ಬ್ರೇಕಿಂಗ್ ನ್ಯೂಸ್
16-03-26 07:20 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 16: ಮೂಡುಬಿದ್ರೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಮೂಡುಬಿದ್ರೆಯ ಮಹಿಳೆಯೊಬ್ಬರು ಸುದೀರ್ಘ ಎಂಟು ಪುಟಗಳ ದೂರು ಪತ್ರವನ್ನು ರಾಜ್ಯ ಮಹಿಳಾ ಆಯೋಗ, ಗೃಹ ಸಚಿವರಿಗೆ ಮತ್ತು ಡಿಜಿಪಿಗೆ ರವಾನಿಸಿದ್ದು, ಹಲವಾರು ವಿಚಾರಗಳ ಬಗ್ಗೆ ಆರೋಪ ಮಾಡಿದ್ದಾರೆ.
ತಾಕೊಡೆ ಗ್ರಾಮದ ಕ್ರಿಸ್ತಿಯನ್ ಸಮುದಾಯದ ಪತಿ ಮತ್ತು ಪತ್ನಿಯನ್ನು ಠಾಣೆಗೆ ಕರೆಸಿ ಚಿತ್ರಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಮಂಗಳೂರು ಕಮಿಷನರ್ ಅವರಿಗೆ ದೂರು ನೀಡುತ್ತೇವೆಂದರಿತು ಸಂದೇಶ್ ಅವರು ತನ್ನ ಪತಿಗೆ ಕರೆ ಮಾಡಿ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, ಪತಿಯ ವಿರುದ್ಧ ನೆರೆಮನೆಯವರಿಂದ ದೂರು ಪಡೆದು ಪ್ರಕರಣ ದಾಖಲಿಸಿ ಚಿತ್ರಹಿಂಸೆ ನೀಡಿದ್ದಲ್ಲದೆ, ಚಾರ್ಜ್ ಶೀಟ್ ಹಾಕಿದ್ದರು. ಇದು ಸುಳ್ಳು ದೂರು ಆಗಿದ್ದರೂ ಬಿ ರಿಪೋರ್ಟ್ ಹಾಕಬೇಕಿದ್ದರೆ ತನ್ನ ಜೊತೆ ಲೈಂಗಿಕವಾಗಿ ಸಹಕರಿಸಬೇಕೆಂದು ಒತ್ತಾಯಿಸಿದ್ದರು. ಬಳಿಕ ಇನ್ಸ್ ಪೆಕ್ಟರ್ ಅವರ ಕಾರು ಚಾಲಕ ಅಕ್ಬರ್ ತನ್ನ ಮನೆಗೆ ಬಂದು ಇದೇ ಮಾತನ್ನು ಹೇಳಿದ್ದರು.


2025ರ ಆಗಸ್ಟ್ 18ರಂದು ನನ್ನನ್ನು ಠಾಣೆಗೆ ಕರೆಸಿ ರಾತ್ರಿ ವರೆಗೂ ನಿಲ್ಲಿಸಿದ್ದರು. ಪತಿಯನ್ನು ಬಂಧಿಸಿದ್ದಕ್ಕೆ ವಕೀಲರ ಜೊತೆಗೆ ತೆರಳಿದ್ದರೂ, ಠಾಣೆಯ ಒಳಗೆ ಬಿಡದೆ ಹೊರಗೆ ನಿಲ್ಲಿಸಿದ್ದಲ್ಲದೆ, ಮಹಿಳಾ ಪೊಲೀಸರನ್ನೂ ಹತ್ತಿರಕ್ಕೆ ಕಳಿಸದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಅಲ್ಲದೆ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬ್ಲಾಕ್ಮೇಲ್ ಮಾಡಿದ್ದರು. ನನ್ನ ವಿರುದ್ಧ ಹೋದ ಹಲವರ ಕಿಡ್ನಿ ತೆಗೆಸಿದ್ದೇನೆ, ನಿನ್ನ ಪತಿಯನ್ನೂ ಹಾಗೇ ಮಾಡುತ್ತೇನೆಂದು ಬೆದರಿಸಿದ್ದಾರೆ. ಬಳಿಕ ಪತಿಯ ಕೇಸನ್ನು ಬಿಟ್ಟುಬಿಡಲು 25 ಲಕ್ಷ ಲಂಚ ಕೇಳಿದ್ದು ಒಂದೋ ನನ್ನ ಜೊತೆಗೆ ಸಹಕರಿಸು, ಇಲ್ಲದಿದ್ದರೆ ಹಣ ರೆಡಿ ಮಾಡು ಎಂದು ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ.
ಇದಲ್ಲದೆ, ಇನ್ಸ್ ಪೆಕ್ಟರ್ ಸಂದೇಶ್ ಹಲವು ಮಹಿಳೆಯರ ಜೊತೆಗೆ ಸಂಬಂಧ ಇರಿಸಿಕೊಂಡಿದ್ದು ಠಾಣೆಗೆ ಬಂದ ಅಸಹಾಯಕ ಮಹಿಳೆಯರನ್ನು ಬ್ಲಾಕ್ಮೇಲ್ ಮಾಡಿ ದೌರ್ಜನ್ಯ ಎಸಗಿದ್ದಾರೆ. ಒಬ್ಬರು ಮಹಿಳೆಯ ಜೊತೆಗೆ ಪೊಲೀಸ್ ಯೂನಿಫಾರ್ಮ್ ನಲ್ಲೇ ಡ್ಯಾನ್ಸ್ ಮಾಡಿರುವ ವಿಡಿಯೋ ಇದೆಯೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಆಂತರಿಕ ತನಿಖೆ ನಡೆಸಿದ್ದು, ಸೂಕ್ತ ಸಾಕ್ಷ್ಯ ಲಭಿಸಿಲ್ಲ ಎಂದು ಮೌನವಾಗಿದ್ದರು. ಆದರೆ, ಇದೀಗ ಬೆಂಗಳೂರಿನ ಮಹಿಳೆಯೊಬ್ಬರ ಮೂಲಕ ದೂರು ಪತ್ರವನ್ನು ಗೃಹ ಸಚಿವರು, ಮಹಿಳಾ ಆಯೋಗಕ್ಕೆ ನೀಡಿದ್ದಾರೆ. ಟಿವಿ ಮಾಧ್ಯಮಗಳಲ್ಲಿ ಸಂದೇಶ್ ವಿರುದ್ಧ ಆರೋಪದ ಹೇಳಿಕೆ ನೀಡಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am