ಬ್ರೇಕಿಂಗ್ ನ್ಯೂಸ್
06-02-26 10:56 pm Mangalore Correspondent ಕರಾವಳಿ
ಪುತ್ತೂರು, ಫೆ.6 : ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹೊಡೆದ್ರೂ ಏನೂ ಆಗಲ್ಲ. ಮತ್ತೆ ನಮ್ಮದೇ ಸರ್ಕಾರ ತರೋದು ನಮಗೆ ಗೊತ್ತಿದೆ. ಚುನಾವಣಾ ಆಯೋಗದಿಂದ ಎಸ್ಐಆರ್ ಬರ್ತಾ ಇದೆ, ಇದರ ಬಗ್ಗೆ ಬಹಳ ಜಾಗೃತೆಯಾಗಿರಿ ಎಂದು ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ಶಿಲಾನ್ಯಾಸ ನೆರವೇರಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದ್ದಾರೆ. ಪುತ್ತೂರಿನಲ್ಲಿ ಇವತ್ತು ಕಾಂಗ್ರೆಸ್ ದೇವಸ್ಥಾನದ ಭೂಮಿ ಪೂಜೆ ನಡೆದಿದೆ. ಇದು ಕಾಂಗ್ರೆಸ್ ಕಚೇರಿ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ದೇವಸ್ಥಾನ. ಉಡುಪಿ, ಮಂಗಳೂರಿನಲ್ಲಿ ಇಬ್ಬರು ಶಾಸಕರು ಬಿಟ್ಟರೆ ನಮಗೆ ಯಾರೂ ಇಲ್ಲ. ಆದರೂ ನಮ್ಮ ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪುತ್ತಿದೆ, ಬಿಜೆಪಿಯವರಿಗೂ ಇದೆ. ಮತ ಹಾಕಿದವರಿಗೂ, ಹಾಕದವರಿಗೂ ಎಲ್ಲ ಜನರಿಗೂ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ಭೇದ ಇಲ್ಲ. ಟೀಕೆ ಮಾಡೋರು ಗ್ಯಾರಂಟಿ ಯೋಜನೆ ನಮಗೆ ಬೇಡ ಅಂತ ಬಿಟ್ಟು ಬಿಡಲಿ.
ಎಸ್ಐಆರ್ ಅನ್ನು ಪ್ರತೀ ಬೂತ್ ನಲ್ಲೂ ಮಾಡ್ತಾರೆ, ಇದು ಯಾವ ರೀತಿ ಆಗತ್ತೆ ಅಂತ ಕಾರ್ಯಕರ್ತರು ಗಮನಿಸಬೇಕು. ಪ್ರತಿ ಕ್ಷಣದಲ್ಲೂ ಸವಾಲುಗಳು ಬರುತ್ತದೆ, ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸ್ವಲ್ಪ ಹುಷಾರಾಗಿರಬೇಕು ಎಂದು ಡಿಕೆಶಿ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯ, ಗುಂಪುಗಳಿವೆ ಅಂತೆಲ್ಲಾ ಸುದ್ದಿ ಮಾಡ್ತಾರೆ. ಆದರೆ ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ, ನಮ್ಮಲ್ಲಿ ಇರೋದು ಒಂದೇ ಕಾಂಗ್ರೆಸ್ ಗುಂಪು ಮಾತ್ರ. ಹೈಕಮಾಂಡ್ ಹೇಳಿದ ಹಾಗೆ ನಾವು ಮಾಡೋದು, ಬೇರೆ ಏನಿರಲ್ಲ ಎಂದು ಹೇಳಿದರು.
ಮಾತಿನ ಮಧ್ಯೆ ಸಿಎಂ ಆಗಿ ಬರಬೇಕೆಂಬ ಪಕ್ಷದ ಮುಖಂಡರ ಆಶಯದ ಬಗ್ಗೆಯೂ ಡಿಸಿಎಂ ಮಾತನಾಡಿದ್ದು, ನಾನು ಸಿಎಂ ಆಗಬೇಕೆಂದು ಕಾರ್ಯಕರ್ತರು ಆಸೆ ಪಡೋದು ತಪ್ಪಲ್ಲ, ಅದು ಅವರ ಪ್ರಾರ್ಥನೆ. ಪ್ರಯತ್ನ ವಿಫಲ ಆಗಬಹುದು, ಆದರೆ ಪ್ರಾರ್ಥನೆ ವಿಫಲ ಆಗಲ್ಲ ಎಂದು ಮಾರ್ಮಿಕ ನುಡಿಗಳನ್ನಾಡಿದ್ದಾರೆ. ಇದೇ ವೇಳೆ, ಪುತ್ತೂರು ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿಯಿಂದ 10 ಲಕ್ಷ ರೂ. ಘೋಷಣೆ ಮಾಡಿದರು.
ಸಮಾರಂಭದಲ್ಲಿ ಶಾಸಕ ಅಶೋಕ್ ರೈ, ಮಾಜಿ ಸಚಿವ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಇನಾಯತ್ ಆಲಿ, ಮೊಹಮ್ಮದ್ ನಲಪಾಡ್, ಕಾವು ಹೇಮನಾಥ ಶೆಟ್ಟಿ, ಮಿಥುನ್ ರೈ ಮತ್ತಿತರರು ಇದ್ದರು.
Deputy CM D.K. Shivakumar said the BJP cannot regain power despite efforts and asserted that Congress knows how to form the government again. Addressing party workers in Puttur, he urged vigilance over the upcoming SIR process and dismissed reports of internal rifts, reaffirming unity within the Congress.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am