ಬ್ರೇಕಿಂಗ್ ನ್ಯೂಸ್
08-01-26 09:36 pm HK News Desk ಕರ್ನಾಟಕ
ಬೆಂಗಳೂರು, ಜ.8: ಮುಖ್ಯಮಂತ್ರಿ ಪಟ್ಟಕ್ಕಾಗಿ ಕಸರತ್ತು ನಡುವೆಯೇ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಹೊಸ ಹೊಣೆ ವಹಿಸಿದೆ. ಅಸ್ಸಾಂ ಚುನಾವಣೆ ವೀಕ್ಷಕರಾಗಿ ನೇಮಕ ಮಾಡಲಾಗಿದ್ದು ಪಂಚ ರಾಜ್ಯ ಚುನಾವಣೆ ಮುಗಿಯುವ ವರೆಗೂ ಕುರ್ಚಿ ಕದನಕ್ಕೆ ಬ್ರೇಕ್ ಹಾಕಿದೆ. ಆಮೂಲಕ ಸಿಎಂ ಬದಲಾವಣೆ ಚರ್ಚೆಯನ್ನು ಚುನಾವಣೆ ಮುಗಿಯೋ ವರೆಗೂ ಮುಂದಕ್ಕೆ ಹಾಕಿದೆ.
ಮುಂದಿನ ಮಾರ್ಚ್- ಎಪ್ರಿಲ್ ನಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆ ನಡೆಯಲಿದ್ದು ಹಿರಿಯ ವೀಕ್ಷಕರಾಗಿ ಡಿಕೆ ಶಿವಕುಮಾರ್ ನೇಮಕಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ಸಿಗನಾಗಿ, ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್, ಜಾರ್ಖಂಡ್ ಮಾಜಿ ಶಾಸಕ ಬಂಧು ಟಿರ್ಕಿ ಅವರನ್ನೂ ಅಸ್ಸಾಂ ಚುನಾವಣೆ ವೀಕ್ಷಕರಾಗಿ ಎಐಸಿಸಿ ನೇಮಿಸಿದೆ.
ಕಾಂಗ್ರೆಸ್ಸಿಗನಾಗಿ ನಾನು ಪಕ್ಷಕ್ಕಾಗಿ ಕೆಲಸ ಮಾಡಬೇಕು. ಎಐಸಿಸಿ ಪ್ರಕಟಣೆಯನ್ನು ನೋಡಿದ್ದೇನೆ. ಅವರು ಅಸ್ಸಾಂ ಅನ್ನು ನೋಡಿಕೊಳ್ಳಲು ನನಗೆ ಹೇಳಿದ್ದಾರೆ. ನಾನು ಬಹಳ ಹಿಂದೆಯೇ ಅಸ್ಸಾಂಗೆ ಹೋಗಿದ್ದೆ ಮತ್ತು ಈಗ ಅವರು ನನ್ನನ್ನು ಮತ್ತೆ ಅಲ್ಲಿಗೆ ಹೋಗಲು ಬಯಸುತ್ತಿದ್ದಾರೆ. ನಾನು ಹೋಗುತ್ತೇನೆ" ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ತಿಳಿಸಿದ್ದಾರೆ. ಆಮೂಲಕ ರಾಜ್ಯದಲ್ಲಿ ಸಿಎಂ ಹುದ್ದೆಗಾಗಿ ನಡೆಸಿದ್ದ ಲಾಬಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
Amid ongoing political manoeuvring for the Chief Minister’s post in Karnataka, the Congress high command has assigned a new responsibility to Deputy Chief Minister D. K. Shivakumar, effectively putting a temporary halt to the leadership tussle. Shivakumar has been appointed as a senior observer for the upcoming Assam Assembly elections, signaling a pause in discussions over a change in leadership until the completion of the five-state elections.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:59 am
HK News Staffer
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
15-07-26 01:17 pm
HK News Staffer
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm