DGP Alok Kumar, Mangalore Jail: ಮಂಗಳೂರು ಜೈಲಿಗೆ ಡಿಜಿಪಿ ಅಲೋಕ್ ದಿಢೀರ್ ಭೇಟಿ ; ಕೈದಿಗಳ ಗಲಾಟೆ ಬಗ್ಗೆ ಅಧಿಕಾರಿಗಳಿಗೆ ರೈಟ್ ಲೆಫ್ಟ್, ಜೈಲಿಗೆ ಎಐ ಕ್ಯಾಮರಾ, ಜಾಮರ್ ಸಮಸ್ಯೆ ಈಗ ಹೊಸತಲ್ಲ ! 

23-12-25 10:02 pm       Mangaluru Correspondent   ಕರಾವಳಿ

ಇತ್ತೀಚೆಗೆ ಕೈದಿಗಳ ಗಲಾಟೆಯಿಂದ ಸುದ್ದಿಯಾಗಿದ್ದ ಮಂಗಳೂರು ಸಬ್ ಜೈಲಿಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಳಗಡೆ ಪರಿಶೀಲನೆ ನಡೆಸಿ ಜೈಲು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ರೈಟ್ ಲೆಫ್ಟ್ ತೆಗೆದುಕೊಂಡಿದ್ದಾರೆ. 

ಮಂಗಳೂರು, ಡಿ.23: ಇತ್ತೀಚೆಗೆ ಕೈದಿಗಳ ಗಲಾಟೆಯಿಂದ ಸುದ್ದಿಯಾಗಿದ್ದ ಮಂಗಳೂರು ಸಬ್ ಜೈಲಿಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಳಗಡೆ ಪರಿಶೀಲನೆ ನಡೆಸಿ ಜೈಲು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ರೈಟ್ ಲೆಫ್ಟ್ ತೆಗೆದುಕೊಂಡಿದ್ದಾರೆ. 

ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂಗಳೂರು ಕಾರಾಗೃಹಕ್ಕೆ ಔಪಚಾರಿಕವಾಗಿ ಭೇಟಿ ಕೊಟ್ಟಿದ್ದೇನೆ. ರಾಜ್ಯದಲ್ಲಿ 54 ಕಾರಾಗೃಹಗಳು ಇದ್ದು ಎಲ್ಲಾ ಕಾರಾಗೃಹವನ್ನು ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು. ಮಂಗಳೂರಿನದ್ದು ಸೂಕ್ಷ್ಮ ಕಾರಾಗೃಹ. ಈಗಾಗಲೇ ಇಲ್ಲಿ ಹಲವು ಬಾರಿ ಪೊಲೀಸರು ರೈಡ್ ಗಳನ್ನು ಮಾಡಿದ್ದಾರೆ. ‌ಒಳಗಡೆ ಗಲಾಟೆ ಮಾಡಿದ ಖೈದಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ.‌

ಇನ್ನೊಂದಿಷ್ಟು ಖೈದಿಗಳನ್ನು ಬೇರೆ ಜಾಗಕ್ಕೆ ಕಳುಹಿಸುತ್ತೇವೆ. ಒಳ್ಳೆಯ ನಡತೆ ಹೊಂದಿರುವವರಿಗೆ ಸಹಕಾರ ಕೊಡ್ತೇವೆ. ಅಧಿಕಾರಿಗಳ ಜೊತೆಯೂ ಚರ್ಚೆ ಮಾಡ್ತೇನೆ. ಜೈಲಿನ ಒಳಗೆ ಯಾವ ರೀತಿ ನಿಷೇಧಿತ ವಸ್ತುಗಳು ಬರ್ತಿದೆ ಎಂದು ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು. 

ಟ್ರಯಲ್ ಬೇಸಿಸ್ ಮೇಲೆ ಜೈಲಿನಲ್ಲಿ ಎಐ ಟೆಕ್ನಾಲಜಿ ಕ್ಯಾಮರಾ ಬಳಕೆ ಮಾಡ್ತಿದ್ದೇವೆ. ಇದು ಎಷ್ಟು ಪರಿಣಾಮಕಾರಿ ಆಗುತ್ತೆ ಎಂದು ನೋಡಿ ಅಳವಡಿಕೆ ಮಾಡ್ತೇವೆ. ಪರಪ್ಪನ ಅಗ್ರಹಾರ, ಮೈಸೂರು ಜೈಲಿನಲ್ಲಿ ಕ್ಯಾಮರಾ ಟ್ರಯಲ್ ಆಗಿದೆ. ಮಂಗಳೂರು ಜೈಲಿನಲ್ಲಿಯೂ ಬೇಕಾದ್ರೆ ಟ್ರಯಲ್ ಮಾಡ್ತೀವಿ ಎಂದು ಆ ಕುರಿತ ಪ್ರಶ್ನೆಗೆ ಉತ್ತರಿಸಿದರು. 

ಜೈಲಿನಲ್ಲಿ ಜಾಮರ್ ಸಮಸ್ಯೆಯನ್ನು ಹದಿನೈದು ವರ್ಷದಿಂದ ಕೇಳ್ತಾ ಇದ್ದೇನೆ‌. ಕಾಲ ಕಾಲಕ್ಕೆ ಬದಲಾವಣೆ ಆಗ್ತಾ ಬಂದಿದೆ. ಆದ್ರೆ ಇನ್ನೂ ಸಹ ಕೆಲ ಸಮಸ್ಯೆಗಳು ಇದೆ. ನಿನ್ನೆ ಶೋಧ ನಡೆಸಿದ ಸಂದರ್ಭ ಒಂದು ಮೊಬೈಲ್ ಫೋನ್ ಜೈಲಿನಲ್ಲಿ ಸಿಕ್ಕಿದೆ. ಮುಂದೆಯು ಪೊಲೀಸರು ಸಹ ಪರಿಶೀಲನೆ ಮಾಡ್ತಾರೆ. ಜೈಲಿನಲ್ಲಿ ಕಂಟ್ರೋಲ್‌ ಮಾಡಿದ್ರೆ 60% ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತೆ. ದೊಡ್ಡ ದೊಡ್ಡ ತರ್ಲೆ ಮಾಡೋರು ಇಲ್ಲಿಗೆ ಬರ್ತಾರೆ. ಒಮ್ಮೆ ಜೈಲಿಗೆ ಬಂದು ಜಾಮೀನು ಮೇಲೆ ಹೊರಗೆ ಬರ್ತಾರೆ. ಇಲ್ಲಿ ನಾವು ಕಂಟ್ರೋಲಲ್ಲಿ ಇಟ್ಟರೆ ಸರಿ ಆಗುತ್ತೆ ಎಂದು ಜೈಲು ಕೈದಿಗಳ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಹೇಳಿದರು.

Following recent incidents of unrest among inmates, Director General of Police (Prisons) Alok Kumar made a surprise visit to the Mangaluru Sub-Jail and conducted a detailed inspection. He reviewed the internal arrangements of the prison, held a meeting with jail officials, and issued strict instructions to ensure discipline and security.