ಬ್ರೇಕಿಂಗ್ ನ್ಯೂಸ್
31-12-20 03:37 pm Mangalore Correspondent ಕರಾವಳಿ
ಬಂಟ್ವಾಳ, ಡಿ.31: ಅಧಿಕಾರಿಗಳ ಸಮನ್ವಯ ಕೊರತೆ, ಸಿಬಂದಿ ಕಡಿಮೆ ಇದ್ದುದು, ಮೇಲಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಕಾರ್ಯ ಬುಧವಾರ ರಾತ್ರಿ ಇಡೀ ನಡೆದಿದ್ದು ಗೊಂದಲದ ಗೂಡಾಗಿತ್ತು. ಮತ ಎಣಿಕೆ ಕೇಂದ್ರದ ಅವ್ಯವಸ್ಥೆ ಬಗ್ಗೆ ಅಭ್ಯರ್ಥಿಗಳು, ಏಜೆಂಟರು ದೂರು ಹೇಳಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯತಿಗಳಿದ್ದು ಮತ ಎಣಿಕೆ ಕಾರ್ಯವನ್ನು ಬಿ.ಸಿ.ರೋಡ್ ಕೈಕಂಬ ಸಮೀಪದ ಇನ್ಫೆಂಟ್ ಜೀಸಸ್ ಕಾಲೇಜಿನಲ್ಲಿ ನಡೆಸಲಾಗಿತ್ತು. ಅತೀ ಹೆಚ್ಚು ಗ್ರಾಮ ಪಂಚಾಯತ್ ಗಳನ್ನು ಹೊಂದಿದ್ದರೂ, ಬಂಟ್ವಾಳ ತಾಲೂಕಿನಲ್ಲಿ ಮತ ಎಣಿಕೆ ಕಾರ್ಯವನ್ನು ಎರಡು ಕಡೆ ಮಾಡುವ ಬದಲು ಒಂದೇ ಕಡೆ ಮಾಡಿದ್ದು ಎಡವಟ್ಟಿಗೆ ಕಾರಣವಾಗಿತ್ತು.
ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಬುಧವಾರ ರಾತ್ರಿಯ ವೇಳೆಗೆ ಮತ ಎಣಿಕೆ ಕಾರ್ಯಗಳು ಮುಗಿದಿದ್ದರೆ ಬಂಟ್ವಾಳ ತಾಲೂಕಿನ ಎಣಿಕಾ ಕಾರ್ಯ ಮುಗಿದಾಗ ಬೆಳಗ್ಗೆ ಐದು ಗಂಟೆ ಆಗಿತ್ತು. ಮತ ಎಣಿಕೆಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ಇಡೀ ಪ್ರಕ್ರಿಯೆ ಕುಂಟುತ್ತಾ ಸಾಗಿತ್ತು.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಜೊತೆಗೆ ಏಜಂಟರು, ಪೊಲೀಸರು, ಅಧಿಕಾರಿಗಳು, ಸಿಬ್ಬಂದಿ ವರ್ಗ, ಮಾಧ್ಯಮದವರು ಬುಧವಾರ ಬೆಳಗ್ಗೆ ಬಂದವರು ರಾತ್ರಿ ಇಡೀ ನಿದ್ದೆ ಬಿಟ್ಟು ಗುರುವಾರ ಮುಂಜಾನೆ ವರೆಗೂ ಕೆಲಸದಲ್ಲಿ ತೊಡಗಿದ್ದರು. ಒಟ್ಟು ಮೂರು ಸುತ್ತಿನಲ್ಲಿ ಮತ ಎಣಿಕೆ ಪ್ರಕ್ರಿಯೆಯನ್ನು ಮುಗಿಸಬೇಕಿತ್ತು. ಅದರಂತೆ ಮೊದಲ ಸುತ್ತಿನ ಮತ ಎಣಿಕೆ ಬೆಳಗ್ಗೆ 8ರಿಂದ 10:15 ಎಂದು ತಿಳಿಸಲಾಗಿತ್ತು. ಆದರೆ ಮೊದಲ ಹಂತದ ಬಹುತೇಕ ಗ್ರಾಮ ಪಂಚಾಯತ್ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಅಪರಾಹ್ನ 3 ಗಂಟೆಯ ಬಳಿಕ. ಸಜಿಪನಡು ಸಹಿತ ಕೆಲವು ಗ್ರಾಮಗಳ ಮೊದಲ ಹಂತದ ಮತ ಎಣಿಕೆ ಸಂಜೆ 6 ಗಂಟೆಯ ವರೆಗೂ ನಡೆದಿತ್ತು. ಬಳಿಕ ಆರಂಭಗೊಂಡ ಎರಡು ಮತ್ತು ಮೂರನೇ ಹಂತದ ಮತ ಎಣಿಕೆ ಪ್ರಕ್ರಿಯೆ ಮುಂಜಾನೆ ವರೆಗೂ ನಡೆಯಿತು.

