ಬ್ರೇಕಿಂಗ್ ನ್ಯೂಸ್
10-04-26 10:12 pm Mangalore Correspondent ಕರಾವಳಿ
ಮಂಗಳೂರು, ಎಪ್ರಿಲ್ 10: ಸಂತ ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿಯ ಪ್ರೋ ಚಾನ್ಸಲರ್, ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಮತ್ತು ಮಂಗಳೂರು ಜೆಸೂಟ್ ಎಜುಕೇಶನಲ್ ಸೊಸೈಟಿ ಇದರ ಉಪಾಧ್ಯಕ್ಷರಾಗಿದ್ದ ಫಾದರ್ ಮೆಲ್ವಿನ್ ಜೆ. ಪಿಂಟೋ(63) ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಹಾರ್ಟ್ ಅಟ್ಯಾಕ್ ಆಗಿದ್ದ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲೇ ಶಿಕ್ಷಣ ಪೂರೈಸಿ ಇಂಗ್ಲಿಷ್ ಎಂಎ ಮಾಡಿದ್ದ ಮೆಲ್ವಿನ್ ಪಿಂಟೋ ಅವರು 1980ರಲ್ಲಿ ಜೆಸೂಟ್ ಆಗಿ ಸೇರ್ಪಡೆಯಾಗಿದ್ದರು. ಇದಲ್ಲದೆ, ಸೈಕಾಲಜಿಯಲ್ಲಿ ಡಿಪ್ಲೊಮಾ, ಸ್ಕೂಲ್ ಅಡ್ಮಿನಿಸ್ಟ್ರೇಶನ್ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದರು. 1997ರಲ್ಲಿ ಜೆಸೂಟ್ ಫಾದರ್ ಆಗಿದ್ದು ಮೊದಲಿಗೆ ಹಾಸನದಲ್ಲಿ ಸೈಂಟ್ ಜೋಸೆಫ್ ಹೈಯರ್ ಪ್ರೈಮರಿ ಸ್ಕೂಲ್ ನಲ್ಲಿ ಹೆಡ್ ಮಾಸ್ಟರ್ ಆಗಿದ್ದರು. ಆನಂತರ ಸೈಂಟ್ ಜೋಸೆಫ್ ಇಂಡಿಯನ್ ಪಿಯು ಕಾಲೇಜು ಸ್ಥಾಪಿಸಿ 2007ರ ತನಕ ಅದರ ಪ್ರಿನ್ಸಿಪಾಲ್ ಆಗಿದ್ದರು.
2007ರಿಂದ 11ರ ವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿದ್ದು, 2012ರಲ್ಲಿ ಮರಳಿ ಹಾಸನದ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇರಿದ್ದರು. ಫಾದರ್ ಮೆಲ್ವಿನ್ ಅವರು ವ್ಯಾಟಿಕನ್ ಕಮ್ಯುನಿಕೇಶನ್ಸ್ ಮತ್ತು ರೇಡಿಯೋ ರೋಮ್ ನಲ್ಲಿ ಏಷ್ಯಾ ಮತ್ತು ಭಾರತೀಯ ಭಾಷೆಗಳ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದರು. 2017ರ ಬಳಿಕ ಮಂಗಳೂರಿನ ವೆಲೆನ್ಸಿಯಾದ ಫಾತಿಮಾ ರಿಟ್ರೀಟ್ ಹೌಸ್ ನಲ್ಲಿ ಎರಡು ವರ್ಷಗಳ ಕಾಲ ಮುಖ್ಯಸ್ಥರಾಗಿದ್ದರು. ಆನಂತರ ಧಾರವಾಡದ ವಿದ್ಯಾನಿಕೇತನದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಆಗಿದ್ದುಕೊಂಡು ಹಲವು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ನೆರವಾಗಿದ್ದರು. ಆಮೂಲಕ ವಿದ್ಯಾರ್ಥಿಗಳು, ಅಲ್ಲಿನ ಶಿಕ್ಷಕ ವೃಂದಕ್ಕೂ ಜನಾನುರಾಗಿಯಾಗಿದ್ದರು.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am