ಬ್ರೇಕಿಂಗ್ ನ್ಯೂಸ್
08-01-26 02:34 pm Mangalore Correspondent ಕರಾವಳಿ
ಮಂಗಳೂರು, ಜ.8 : ಗಡಿನಾಡು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರ ಮೇಲೆ ಕಡ್ಡಾಯ ಮಲಯಾಳ ಹೇರುವ ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆಯನ್ನು ಅಂಗೀಕರಿಸದಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಿಯೋಗ ಕೇರಳ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಕನ್ನಡಿಗರ ಹಿತ ಕಾಯುವಂತೆ ಬೇಡಿಕೆ ಮುಂದಿಟ್ಟಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಯೋಗವು ಬುಧವಾರ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಗಡಿ ಜಿಲ್ಲೆಯಲ್ಲಿ ಕನ್ನಡ ಮಾತನಾಡುವ ಭಾಷಾ ಅಲ್ಪಸಂಖ್ಯಾತರ ಮೇಲೆ ಈ ಮಸೂದೆ ಬೀರುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆ - 2025 ಅನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿತು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ವಿ. ಮತ್ತಿಹಳ್ಳಿ ಇತ್ತೀಚೆಗೆ ಕೇರಳ ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದೇ ರೀತಿಯ ಮಸೂದೆಯನ್ನು 2017ರಲ್ಲಿ ಭಾರತದ ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ ಮತ್ತು ಪ್ರಸ್ತುತ ಮಸೂದೆಯು ಅಸಂವಿಧಾನಿಕ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾತನಾಡುವ ದೊಡ್ಡ ಜನಸಂಖ್ಯೆಯ ಹಿತಾಸಕ್ತಿಗಳಿಗೆ ಹಾನಿಕರವಾಗಿದೆ ಎಂದು ಮನವರಿಕೆ ಮಾಡಿದರು.

ಹೊಸ ಮಸೂದೆ ಪ್ರಕಾರ, ಕನ್ನಡ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ಮಲಯಾಳವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುತ್ತಿದ್ದಾರೆ. ಮಲಯಾಳಂ ಭಾಷಾ ಮಸೂದೆ - 2025 ರ ಸೆಕ್ಷನ್ 2(6) ರಡಿ ಉಲ್ಲೇಖವಾಗಿರುವ ನಿಯಮಗಳ ಬಗ್ಗೆ ನಿಯೋಗವು ಗಂಭೀರ ಕಳವಳ ವ್ಯಕ್ತಪಡಿಸಿತು. ಕಾಸರಗೋಡು ಜಿಲ್ಲೆಯಲ್ಲಿ, ವಿದ್ಯಾರ್ಥಿಗಳು ಪ್ರಸ್ತುತ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯುತ್ತಾರೆ. ಹಿಂದಿ, ಸಂಸ್ಕೃತ ಅಥವಾ ಉರ್ದು ಮುಂತಾದ ಭಾಷೆಗಳನ್ನು ಎರಡನೇ ಭಾಷೆಯಾಗಿ ಆಯ್ಕೆ ಮಾಡುತ್ತಾರೆ. ಮಸೂದೆ ಜಾರಿಗೆ ಬಂದರೆ ಈ ಆಯ್ಕೆಯು ಪ್ರತಿಕೂಲ ಪರಿಣಾಮ ಬೀರುತ್ತದೆ, ಕನ್ನಡದ ಬದಲು ಮಲಯಾಳ ಕಲಿಕೆ ಆರಂಭಗೊಂಡು ಕನ್ನಡ ಪ್ರದೇಶ, ಕನ್ನಡಿಗರು ಇಲ್ಲದಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಲಯಾಳಂ ಕಡ್ಡಾಯ ಪ್ರಥಮ ಭಾಷೆಯಾಗಿಸಿದರೆ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಕೇರಳದ ಹೊರಗೆ ಉನ್ನತ ಶಿಕ್ಷಣವನ್ನು ಪಡೆಯುವಾಗ ಮತ್ತು ಅವರ ಶೈಕ್ಷಣಿಕ ಮತ್ತು ವೃತ್ತಿಪರ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.
ಸಂವಿಧಾನ ಉಲ್ಲಂಘನೆ ಬಗ್ಗೆ ಪ್ರಸ್ತಾಪ
ಇದಲ್ಲದೆ, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಂತೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕೇರಳ ಸರ್ಕಾರಕ್ಕೆ ಪದೇ ಪದೇ ಸಲಹೆ ನೀಡಿದೆ ಎಂದು ಜ್ಞಾಪಕ ಪತ್ರವು ಗಮನಸೆಳೆದಿದೆ. ರಾಜ್ಯಗಳಾದ್ಯಂತ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ಮತ್ತು ಸೌಲಭ್ಯಗಳನ್ನು ಖಾತ್ರಿಪಡಿಸುವ 30, 347, 350, 350 ಎ ಮತ್ತು 350 ಬಿ ವಿಧಿಗಳು ಸೇರಿದಂತೆ ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯನ್ನು ಇದು ಎತ್ತಿ ತೋರಿಸಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕಡ್ಡಾಯ ನೇಮಕಾತಿ, ಕಾಸರಗೋಡಿನ ಪೊಲೀಸ್ ಠಾಣೆಗಳು, ರೈಲು ನಿಲ್ದಾಣಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡ ನಾಮಫಲಕಗಳ ಅಳವಡಿಕೆ, ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಪತ್ರ ವ್ಯವಹಾರದಲ್ಲಿ ಕನ್ನಡ ಬಳಕೆ ಮತ್ತು ಪಿಎಸ್‌ಸಿ ಅಥವಾ ಕೇಂದ್ರೀಕೃತ ಸಂಸ್ಥೆಗಳಲ್ಲಿ ಭಾಷಾ ಅಲ್ಪಸಂಖ್ಯಾತರ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಗೆ ಕತ್ತರಿ ಬೀಳಲಿದೆ ಎಂದು ರಾಜ್ಯಪಾಲರಿಗೆ ನೀಡಿರುವ ಜ್ಞಾಪಕ ಪತ್ರದಲ್ಲಿ ವಿವರಿಸಲಾಗಿದೆ.
A delegation from Karnataka has urged the Kerala Governor not to approve the Malayalam Language Bill proposed by the Kerala government, alleging that it seeks to impose Malayalam on Kannadigas in the border district of Kasaragod and would severely affect the interests of the Kannada-speaking population.
09-01-26 04:42 pm
Bangalore Correspondent
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ...
09-01-26 02:05 pm
ಕನಕಪುರ ತಾಲೂಕಿನಲ್ಲಿ 63 ಅಕ್ರಮ ಲೇಔಟ್, 28 ಪಿಜಿಗಳ...
08-01-26 11:06 pm
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
08-01-26 11:21 pm
HK News Desk
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
ಅಧಿಕಾರಕ್ಕಾಗಿ ಶಿವಸೇನೆ ಹೊರಗಿಟ್ಟು ಬಿಜೆಪಿ - ಕಾಂಗ್...
07-01-26 09:37 pm
ದೆಹಲಿಯಲ್ಲಿ ಹಿಂಸಾಚಾರ ; ಮಸೀದಿ ಆವರಣದಲ್ಲಿ ಅಕ್ರಮ ಕ...
07-01-26 04:47 pm
09-01-26 05:47 pm
Mangalore Correspondent
ಪಿಎಂ ಕೇರ್ ಫಂಡ್ ಹೆಸರಲ್ಲಿ ಖಾಸಗಿ ಟ್ರಸ್ಟಿಗೆ ಸಾವಿರ...
09-01-26 03:21 pm
ಮಾನವ –ಪ್ರಾಣಿ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್, 1926...
09-01-26 01:15 pm
ಜ.11 ರಂದು ಕೊಡಿಯಾಲದಲ್ಲಿ ಸುಧೀಂದ್ರ ತೀರ್ಥ ಜನ್ಮಶತಮ...
08-01-26 08:48 pm
ಜ.10- 11ರಂದು ಮಂಗಳೂರು ಲಿಟ್ ಫೆಸ್ಟ್ ; ರಾಜ್ಯಸಭೆ ಸ...
08-01-26 08:09 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm