ಬ್ರೇಕಿಂಗ್ ನ್ಯೂಸ್
09-03-26 09:52 pm HK News Staffer ಕರಾವಳಿ
ಉಳ್ಳಾಲ, ಮಾ.09: ಸುಡುವ ಬಿರು ಬಿಸಿಲಿಗೆ ಮನುಷ್ಯರಲ್ಲದೆ ಮೂಕ ಪ್ರಾಣಿಗಳು ಸಹ ಬಾಯಾರಿಕೆಯಿಂದ ತತ್ತರಿಸುತ್ತಿವೆ. ಬೇಸಿಗೆಯ ಬಿಸಿಲ ಧಗೆಯನ್ನ ತಾಳಲಾರದೆ ಅತ್ತಿತ್ತ ಅಲೆದಾಡುತ್ತಿದ್ದ ಅಳಿಲಿಗೆ ನಗರದಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಸಿಬ್ಬಂದಿಯೋರ್ವರು ನೀರು ಕುಡಿಸಿದ್ದು, ದಣಿವಾರಿಸಿಕೊಂಡ ಅಳಿಲು ಪೊಲೀಸಪ್ಪನ ಜೊತೆ ಸ್ನೇಹ ಬೆಳೆಸಿರುವ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿ ರಮೇಶ್ ಅಸಂಗಿ ಭಾನುವಾರ ಮಂಗಳೂರು ನಗರದ ಮಹಾಕಾಳಿ ಪಡ್ಪು ಎಂಬಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಅವರ ಬೈಕಿನ ಚಕ್ರದ ಮೇಲೆ ದಣಿವಿನಿಂದ ಓಡಾಡುತ್ತಿದ್ದ ಅಳಿಲನ್ನ ಗಮನಿಸಿದ್ದಾರೆ. ತಕ್ಷಣ ತನ್ನ ನೀರಿನ ಬಾಟಲಿಯ ಮುಚ್ಚಳಕ್ಕೆ ನೀರು ಸುರಿದು ಅಳಿಲಿಗೆ ಕುಡಿಸಲು ಪ್ರಯತ್ನಿಸಿದ್ದಾರೆ. ಆರಂಭದಲ್ಲಿ ಅಳಿಲು ಹತ್ತಿರ ಬರಲು ನಿರಾಕರಿಸಿದ್ದು ಬಳಿಕ ರಮೇಶ್ ಅವರ ಕಾಳಜಿಗೆ ಮನಸೋತು ನೀರನ್ನು ಕುಡಿದು ದಣಿವು ನೀಗಿಸಿಕೊಂಡಿದೆ. ದಣಿವನ್ನ ನೀಗಿಸಿಕೊಂಡ ಅಳಿಲು ಮತ್ತೆಲ್ಲೂ ಹೋಗದೆ ರಮೇಶ್ ಅಸಂಗಿ ಅವರ ಜೊತೆಯಲ್ಲೇ ಬಂದಿದ್ದು, ಆ ಅಳಿಲನ್ನ ರಮೇಶ್ ಅವರು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಅಳಿಲಿಗೆ ನೀರುಣಿಸುವ ದೃಶ್ಯವನ್ನು ಮಹೇಶ್ ಅವರು ತಮ್ಮ ಮೊಬೈಲಲ್ಲಿ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಬಿರು ಬಿಸಿಲಿಗೆ ಮೈಯೊಡ್ಡಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಮೂಕ ಪ್ರಾಣಿಯ ಮೇಲೆ ತೋರಿದ ಕಾಳಜಿಗೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ, ಮನುಷ್ಯ ಮತ್ತು ಮೂಕ ಪ್ರಾಣಿಯ ನಡುವಿನ ನಿಷ್ಕಲ್ಮಶ ಪ್ರೀತಿಗೂ ಜನರು ಮನಸೋತಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am