ಬ್ರೇಕಿಂಗ್ ನ್ಯೂಸ್
04-01-26 02:44 pm Mangalore Correspondent ಕರಾವಳಿ
ಮಂಗಳೂರು, ಜ.4: ಬಜಪೆಯಲ್ಲಿ ಗೋಮಾಂಸ ಒಯ್ಯುತ್ತಿದ್ದ ತಂದೆ, ಮಗಳನ್ನು ತಡೆದ ಪ್ರಕರಣ ಸಂಬಂಧಿಸಿ ಇಬ್ಬರು ಯುವಕರ ಫೋಟೊ ಹಾಕಿ ಮಿತಿಮೀರುತ್ತಿರುವ ಸಂಘಿಗಳ ಅಟ್ಟಹಾಸ ಎಂದು ಬರೆದು ಪ್ರಚೋದನಕಾರಿ ಸಂದೇಶ ಹಾಕಿದ ಬಗ್ಗೆ ಮಂಗಳೂರು ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ.
ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ. 27 ರಂದು ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತ ತನ್ನ ಮಗಳ ಜೊತೆಗೆ ಸ್ಕೂಟರ್ ನಲ್ಲಿ ಕೂರಿಸಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ, ಸುಮಿತ್ ಮತ್ತು ರಜತ್ ನಾಯಕ್ ಎಂಬವರು ತಡೆದು ನಿಲ್ಲಿಸಿ ಹಲ್ಲೆ ಮಾಡಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಸದ್ರಿ ಘಟನೆಗೆ ಸಂಬಂಧಿಸಿದಂತೆ ಇನ್ ಸ್ಟಾ ಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ muslim_leader ಎಂಬ ಹೆಸರಲ್ಲಿ ಪ್ರಚೋದನಕಾರಿ ಸಂದೇಶ ಹಾಕಲಾಗಿದೆ. ಇಬ್ಬರು ಯುವಕರ ಪೋಟೋವನ್ನು ಹಾಕಿ “ಮಿತಿಮೀರುತ್ತಿರುವ ಸಂಘಿಗಳ ಅಟ್ಟಹಾಸ ಇದಕ್ಕೆ ಕಡಿವಾಣ ಇಲ್ಲವಾಯಿತೆ?, ಸಂಘ ಪರಿವಾರದ ಭಯೋತ್ಪಾದಕರ ದಾಳಿ ಈಗೀಗ ಹೆಚ್ಚುತ್ತಲೇ ಇದೆ, ಅವರಿಗೆ ಕಾನೂನಿನ ಭಯವಿಲ್ಲ. ಕಾನೂನು ಅವರನ್ನು ಏನು ಮಾಡುವುದಿಲ್ಲ. ಅವರನ್ನು ಕೇಳುವವರು ಇಲ್ಲ, ಹೇಳುವವರಿಲ್ಲ ಎಂಬ ಧೈರ್ಯ ಅವರಿಗಿದೆ. ನಾವು ಆಡಿದ್ದೇ ಆಟ ಎಂಬಂತಾಗಿದೆ. ಇನ್ನು ಗೋಮಾಂಸ ತಿನ್ನುತ್ತೇವೆ, ಸಂಘಿಗಳೇ ಏನು ಮಾಡುತ್ತೀರಾ.. ಥೂ ನಿಮ್ಮ ಜನ್ಮಕ್ಕೆ.. ಹದಿಹರೆಯದ ಮಕ್ಕಳನ್ನು ಕೂಡ ನೀವು ನೋಡುವುದಿಲ್ಲ. ನಿಮ್ಮ ಮನೆಯಲ್ಲಿ ಮಕ್ಕಳು ಇಲ್ಲವೇ.. ಸರ್ಕಾರ ಆದಷ್ಟು ಬೇಗ ಈ ನಾಯಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.


ಗಂಜಿಮಠ ವ್ಯಾಪ್ತಿಯ ನಾರ್ಲಪದವು ಎಂಬಲ್ಲಿ ಒಡ್ಡೂರಿನ ಪ್ರದೀಪ್, ರಜಿತ್, ಸಂತೋಷ್, ಹಾಗೂ ಜನಾರ್ಧನ ಎಂಬ ಸಂಘಿ ಗೂಂಡಾಗಳಿಂದ ಮುಲ್ಲರಪಟ್ಟಣದ ಅಮಾಯಕ ಮುಸ್ಲಿಂ ತಂದೆ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ” Muslim- Leader ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ insta4ama ಎಂಬ ಇನಸ್ಟಾಗ್ರಾಮ ID ಯಿಂದ ಸದ್ರಿ ಪೋಸ್ಟ್ ಗೆ “ ಇವರಿಗೆ ಸುಹಾಸ್ ಶೆಟ್ಟಿ ಟ್ರೀಟ್ ಮೆಂಟ್ ಕೊಡಬೇಕು ಸದ್ಯದಲ್ಲಿ” ಎಂದು ಕಾಮೆಂಟ್ ಮಾಡಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ವರ್ಗ ವರ್ಗಗಳನ್ನು ಮತ್ತು ಸಮುದಾಯವನ್ನು ಪ್ರಚೋದಿಸುವಂತೆ ಉದ್ದೇಶ ಪೂರ್ವಕವಾಗಿ ಪೋಸ್ಟ್ ಮಾಡಿರುವ ಹಾಗೂ ಸದ್ರಿ ಪೋಸ್ಟ್ ಗೆ ಸುಹಾಸ್ ಶೆಟ್ಟಿ ರವರನ್ನು ಕೊಂದ ರೀತಿ ಸದ್ಯದಲ್ಲಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿ ಕಮೆಂಟ್ ಮಾಡಿರುವರರ ವಿರುದ್ದ ಬಜಪೆ ಪೊಲೀಸರು ಮೊ.ನಂ 07/2026 ಕಲಂ 351(2), 351( 3), 352, 353(2),192 BNS-2023 ರಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿರುತ್ತಾರೆ. ಶೀಘ್ರದಲ್ಲೆ ಆರೋಪಿತರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
A suo motu case has been registered by Mangaluru Police after a provocative Instagram post targeting members of the Sangh Parivar surfaced in connection with an earlier beef-transport assault case in Bajpe.
05-01-26 03:14 pm
Bangalore Correspondent
ಬಳ್ಳಾರಿ ಪ್ರಕರಣ ; ಸುಮೊಟೋ ಕೇಸು ದಾಖಲಿಸಿ ಪೊಲೀಸರ ತ...
05-01-26 01:24 pm
ಎಸ್ ಪಿ ಪವನ್ ಆತ್ಮಹತ್ಯೆ ವದಂತಿ ; ಸರ್ಕಾರ ಅವರ ಡೆತ...
04-01-26 10:27 pm
Janardhan Reddy, DK Shivakumar: ನನಗೆ ಜೀವ ಬೆದರ...
04-01-26 07:24 pm
ಜನಾರ್ದನ ರೆಡ್ಡಿ ದೊಡ್ಡ ಡ್ರಾಮಾ ಮಾಸ್ಟರ್.. ಕೋಟೆ ಕಟ...
03-01-26 10:40 pm
05-01-26 02:13 pm
HK News Desk
Venezuelan President Maduro: ವೆನಿಜುವೆಲಾ ಅಧ್ಯಕ...
04-01-26 06:38 pm
ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ...
02-01-26 06:43 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
04-01-26 11:10 pm
Mangalore Correspondent
Suhas Shetty, Social Media Post, Bajpe Police...
04-01-26 02:44 pm
Dharmasthala Case, Belthangady Court: ಧರ್ಮಸ್ಥ...
04-01-26 01:57 pm
ಕಂಬಳ ಕ್ಷೇತ್ರದ ಭೀಷ್ಮ ಗುಣಪಾಲ ಕಡಂಬರಲ್ಲಿ ಬಹಿರಂಗ ಕ...
03-01-26 11:04 pm
ಜನವರಿ 23-26 ; ಕದ್ರಿ ಪಾರ್ಕ್ ನಲ್ಲಿ ಫಲಪುಷ್ಪ ಪ್ರದ...
03-01-26 09:13 pm
04-01-26 11:02 pm
HK News Desk
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm
ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮುಸ್ಲಿಂ ಮಾ...
02-01-26 12:58 pm
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm