ಬ್ರೇಕಿಂಗ್ ನ್ಯೂಸ್
25-02-26 11:21 am HK News Staffer ಕರಾವಳಿ
ಮಂಗಳೂರು, ಫೆ.25: ನಗರದ ಕದ್ರಿ ದೇವಸ್ಥಾನ ಬಳಿಯ ಡಾಕ್ಟರ್ಸ್ ಕಾಲನಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಫೆ.23ರ ಸೋಮವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಚಿರತೆ ಬಂದಿದ್ದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಡಾಕ್ಟರ್ಸ್ ಕಾಲನಿ ಗೇಟ್ ಮುಂಭಾಗದಲ್ಲಿ ಚಿರತೆ ಅಡ್ಡಾಡುವುದು ಅಲ್ಲಿರುವ ಎರಡು ಸಿಸಿಟಿವಿಗಳಲ್ಲಿ ದಾಖಲಾಗಿದೆ. ಕದ್ರಿ ದೇವಸ್ಥಾನ ಮೇಲ್ಭಾಗದಲ್ಲಿ ಸ್ವಲ್ಪ ಕಾಡು ಹೊಂದಿದ್ದು ಬಿಟ್ಟರೆ ಉಳಿದೆಲ್ಲ ಕಡೆ ಕಾಂಕ್ರೀಟ್ ಕಾಡು ಮಾತ್ರ ಇದೆ. ಇದಲ್ಲದೆ, ದೊಡ್ಡ ಅಪಾರ್ಟ್ಮೆಂಟ್ ಗಳು, ವಿಲ್ಲಾ ರೀತಿಯ ಮನೆಗಳು ಮಾತ್ರ ಇರುವುದರಿಂದ ಚಿರತೆಗೆ ಇಲ್ಲಿ ತಿನ್ನುವುದಕ್ಕೂ ಏನೂ ಸಿಗಲಿಕ್ಕಿಲ್ಲ. ಇಂಥ ಜಾಗದಲ್ಲಿ ಚಿರತೆ ಕಾಣಿಸಿದ್ದು ಸ್ಥಳೀಯರನ್ನು ಅಚ್ಚರಿಗೊಳಿಸಿದೆ.
ಎರಡು ವರ್ಷಗಳ ಹಿಂದೆ ಇದೇ ಜಾಗದಲ್ಲಿ ಕಾಡು ಕೋಣ ಪತ್ತೆಯಾಗಿತ್ತು. ಬಳಿಕ ಅದನ್ನು ಶಕ್ತಿನಗರದ ಮೂಲಕ ಮರಳಿ ಕಾಡಿಗೆ ಅಟ್ಟಲಾಗಿತ್ತು. ವಾರದ ಹಿಂದೆ ಶಕ್ತಿನಗರ ಭಾಗದಲ್ಲಿ ಸಣ್ಣದಾದ ಚಿರತೆ ಕಾಣಿಸಿಕೊಂಡಿದ್ದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಇದೀಗ ಕದ್ರಿ ಬಳಿಯಲ್ಲಿ ದೊಡ್ಡ ಮಾದರಿಯ ಚಿರತೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಯಾರಿಗೂ ನೇರವಾಗಿ ದರ್ಶನಕ್ಕೆ ಸಿಕ್ಕಿಲ್ಲ. ಹೀಗಾಗಿ ಅರಣ್ಯ ಇಲಾಖೆಯವರಿಗೂ ದೂರು ಹೋಗಿಲ್ಲ.
ಸಾಮಾನ್ಯವಾಗಿ ಜನವರಿ, ಫೆಬ್ರವರಿ ತಿಂಗಳಲ್ಲಿ ಆಹಾರ ಅರಸಿಕೊಂಡು ಚಿರತೆಗಳು ನಾಡಿಗೆ ಬರುತ್ತವೆ. ಕಾಡಂಚಿನ ಭಾಗದಲ್ಲಿ ಕೋಳಿ, ನಾಯಿಗಳನ್ನು ಹೊತ್ತೊಯ್ದು ತಿನ್ನುತ್ತವೆ. ಬಜ್ಪೆ, ಎಡಪದವು, ನೀರುಮಾರ್ಗ ಭಾಗದಲ್ಲಿ ಚಿರತೆ ಸಾಮಾನ್ಯವಾಗಿದ್ದರೂ ಈ ಬಾರಿ ಆಗಿಂದಾಗ್ಗೆ ನಗರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಸಮಯದಲ್ಲಿ ಚಿರತೆಗಳ ಓಡಾಟ ಸಾಮಾನ್ಯ. ಮತ್ತು ಒಂದು ರಾತ್ರಿಯಲ್ಲಿ ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕನಿಷ್ಠ 15 -20 ಕಿಮೀ ಓಡಾಡುತ್ತವೆ. ಹೀಗಾಗಿ ತಿನ್ನಲು ಸಿಗದ ಜಾಗದಲ್ಲಿ ಒಂದೇ ಕಡೆ ಇರುತ್ತವೆ, ನಿಲ್ಲುತ್ತವೆ ಎನ್ನುವುದಕ್ಕಾಗಲ್ಲ ಎಂದು ಹೇಳುತ್ತಾರೆ.
#Leopard spotted in #Kadri, #Mangaluru
— Headline Karnataka (@hknewsonline) February 25, 2026
Clear CCTV footage shows a leopard roaming near Doctors’ Colony close to #KadriTemple around 1 a.m. Forest officials say seasonal movement is common. Residents urged to stay #alert. #Breaking pic.twitter.com/YeIENHznru
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am