ಊಟ, ತಿಂಡಿ, ನೀರು ಇಲ್ಲದೆ ಪರದಾಟ !!
ಬುಧವಾರ ಮುಂಜಾನೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ವರ್ಗ, ಪೊಲೀಸರಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ದೊರಕ್ಕಿತ್ತು. ಆನಂತರ ಊಟ, ತಿಂಡಿ ಪೂರೈಕೆ ಆಗಿಲ್ಲ. ಇದರಿಂದ ಸಿಬಂದಿ ಅತ್ತ ಬಿಡಲೂ ಆಗದೆ, ಮುಗಿಸಲೂ ಆಗದೆ ಸಂಕಷ್ಟ ಅನುಭವಿಸಿದರು. ಬುಧವಾರ ಸಂಜೆಯ ವೇಳೆಗೆ ಕುಡಿಯುವ ನೀರು ಕೂಡ ಖಾಲಿ ಆಗಿತ್ತು. ಆ ಬಳಿಕ ಕುಡಿಯಲು ತೊಟ್ಟು ನೀರಿಗಾಗಿ ಸಿಬ್ಬಂದಿ ವರ್ಗ, ಪೊಲೀಸರು ಹಾಗೂ ಅಭ್ಯರ್ಥಿಗಳು, ಏಜೆಂಟರು ಪರದಾಡುವ ಸ್ಥಿತಿ ಎದುರಾಗಿತ್ತು.
ಬುಧವಾರ ಬೆಳಗ್ಗೆ ಮತ ಎಣಿಕೆ ಕೇಂದ್ರದ ಗೇಟ್ ಒಳಗೆ ಹೋಗಿದ್ದ ಬಹುತೇಕ ಅಭ್ಯರ್ಥಿಗಳು, ಏಜೆಂಟರು ಸಂಜೆ 6 ಗಂಟೆಯ ಬಳಿಕ ಹೊರ ಹೋಗಿದ್ದರು. ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು, ಮಾಧ್ಯಮದವರಿಗೆ ಮಧ್ಯಾಹ್ನದ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಭ್ಯರ್ಥಿಗಳು ಮತ್ತು ಏಜೆಂಟರಿಗೆ ಊಟ ತಿಂಡಿಯ ವ್ಯವಸ್ಥೆ ಇರಲಿಲ್ಲ. ಅಲ್ಲದೆ ಕೂಪನ್ ಇದ್ದವರಿಗೆ ಮಾತ್ರ ಊಟ, ತಿಂಡಿ ನೀಡಲಾಗುತ್ತಿತ್ತು. ಇದರಿಂದಾಗಿ ಅಭ್ಯರ್ಥಿಗಳು ಮತ್ತು ಏಜೆಂಟರು ಬೆಳಗ್ಗೆಯಿಂದ ರಾತ್ರಿ ವರೆಗೂ ಊಟ, ತಿಂಡಿ ಇಲ್ಲದೆ ತೀವ್ರ ಸಂಕಷ್ಟ ಎದುರಿಸಿದರು.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am