ಬ್ರೇಕಿಂಗ್ ನ್ಯೂಸ್
23-12-20 10:26 pm Mangaluru Correspondent ಕರಾವಳಿ
ಮಂಗಳೂರು, ಡಿ.23: ಮಾಜಿ ಸಚಿವ, ಉಳ್ಳಾಲ ಶಾಸಕ ಯು.ಟಿ.ಖಾದರ್ ಅವರನ್ನು ಬೈಕಿನಲ್ಲಿ ಬಂದಿದ್ದ ಇಬ್ಬರು ಫಾಲೋ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಪರಾರಿಯಾಗಿದ್ದಾರೆ ಎನ್ನುವ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.
ಯು.ಟಿ.ಖಾದರ್ ಸಂಜೆ 6 ಗಂಟೆ ಸುಮಾರಿಗೆ ದೇರಳಕಟ್ಟೆಯಿಂದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗಿದ್ದರು. ತುರ್ತು ಬೆಂಗಳೂರಿಗೆ ತೆರಳುವುದಕ್ಕಾಗಿ ಬಜ್ಪೆ ವಿಮಾನ ನಿಲ್ದಾಣದತ್ತ ಕಾರಿನಲ್ಲಿ ಹೋಗುತ್ತಿದ್ದರು. ಪೊಲೀಸ್ ಎಸ್ಕಾರ್ಟ್ ವಾಹನದಲ್ಲಿ ಸಾಗುತ್ತಿದ್ದಾಗ ಇಬ್ಬರು ಯುವಕರು ಬೈಕೊಂದರಲ್ಲಿ ಹಿಂದಿನಿಂದಲೇ ಬಂದಿದ್ದಾರೆ. ತೊಕ್ಕೊಟ್ಟಿನಿಂದ ಪಂಪ್ವೆಲ್ ದಾರಿಯಾಗಿ ಕಾರಿನ ಹಿಂದಿನಿಂದ ಬಂದಿದ್ದು ಇದರಿಂದ ಸಂಶಯಗೊಂಡ ಎಸ್ಕಾರ್ಟ್ ನಲ್ಲಿದ್ದ ಪೊಲೀಸರು ಕಾರು ನಂತೂರಿನಲ್ಲಿ ಟ್ರಾಫಿಕ್ ನಿಂದಾಗಿ ಸ್ಲೋ ಆಗುತ್ತಿದ್ದಂತೆ ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಯುವಕರು ಈ ವೇಳೆ ಬೈಕಿನಲ್ಲಿ ಯು ಟರ್ನ್ ಪಡೆದು ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಬೈಕಿನ ನಂಬರ್ ನೋಟ್ ಮಾಡಿ ಟ್ರಾಫಿಕ್ ಎಸಿಪಿಗೆ ತಿಳಿಸಿದ್ದಾರೆ. ಟ್ರಾಫಿಕ್ ಪೊಲೀಸರು ಬೈಕ್ ಪತ್ತೆ ಕಾರ್ಯ ಮಾಡುತ್ತಿದ್ದಾರಂತೆ. ಹೀಗೆಂದು ಯು.ಟಿ.ಖಾದರ್ ಪಿಎ ಆಗಿರುವ ಲಿಬ್ಝಿ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಘಟನೆ ಬಗ್ಗೆ ಶಾಸಕರ ಕಡೆಯಿಂದ ಪೊಲೀಸ್ ದೂರು ನೀಡಿಲ್ಲ. ಹಾಗಿದ್ದರೂ, ಕೆಲವು ಅತಿರೇಕದ ಮಾಧ್ಯಮಗಳು ಮತ್ತೊಬ್ಬ ಶಾಸಕರ ಕೊಲೆಯತ್ನ ಎಂದು ಸುದ್ದಿ ಮಾಡಿವೆ. ಈ ಮಾಧ್ಯಮಗಳಿಗೆ ಕೊಲೆಯತ್ನ ಮಾಡಿದ್ದಾಗಿ ಯಾರು ಹೇಳಿದ್ದೋ ಗೊತ್ತಿಲ್ಲ. ಶಾಸಕರ ಹೆಸರನ್ನು ರಾಜ್ಯದಲ್ಲಿ ಒಮ್ಮೆಗೆ ರಾರಾಜಿಸಲು ಈ ರೀತಿ ಮಾಡಿದ್ದಿರಬಹುದು. ಯಾರೋ ಇಬ್ಬರು ಯುವಕರು ಶಾಸಕರ ಕಾರಿನ ಹಿಂದೆ ಬಂದ ಕೂಡಲೇ ಅವರು ಕೊಲೆ ಮಾಡುವುದಕ್ಕಾಗಿಯೇ ಬರಬೇಕೆ ? ಪೊಲೀಸರ ಎಸ್ಕಾರ್ಟ್ ವಾಹನ ಇರುವಾಗ ಇಬ್ಬರು ಬೈಕಿನಲ್ಲಿ ಬಂದು ಏನೂ ಮಾಡದೇ ಇದ್ದರೂ, ಕೊಲೆಯತ್ನ ಎಂದೇ ಸುದ್ದಿ ಹಬ್ಬಿಸಿದ್ದರ ಹಿಂದೆ ಹಿಡನ್ ಅಜೆಂಡಾ ಇರಬಹುದು. ರಾಜ್ಯ ಮಟ್ಟದ ಸುದ್ದಿ ವಾಹಿನಿಗಳು ಪೊಲೀಸ್ ದೂರು ದಾಖಲಾಗದೇ ಇದ್ದರೂ ಶಾಸಕರ ಕೊಲೆಯತ್ನವೆಂದು ಸುದ್ದಿ ಮಾಡಿದ್ದಾರೆ ಎನ್ನುವುದೇ ಸೋಜಿಗ.

ಈ ಬಗ್ಗೆ ಮಂಗಳೂರಿನ ಪೊಲೀಸರಲ್ಲಿ ಕೇಳಿದರೆ, ಯಾವುದೇ ದೂರು ದಾಖಲಾಗಿಲ್ಲ ಎನ್ನುತ್ತಾರೆ. ಟಿವಿಯಲ್ಲಿ ಸುದ್ದಿ ಬಂದಿರುವ ಕಾರಣ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎನ್ನುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಕೇಳಿದರೆ, ನಗುವನ್ನೇ ಉತ್ತರವಾಗಿ ಕೊಡುತ್ತಾರೆ. ನಂಬಲು ಸಾಧ್ಯವಾಗದ ವಿಚಾರಗಳು ಕೆಲವೊಮ್ಮೆ ಮಾಧ್ಯಮಗಳ ಪ್ರಭಾವದಲ್ಲಿ ಎಷ್ಟು ಬೇಗ ಪ್ರಭಾವ ಪಡೆಯುತ್ತವೆ ಎಂದು ಪ್ರಶ್ನೆ ಮಾಡುತ್ತಾರೆ !

ಯು.ಟಿ.ಖಾದರ್ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದ ವೇಳೆ ಎಸ್ಕಾರ್ಟ್ ಬೇಡ ಎಂದಿದ್ದರು. ನನ್ನನ್ನು ಯಾರು ಕೊಲ್ಲಲು ಬರುತ್ತಾರೆ ಎನ್ನುತ್ತಿದ್ದರು. ಬಳಿಕ ಕುಮಾರಸ್ವಾಮಿ ಸರಕಾರದಲ್ಲಿ ಸಚಿವರಾಗಿದ್ದಾಗಲೂ ಎಸ್ಕಾರ್ಟ್ ಬೇಡ ಎಂದಿದ್ದು ನೆನಪು. ಆಬಳಿಕ ಮೈಸೂರಿನಲ್ಲಿ ತನ್ವೀರ್ ಸೇಠ್ ಮೇಲೆ ಎಸ್ ಡಿಪಿಐ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಹಲ್ಲೆ ಮಾಡಿದ್ದು ಆರೋಪಿ ಯು.ಟಿ ಖಾದರ್ ಮೇಲೂ ದಾಳಿಗೆ ಯೋಜನೆ ಹಾಕಿದ್ದೇವೆ ಎಂದಿದ್ದು ಖಾದರ್ ಜೊತೆಗೆ ಎಸ್ಕಾರ್ಟ್ ತಿರುಗುವಂತಾಗಿತ್ತು. ಸದಾ ಜೊತೆಗೊಬ್ಬ ಗನ್ ಮೆನ್ ಅದು ಬಿಟ್ಟು ಎಸ್ಕಾರ್ಟ್ ಈಗ ಮಾಜಿ ಸಚಿವನಾದ್ರೂ ಮುಂದುವರಿದಿದೆ.

ಈಗ ಇಬ್ಬರು ಅಪರಿಚಿತರು ಬೈಕಿನಲ್ಲಿ ಹಿಂದಿನಿಂದ ಬಂದರೆಂದು ಮುಂದಿನಿಂದ ಮತ್ತೊಂದು ಪೊಲೀಸ್ ಜೀಪು ಹೋಗುವಂತಾದರೆ ಅಚ್ಚರಿ ಇಲ್ಲ. ಕಾಕತಾಳೀಯ ಎಂದರೆ, ನಿನ್ನೆಯಷ್ಟೇ ಪಂಚಾಯತ್ ಮತದಾನ ಸಂದರ್ಭ ಎಸ್ ಡಿಪಿಐ - ಕಾಂಗ್ರೆಸ್ ಜಟಾಪಟಿ ನಡೆದಿತ್ತು. ಸಂಜೆ ಖಾದರ್ ನೇತೃತ್ವದಲ್ಲಿ ಕೊಣಾಜೆ ಠಾಣೆಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಮರುದಿನ ಯುಟಿ ಖಾದರ್ ಕಾರನ್ನು ಹಿಂಬಾಲಿಸಿದ ಘಟನೆ ನಡೆದಿದೆ ಎನ್ನುವ ಸುದ್ದಿ ಹಬ್ಬಿದ್ದು ಸಹಜವಾಗೇ ಅದೇ ಸಂಘಟನೆಯ ಮೇಲೆ ಬೆರಳು ತೋರುವಂತಾಗಿದ್ದೂ ಅಚ್ಚರಿ ಆಗಿಲ್ಲ.
Former Congress Minister U T Khader has alleged that Tow Bike-Borne Men were following their car from Derlakatte to Nantoor, Mangalore about 10 Kms and flee as they stopped the car at Nantoor Junction. Police have registered the case and are investigating it.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am