ಬ್ರೇಕಿಂಗ್ ನ್ಯೂಸ್
10-01-21 11:23 am Mangalore Correspondent ಕರಾವಳಿ
ಮಂಗಳೂರು, ಜ.10: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತೆ ಸಾಮಾನ್ಯ ಜನರೊಂದಿಗೆ ಬೆರೆತು ಕ್ರಿಕೆಟ್ ಆಡಿದ್ದಾರೆ. ಉಳ್ಳಾಲಕ್ಕೆ ಭೇಟಿ ನೀಡಿದ್ದ ವೇಳೆ, ಅಲ್ಲಿನ ಕೋಡಿಯಲ್ಲಿ ಯುವಕರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ, ಮೈದಾನಕ್ಕಿಳಿದ ಕಮಿಷನರ್ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಅಂದರೆ ಜಿಲ್ಲೆಯ ಮಟ್ಟಿಗೆ ಸುಪ್ರೀಂ ಪವರ್. ಐಪಿಎಸ್ ಅಧಿಕಾರಿಗಳಾಗಿರುವುದರಿಂದ ಜನಸಾಮಾನ್ಯರ ಹತ್ತಿರ ಹೋಗದೆ ತಾವು ವಿಭಿನ್ನ ಅನ್ನುವುದನ್ನು ತೋರಿಸಿಕೊಳ್ಳುತ್ತಾರೆ. ಗತ್ತು ಗೈರತ್ತನ್ನು ಉಳಿಸಿಕೊಂಡು ಸುತ್ತಮುತ್ತ ಪೊಲೀಸರ ಕಾವಲನ್ನು ಇಟ್ಟುಕೊಂಡೇ ರಸ್ತೆಗೆ ಇಳಿಯುತ್ತಾರೆ. ಅಂಥದ್ರಲ್ಲಿ ಮಂಗಳೂರಿಗೆ ಬಂದಿರುವ ನೂತನ ಕಮಿಷನರ್ ಎನ್. ಶಶಿಕುಮಾರ್ ತುಂಬ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ. ಸಾಮಾನ್ಯ ಜನರನ್ನು ಹತ್ತಿರ ಕರೆದು ಮಾತಾಡಿಸುವ ಜೊತೆಗೆ ಫೀಲ್ಡಲ್ಲಿ ಇರುವಾಗಲೇ ಯುವಕರ ಜೊತೆ ಬೆರೆತು ಕ್ರಿಕೆಟ್ ಆಡಿದ್ದಾರೆ.

ನಿನ್ನೆ ಉಳ್ಳಾಲಕ್ಕೆ ತೆರಳಿದ್ದ ಕಮಿಷನರ್ ಶಶಿಕುಮಾರ್, ಡಿಸಿಪಿ, ಎಸಿಪಿ ಮತ್ತು ಪೊಲೀಸರ ಪಡೆಯೊಂದಿಗೆ ರಸ್ತೆಯಲ್ಲಿ ಸುತ್ತಾಡಿದ್ದಾರೆ. ಈ ಮೂಲಕ ಸ್ಥಳ ಪರಿಚಯದ ಜೊತೆ ಅಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಈ ವೇಳೆ, ಉಳ್ಳಾಲ ದರ್ಗಾ ಭೇಟಿ ನೀಡಿದ ಕಮಿಷನರ್ ಮತ್ತು ತಂಡ ದರ್ಗಾ ಕಮಿಟಿ ಸದಸ್ಯರ ಜೊತೆ ಮಾತುಕತೆ ನಡೆಸಿದರು. ಬಳಿಕ ಉಳ್ಳಾಲದಲ್ಲಿ ಮೀನುಗಾರರ ಜೊತೆಗೂ ಮಾತುಕತೆ ನಡೆಸಿ, ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಇದೇ ವೇಳೆ, ಮೊಗವೀರಪಟ್ನದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನಕ್ಕೂ ತೆರಳಿ, ಹೊರಭಾಗದಿಂದಲೇ ಕೈಮುಗಿದರು.


ಈ ವೇಳೆ, ಕಮಿಷನರ್ ಜೊತೆಗೆ ಡಿಸಿಪಿ ಹರಿರಾಮ್ ಶಂಕರ್, ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಸೇರಿದಂತೆ 30 ಮಂದಿ ಇತರೇ ಪೊಲೀಸರು ಇದ್ದರು. ಯಾವುದೇ ಮುನ್ಸೂಚನೆ ನೀಡದೆ ಪೊಲೀಸರ ಜೊತೆಗೆ ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲಕ್ಕೆ ಕಮಿಷನರ್ ಭೇಟಿ ನೀಡಿ, ಜನಸಾಮಾನ್ಯರ ಜೊತೆ ಬೆರೆತಿದ್ದು ಜನರಿಗೂ ಕುತೂಹಲ ಮೂಡಿಸಿತ್ತು. ಉಳ್ಳಾಲ ಠಾಣೆ, ಕೋಡಿ, ಮೊಗವೀರಪಟ್ಣ, ನಗರಸಭೆ ಕಚೇರಿ ಆವರಣ, ಮುಕ್ಕಚ್ಚೇರಿ ಆಸುಪಾಸಿನಲ್ಲಿ ವಾಕಿಂಗ್ ಮಾಡುತ್ತಲೇ ಕಮಿಷನರ್ ಮತ್ತು ತಂಡ ಪೊಲೀಸರಿಗೆ ಮತ್ತು ಜನರಿಗೆ ಚುರುಕು ಮುಟ್ಟಿಸಿದ್ದಾರೆ. ಇದರ ಮಧ್ಯದಲ್ಲೇ ಕಮಿಷನರ್ ಬ್ಯಾಟ್ ಬೀಸಿ, ಸಿಕ್ಸರ್ ಎತ್ತಿ ಉಳ್ಳಾಲದ ಜನರಲ್ಲಿ ಆಪ್ತ ಭಾವ ಮೂಡಿಸಿದ್ದಾರೆ.
Video:
Mangalore City Polic Commissioner Shashsi Kumar turns as cool IPS officer by playing cricket with localities in Ullal. The video of this has gone viral on social media.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm