರು ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಲಾಗಿತ್ತು.

ಅವಿಧಿ ಮತ್ತು ಇಶಾನ್ ಎಂಬ ಹೆಸರಿನ ಎರಡು ಬೋಟ್ ಗಳಲ್ಲಿ ಭಾರತೀಯ ಜಲಗಡಿಯ ಒಳಕ್ಕೆ ಬಂದು ಮೀನುಗಾರಿಕೆ ನಡೆಸುತ್ತಿದ್ದರು. ಈ ಭಾಗದಲ್ಲಿ ಮೀನುಗಾರಿಕೆ ನಡೆಸಲು ಅವರಿಗೆ ಯಾವುದೇ ಪರವಾನಗಿ ಹೊಂದಿರಲಿಲ್ಲ. ನೌಕಾಪಡೆಯ ಅಧಿಕಾರಿಗಳು ವಿಚಾರಣೆ ನಡೆಸುವುದಕ್ಕೆ ಅಡ್ಡಿಪಡಿಸಿದ್ದರು. ಇದರಿಂದ 15 ಮಂದಿಯನ್ನು ವಶಕ್ಕೆ ಪಡೆದು ಕರೆತರಲಾಗಿತ್ತು ಎಂದು ಕೋಸ್ಟ್ ಗಾರ್ಡ್ ಡೆಪ್ಯುಟಿ ಕಮಾಂಡೆಂಟ್ ಕುಲದೀಪ್ ಶರ್ಮಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಕರಾವಳಿ ಕಾವಲು ಪಡೆಯ ಇನ್ ಸ್ಪೆಕ್ಟರ್ ಗಂಗೀರೆಡ್ಡಿ ಮಂಗಳೂರಿನ 3ನೇ ಜೆಎಂಎಫ್ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
15 ಮಂದಿ ಆರೋಪಿ ಮೀನುಗಾರರನ್ನು ಮಂಗಳೂರು ಜೈಲಿನಲ್ಲಿ ಇರಿಸಲಾಗಿತ್ತು. ಆನಂತರ ಕೊರೊನಾ ಸಂದರ್ಭದಲ್ಲಿ ಒತ್ತಟ್ಟಿಗೆ ಇರಬಾರದೆಂಬ ನೆಲೆಯಲ್ಲಿ ಬೆಂಗಳೂರು ಜೈಲಿಗೆ ಅವರನ್ನು ಸ್ಥಳಾಂತರ ಮಾಡಲಾಗಿತ್ತು. ಈ ನಡುವೆ, ಇರಾನ್ ಸರಕಾರದ ದೆಹಲಿಯಲ್ಲಿರುವ ರಾಯಭಾರ ಕಚೇರಿ, ಮಂಗಳೂರಿನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ವಿಚಾರದಲ್ಲಿ ದೆಹಲಿ ವಕೀಲರನ್ನು ಸಂಪರ್ಕ ಮಾಡಿದೆ. ದೆಹಲಿ ವಕೀಲರು, ಕರ್ನಾಟಕ ಹೈಕೋರ್ಟ್ ವಕೀಲರಾಗಿರುವ ಮಂಗಳೂರು ಮೂಲದ ಖೇತನ್ ಬಂಗೇರ ಮತ್ತು ಅಭಿಷೇಕ್ ಮಾರ್ಲ ಅವರನ್ನು ಸಂಪರ್ಕಿಸಿದ್ದು, ಕೇಸ್ ಪಡೆಯಲು ಸೂಚಿಸಿದ್ದಾರೆ.

ಕೇಸ್ ಬಗ್ಗೆ ಅಧ್ಯಯನ ನಡೆಸಿದ ವಕೀಲರಿಬ್ಬರು, ಮಂಗಳೂರಿನ ಜೆಎಂಎಫ್ ಕೋರ್ಟಿನಲ್ಲಿ ಪ್ರಕರಣ ಇರುವಾಗಲೇ ಹೈಕೋರ್ಟಿನಲ್ಲಿ ಅಪೀಲು ಮಾಡಿದ್ದಾರೆ. ಕಳೆದ ಸೆಪ್ಟಂಬರ್ 5ರಂದು ಹೈಕೋರ್ಟಿಗೆ ಅರ್ಜಿ ಹಾಕಿದ್ದು, ಅಮಾಯಕ ವಿದೇಶಿ ಮೀನುಗಾರರ ಕ್ರಿಮಿನಲ್ ಕೇಸ್ ರದ್ದುಪಡಿಸುವಂತೆ ಕೇಳಿಕೊಂಡಿದ್ದಾರೆ. ವಿಚಾರಣೆ ಕೈಗೆತ್ತಿಕೊಂಡ ಉಚ್ಚ ನ್ಯಾಯಾಲಯ, ವಕೀಲರ ವಾದವನ್ನು ಆಲಿಸಿ ಕ್ರಿಮಿನಲ್ ಪ್ರಕರಣ ರದ್ದುಪಡಿಸಿ ಡಿ.22ರಂದು ತೀರ್ಪು ನೀಡಿದೆ.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಇರಾನ್ ಮೀನುಗಾರರು ಅಂತಾರಾಷ್ಟ್ರೀಯ ಜಲಗಡಿಯನ್ನು ಪ್ರವೇಶ ಮಾಡಿದ್ದರು. ಇದು ಗಂಭೀರ ಅಪರಾಧವಲ್ಲ. ಅಂತಾರಾಷ್ಟ್ರೀಯ ಜಲಗಡಿಯಲ್ಲಿ ಇಂಥ ವಿಚಾರಗಳು ಸಾಮಾನ್ಯ. ಹೀಗಿರುವಾಗ ತಾವು ಮಾಡದ ತಪ್ಪಿಗಾಗಿ ಒಂದು ವರ್ಷದಿಂದ ಜೈಲಿನಲ್ಲಿ ಇರುವ ಮೀನುಗಾರರನ್ನು ಬಿಡುಗಡೆ ಮಾಡಬೇಕೆಂದು ವಾದ ಮಂಡಿಸಿದ್ದಾರೆ. ವಕೀಲರ ವಾದ ಆಲಿಸಿದ ಹೈಕೋರ್ಟ್, ಮೀನುಗಾರರನ್ನು ಬಿಡುಗಡೆ ಮಾಡಲು ಆದೇಶಿಸಿದೆ. 15 ಮಂದಿಗೆ ವೀಸಾ ಇನ್ನಿತರ ದಾಖಲೆ ಪತ್ರಗಳನ್ನು ಇರಾನ್ ದೇಶದಿಂದ ತರಿಸಲಾಗುತ್ತಿದ್ದು, ಅಲ್ಲೀ ವರೆಗೂ ಮೀನುಗಾರರನ್ನು ಫಾರಿನ್ ಡಿಟೆನ್ಶನ್ ಸೆಂಟರ್ ನಲ್ಲಿ ಇಡಲಾಗುವುದು ಎಂದು ವಕೀಲ ಖೇತನ್ ಬಂಗೇರ ಮಾಹಿತಿ ನೀಡಿದ್ದಾರೆ.
Mangalore coast guard acquits Iran fishermens out of Jail who were arrested in 2019.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
22-12-25 12:26 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
22-12-25 01:06 pm
Udupi Correspondent
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm