K. C. Venugopal, Mangalore, Dk Shivakumar: ಮಂಗಳೂರು ಏರ್ಪೋರ್ಟ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೈಡ್ರಾಮಾ ; ಕೆ.ಸಿ ವೇಣುಗೋಪಾಲ್ ಎದುರಲ್ಲಿ ಡಿಕೆ ಪರ ಘೋಷಣೆ, ಸಿದ್ದರಾಮಯ್ಯ ಪರವೂ ಬೆಂಬಲಿಗರ ಜೈಕಾರ !

03-12-25 11:54 am       Mangaluru Staffer   ಕರಾವಳಿ

ರಾಜ್ಯದಲ್ಲಿ ಅಧಿಕಾರ ಹಂಚಿಕೆ, ಸಿಎಂ ಬದಲಾವಣೆ ಕೂಗು ಜೋರಾಗಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಸೆಕ್ರೆಟರಿ ಕೆ.ಸಿ ವೇಣುಗೋಪಾಲ್ ಮಂಗಳೂರು ಏರ್ಪೋರ್ಟ್ ಆಗಮಿಸಿದ ವೇಳೆ ಬೆಂಬಲಿಗರು ಪ್ರತ್ಯೇಕವಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಪರವಾಗಿ ಘೋಷಣೆ ಕೂಗಿದ್ದಾರೆ.

ಮಂಗಳೂರು, ಡಿ.3: ರಾಜ್ಯದಲ್ಲಿ ಅಧಿಕಾರ ಹಂಚಿಕೆ, ಸಿಎಂ ಬದಲಾವಣೆ ಕೂಗು ಜೋರಾಗಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಸೆಕ್ರೆಟರಿ ಕೆ.ಸಿ ವೇಣುಗೋಪಾಲ್ ಮಂಗಳೂರು ಏರ್ಪೋರ್ಟ್ ಆಗಮಿಸಿದ ವೇಳೆ ಬೆಂಬಲಿಗರು ಪ್ರತ್ಯೇಕವಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಪರವಾಗಿ ಘೋಷಣೆ ಕೂಗಿದ್ದಾರೆ.

ಮಂಗಳೂರಿನ ಕೋಣಾಜೆಯಲ್ಲಿ ಗಾಂಧಿ- ನಾರಾಯಣ ಗುರು ಸಂವಾದ ಶತಮಾನ ಕಾರ್ಯಕ್ರಮಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕೆ.ಸಿ ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದ್ದಾರೆ. ಮೊದಲಿಗೆ, ಬೆಳಗ್ಗೆ 10.30ರ ವೇಳೆಗೆ ವೇಣುಗೋಪಾಲ್ ಏರ್ಪೋರ್ಟ್ ಆಗಮಿಸಿದ್ದು ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಶಾಲು ಹೊದಿಸಿ ಸ್ವಾಗತಿಸಿದ್ದು ಈ ವೇಳೆ, ಡಿಕೆ ಡಿಕೆ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. 

ವೇಣುಗೋಪಾಲ್ ಹೊರಗೆ ಬಂದು ಕಾರು ಹತ್ತುವಾಗಲೂ ಸುತ್ತುವರಿದ ಕಾರ್ಯಕರ್ತರು ಡಿಕೆಶಿ ಸಿಎಂ ಆಗಬೇಕೆಂದು ಮಿಥುನ್ ರೈ ನೇತೃತ್ವದಲ್ಲಿ ಘೋಷಣೆ ಹಾಕಿದ್ದಾರೆ. ಇದೇ ವೇಳೆ, ಮಾತನಾಡಿದ ಮಿಥುನ್ ರೈ, ಸಿದ್ದರಾಮಯ್ಯ ಅವರು ನಾಡು ಕಂಡ ಅದ್ಭುತ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಧಿಕಾರ ಹಂಚಿಕೆಯಾಗಿ ಡಿಕೆಶಿ ಸಿಎಂ ಆಗೋದಾದರೆ ನಾವು ಅತಿ ಹೆಚ್ಚು ಸಂತೋಷ ಪಡುತ್ತೇವೆ. ಇದಕ್ಕಾಗಿ ಡಿಕೆ ಪರವಾಗಿ ಘೋಷಣೆ ಕೂಗಿದ್ದೇವೆ ಎಂದು ಹೇಳಿದರು.

ಆನಂತರ, 11 ಗಂಟೆ ವೇಳೆಗೆ ಸಿಎಂ ಸಿದ್ದರಾಮಯ್ಯ ಮಂಗಳೂರು ಏರ್ಪೋರ್ಟ್ ಬಂದಿದ್ದು ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಸಿದ್ದರಾಮಯ್ಯ ಪರವಾಗಿಯೂ ಘೋಷಣೆ ಕೇಳಿಬಂದಿದೆ. ಮಾಜಿ ಎಂಎಲ್ಲಿ ಐವಾನ್ ಡಿಸೋಜ ನೇತೃತ್ವದಲ್ಲಿ ಬೆಂಬಲಿಗರು ಘೋಷಣೆ ಹಾಕಿದ್ದು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಬೇಕೆಂದು ಜೈಕಾರ ಹಾಕಿದ್ದಾರೆ. ಸಿದ್ದರಾಮಯ್ಯ ಅವರು ಕೈ ಸನ್ನೆ ಮೂಲಕ ಘೋಷಣೆ ಬೇಡವೆಂದರೂ ಘೋಷಣೆ ಹಾಕಿದ್ದಾರೆ. ಆಮೂಲಕ ಡಿಕೆ ಪರ ಘೋಷಣೆಗೆ ಪ್ರತಿಯಾಗಿ ಸಿದ್ದು ಸಿದ್ದು ಎಂದು ಘೋಷಣೆ ಕೂಗಿದ್ದಲ್ಲದೆ, ಸಿಎಂ ಮತ್ತು ಡಿಸಿಎಂ ಡಿನ್ನರ್ ಮೀಟಿಂಗ್ ಆದ್ರೂ ಅಧಿಕಾರ ಹಂಚಿಕೆ ವಿಷಯ ಇತ್ಯರ್ಥ ಆಗಿಲ್ಲ ಎನ್ನುವುದನ್ನು ತೋರಿಸಿದಂತಾಗಿದೆ.‌

At a time when debates over power-sharing and a possible change in the Chief Ministership are intensifying in Karnataka, the arrival of Chief Minister Siddaramaiah and AICC General Secretary KC Venugopal at the Mangaluru International Airport today witnessed dramatic scenes. Supporters raised competing slogans favouring both Deputy Chief Minister DK Shivakumar and Chief Minister Siddaramaiah.