ಬ್ರೇಕಿಂಗ್ ನ್ಯೂಸ್
27-12-20 10:51 pm Mangaluru Correspondent ಕರಾವಳಿ
ಮಂಗಳೂರು, ಡಿ.27: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಮಧ್ಯಾಹ್ನ ಹೈ ಎಲರ್ಟ್ ಆಗಿತ್ತು. ನಿಗೂಢ ವಸ್ತುವೊಂದು ಆಕಾಶ ಮಾರ್ಗದಲ್ಲಿ ಹಳೆ ಏರ್ಪೋರ್ಟ್ ಆವರಣದಲ್ಲಿ ಬಂದು ಬಿದ್ದಿದ್ದು ಅಲ್ಲಿನ ಭದ್ರತಾ ಸಿಬಂದಿಯನ್ನು ಚಕಿತರನ್ನಾಗಿಸಿತ್ತು.
ನಿಗೂಢ ವಸ್ತು ಬರುತ್ತಲೇ ಸಿಐಎಸ್ಎಫ್ ಭದ್ರತಾ ಸಿಬಂದಿ ಹೈ ಎಲರ್ಟ್ ಆಗಿದ್ದರು. ಯಾವುದೇ ಕ್ಷಣವನ್ನು ಎದುರಿಸಲು ಸಜ್ಜಾಗಿದ್ದರು. ನೀಲ ಬಣ್ಣದ ಬೆಳಕು ಬೀರುತ್ತಿದ್ದ ಸಣ್ಣ ರೀತಿಯ ವಸ್ತು ಹಳೆ ಏರ್ಪೋರ್ಟ್ ಆವರಣದಲ್ಲಿ ಬಂದು ಬಿದ್ದಿತ್ತು. ವಸ್ತು ಬಿದ್ದ ಬಳಿಕವೂ ಮಿನುಗುತ್ತಲೇ ಇತ್ತು. ಹೀಗೆ ಮಿನುಗುತ್ತಿದ್ದುದೇ ಅಲ್ಲಿನ ಭದ್ರತಾ ಪಡೆಗಳ ಚಿಂತೆಗೆ ಕಾರಣವಾಗಿತ್ತು. ಕಳೆದ ವರ್ಷ ಆದಿತ್ಯ ರಾವ್ ಎಂಬಾತ ಸಜೀವ ಬಾಂಬನ್ನೇ ಇಟ್ಟಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಇದು ಮತ್ತೊಂದು ರೀತಿಯ ಬಾಂಬ್ ಆಗಿದ್ದಿರಲೂಬಹುದು ಎಂಬ ಅನುಮಾನ, ಭಯ ಭದ್ರತಾ ಸಿಬಂದಿಯನ್ನು ಕಾಡಿತ್ತು. ಆದರೂ, ವಿಷಯ ಹೊರಗಿನ ಮಂದಿಗೆ ಗೊತ್ತಾಗದ ರೀತಿ ಸಿಐಎಸ್ಎಫ್ ಕಾರ್ಯಾಚರಣೆ ನಡೆಸಿತ್ತು.
ಹಳೆ ಏರ್ಪೋರ್ಟ್ ಆವರಣದಲ್ಲಿ ನಿಗೂಢ ವಸ್ತು ಬಂದು ಬಿದ್ದ ಜಾಗಕ್ಕೆ ನಿಧಾನಕ್ಕೆ ತೆರಳಿದ್ದರು. ಸ್ಥಳಕ್ಕೆ ತೆರಳಿ ನೋಡಿದಾಗ, ಆಟಿಕೆ ರೀತಿಯ ಹೆಲಿಕಾಪ್ಟರ್ ಅಲ್ಲಿ ಬಿದ್ದಿತ್ತು. ಆದರೂ ನೀಲ ಬಣ್ಣದ ಲೈಟ್ ಅದರಲ್ಲಿ ಮಿನುಗುತ್ತಲೇ ಇತ್ತು. ಸಿಐಎಸ್ಎಫ್ ವಿಭಾಗದ ತಜ್ಞ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕೊನೆಗೆ, ಅದು ಬರೀಯ ಹೆಲಿಕಾಪ್ಟರ್ ಆಟಿಕೆ ಎಂಬುದಾಗಿ ನಿರ್ಧಾರಕ್ಕೆ ಬಂದರು. ರಿಮೋಟ್ ಕಂಟ್ರೋಲ್ ಮೂಲಕ ಚಾಲನೆಯಾಗುವ ಹೆಲಿಕಾಪ್ಟರ್ ಅದಾಗಿತ್ತು.
ಹಳೆ ಏರ್ಪೋರ್ಟ್ ಬಳಿ ಆಸುಪಾಸಿನಲ್ಲಿ ಒಂದಷ್ಟು ಮನೆಗಳು ಇವೆ. ಅಪಾರ್ಟ್ಮೆಂಟ್ ಕೂಡ ಇದೆ. ಅಲ್ಲಿನ ಮಕ್ಕಳು ರಿಮೋಟ್ ಆಧರಿತ ಹೆಲಿಕಾಪ್ಟರ್ ಅನ್ನು ಆಕಾಶಕ್ಕೆ ಬಿಟ್ಟಿದ್ದರು. ಆದರೆ, ಆಕಾಶಕ್ಕೆ ಹಾರಿದ ಹೆಲಿಕಾಪ್ಟರ್ ಹಳೆ ಏರ್ಪೋರ್ಟ್ ಕಡೆಗೆ ಸಾಗುತ್ತಾ ಅಲ್ಲಿ ರಿಮೋಟ್ ನಿಯಂತ್ರಣಕ್ಕೆ ಸಿಗದೆ ನೆಲಕ್ಕೆ ಬಿದ್ದಿದೆ. ಆವರಣದಲ್ಲಿ ಬಿದ್ದ ರೀತಿ ಮಾತ್ರ ಭದ್ರತಾ ಸಿಬಂದಿಯನ್ನು ದಂಗು ಬಡಿಸಿತ್ತು.
Strange item that was found outside the Mangalore International Airport created panic among security personals and public. Later it was found that it was Helicopter Toy that had fallen accidentally when some children's were playing who reside nearby airport.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm