Mangalore Modern Fire Safety , Ullal Fire Station: ಅಗ್ನಿ ಅವಘಡ ತಪ್ಪಿಸಲು ಹೊಸ ಅವಿಷ್ಕಾರದ ರಕ್ಷಣಾ ಸಲಕರಣೆಗಳ ಆಮದು ; ಉಳ್ಳಾಲದಲ್ಲಿ ನೂತನ ಅಗ್ನಿಶಾಮಕ ಠಾಣೆಗೆ ಗೃಹ ಸಚಿವರಿಂದ ಶಂಕುಸ್ಥಾಪನೆ, ಮೂಲ್ಕಿ, ಕಡಬ ತಾಲೂಕುಗಳಿಗೂ ಠಾಣೆ ಮಂಜೂರು 

09-07-25 06:20 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಬಹುಮಹಡಿ ಕಟ್ಟಡಗಳು ಭರದಿಂದ‌ ನಿರ್ಮಾಣಗೊಳ್ಳುತ್ತಿದ್ದು ಅಕಸ್ಮಾತ್ ಅಗ್ನಿ ಅವಘಡಗಳು ಸಂಭವಿಸಿದರೆ ಬಹುಮಹಡಿಗಳಿಗೆ ಏರಿ ಬೆಂಕಿ ನಂದಿಸಲು ಕಷ್ಟ ಸಾಧ್ಯ. ಹಾಗಾಗಿ ಆಧುನಿಕ ದುರಂತಗಳನ್ನ ತಪ್ಪಿಸಲು ಹೊಸ ಆವಿಷ್ಕಾರದ 90 ಮೀಟರ್ ಎತ್ತರದ ಏಣಿಗಳು ಸೇರಿದಂತೆ ಇತರ ರಕ್ಷಣಾ ಸಲಕರಣೆಗಳನ್ನ ಆಮದು ಮಾಡಿದ್ದೇವೆ.

ಉಳ್ಳಾಲ, ಜು.9 : ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಬಹುಮಹಡಿ ಕಟ್ಟಡಗಳು ಭರದಿಂದ‌ ನಿರ್ಮಾಣಗೊಳ್ಳುತ್ತಿದ್ದು ಅಕಸ್ಮಾತ್ ಅಗ್ನಿ ಅವಘಡಗಳು ಸಂಭವಿಸಿದರೆ ಬಹುಮಹಡಿಗಳಿಗೆ ಏರಿ ಬೆಂಕಿ ನಂದಿಸಲು ಕಷ್ಟ ಸಾಧ್ಯ. ಹಾಗಾಗಿ ಆಧುನಿಕ ದುರಂತಗಳನ್ನ ತಪ್ಪಿಸಲು ಹೊಸ ಆವಿಷ್ಕಾರದ 90 ಮೀಟರ್ ಎತ್ತರದ ಏಣಿಗಳು ಸೇರಿದಂತೆ ಇತರ ರಕ್ಷಣಾ ಸಲಕರಣೆಗಳನ್ನ ಆಮದು ಮಾಡಿದ್ದೇವೆ. ರಾಷ್ಟ್ರೀಯ ಕಮಿಷನ್ ನ ಆದೇಶದಂತೆ ಪ್ರತೀ ತಾಲೂಕಲ್ಲೂ ಅಗ್ನಿಶಾಮಕ ಠಾಣೆಗಳನ್ನ ನಿರ್ಮಿಸುವ ತೀರ್ಮಾನ ಮಾಡಿದ್ದೇವೆ. ಈಗಾಗಲೇ ರಾಜ್ಯದಲ್ಲಿ 220 ಅಗ್ನಿಶಾಮಕ ಠಾಣೆಗಳಿದ್ದು, ಇನ್ನೂ 40 ಠಾಣೆಗಳ ನಿರ್ಮಾಣಕ್ಕೆ ಪ್ರಸ್ತಾಪ ಇದೆ. ಜಿಲ್ಲೆಯ ಕಡಬ ಮತ್ತು ಮೂಲ್ಕಿ ತಾಲೂಕುಗಳಿಗೆ ಹೊಸತಾಗಿ ಅಗ್ನಿಶಾಮಕ ಠಾಣೆಗಳು ಮಂಜೂರಾತಿಯಾಗಿದ್ದು ತಲಾ ಮೂರು ಕೋಟಿ ಅನುದಾನದಲ್ಲಿ ನೂತನ ಠಾಣೆಗಳು ನಿರ್ಮಾಣಗೊಳ್ಳಲಿವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಕಂಬಳಪದವಿನಲ್ಲಿ ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಅಗ್ನಿಶಾಮಕ ಠಾಣೆಯ ಕಟ್ಟಡಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕರಾವಳಿಯ ರಾಸಾಯನಿಕ ಘಟಕ ಮತ್ತು ಬಂದರುಗಳ ಪೆಟ್ರೋಲಿಯಮ್‌ ಘಟಕಗಳಲ್ಲಿ ಅಗ್ನಿ ಆಕಸ್ಮಿಕವಾಗದಂತೆ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಹದಿನೈದು ವರ್ಷ ಪೂರೈಸಿದ ವಾಹನಗಳನ್ನ ಬಳಸಬೇಡಿ ಎಂದು ಕೇಂದ್ರ ಸರಕಾರವು ಆದೇಶಿಸಿದ ಪರಿಣಾಮ‌ ಇಲಾಖೆಯಲ್ಲಿ ಎರಡು ಸಾವಿರ ಕಿಮೀ.ನಷ್ಟೂ ಓಡದ ವಾಹನಗಳು ಉಪಯೋಗಕ್ಕೆ ಬಾರದಂತಾಗಿದೆ. ಹೊಸ ವಾಹನಗಳ ಖರೀದಿಗೆ  ಮುಖ್ಯಮಂತ್ರಿಗಳು ಐವತ್ತು ಕೋಟಿ ರೂಪಾಯಿಗಳನ್ನ ಮಂಜೂರು ಮಾಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗಿನ‌ ಬಹುತೇಕ ಕಡೆಗಳಲ್ಲಿ ಭೂ ಕುಸಿತಗಳು ನಡೆದು ಹೋಗಿದೆ. ಪೃಕೃತಿ ನಾಶದಲ್ಲಿ ನಾವು ಎತ್ತಿದ ಕೈಗಳಾಗಿರುವುದರಿಂದಲೇ ಪ್ರಾಕೃತಿಕ ವಿಕೋಪಗಳು ಘಟಿಸುತ್ತಿವೆ. ಅಂತಹ ಕ್ಲಿಷ್ಟಕರ ಸಂದರ್ಭಗಳಲ್ಲೂ ತಮ್ಮ‌ ಪ್ರಾಣವನ್ನೂ ಲೆಕ್ಕಿಸದೆ, ಸಾವಿರಕ್ಕೂ ಅಧಿಕ ಕೋಟಿಯ ಆಸ್ತಿಪಾಸ್ತಿಗಳನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದರು.

ಸರಕಾರದಲ್ಲಿ ದುಡ್ಡಿಲ್ಲ ಎಂಬ ಆರೋಪಗಳನ್ನ ಕೇಳುತ್ತಿದ್ದೇವೆ. ದುಡ್ಡಿಲ್ಲದಿದ್ದರೆ ಉಳ್ಳಾಲದಂತಹ ಪ್ರದೇಶಗಳು ಅಭಿವೃದ್ಧಿ ಆಗಲು ಸಾಧ್ಯವೇ ಎಂದು ಯೋಚಿಸಬೇಕಿದೆ. ಐದು ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿವೆ. ಗ್ಯಾರಂಟಿಗಳನ್ನ ನಾವು ಕೇವಲ ಕಾಂಗ್ರೆಸಿಗರಿಗೆ ಮಾತ್ರ ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಪ್ರತೀ ಶಾಸಕರಿಗೂ ಐವತ್ತು ಕೋಟಿ ರೂಪಾಯಿ ಅನುದಾನದ ಆಕ್ಷನ್ ಪ್ಲ್ಯಾನ್ ರೂಪಿಸಿದ್ದಾರೆಂದರು.

ಯು.ಟಿ.ಖಾದರ್ಗೆ ದೊಡ್ಡ ಭವಿಷ್ಯ ಇದೆ 

ಸ್ಪೀಕರ್ ಸ್ಥಾನವನ್ನ ನಿಭಾಯಿಸೋದು ಬಹಳ ಕಷ್ಟಕರ. ಐದಾರು ಬಾರಿ ಶಾಸಕರಾಗಿ ಅನುಭವ ಅಥವಾ ಹಿರಿತನದ‌‌ ಆಧಾರದಲ್ಲಿ ಸ್ಪೀಕರ್ ಸ್ಥಾನ ಸಿಗುತ್ತದೆ. ಅಂತಹ ಸ್ಪೀಕರ್ ಸ್ಥಾನವನ್ನ ಕೊಟ್ಟಾಗಲೂ ಖಾದರ್ ಅವರು ಅದನ್ನ‌ ಪ್ರಾಮಾಣಿಕವಾಗಿ ನಿಭಾಯಿಸಿ ಇಡೀ ರಾಜ್ಯ ಗಮನಸೆಳೆಯುವಂತೆ ಅನೇಕ ಬದಲಾವಣೆ ತಂದು ಸದನದ ಗೌರವವನ್ನ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಅವರಿಗಿನ್ನೂ ದೊಡ್ಡ ಭವಿಷ್ಯ ಇದೆ, ಅದನ್ನ ನಾನು ಹೇಳೋಕೋಗಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ‌ ಉಳ್ಳಾಲವು ಪ್ರತ್ಯೇಕ ತಾಲೂಕು ಆಗಿ ಘೋಷಣೆ ಆದ ನಂತರ ಸರಕಾರದಿಂದ‌ ಹಂತ ಹಂತವಾಗಿ ಸವಲತ್ತುಗಳು ಇಲ್ಲಿಗೆ ಹರಿದು ಬರುತ್ತಿವೆ. ಕಳೆದ ಚುನಾವಣೆಯಲ್ಲಿ ವಿರೋಧ ಪಕ್ಷದವರು ತನ್ನ ವಿರುದ್ಧ ಟೀಕೆಗೆ ಏನೂ ಅಸ್ತ್ರಗಳಿಲ್ಲದೆ ಉಳ್ಳಾಲಕ್ಕೆ ಅಗ್ನಿಶಾಮಕ ಠಾಣೆ ಇಲ್ಲವೆಂದು ಕ್ಯಾತೆ ತೆಗೆದಿದ್ದರು. ಅವರ ಟೀಕೆಗೂ ಪರಿಹಾರ ಎಂಬಂತೆ ಉಳ್ಳಾಲದಲ್ಲಿ ರಾಜ್ಯಕ್ಕೆ ಮಾದರಿಯಾದ ಅಗ್ನಿಶಾಮಕ ಘಟಕವನ್ನ ನಿರ್ಮಿಸುತ್ತಿರುವುದಾಗಿ ಹೇಳಿದರು.

ಅಗ್ನಿಶಾಮಕ ಇಲಾಖೆಯ ಉಪ ನಿರ್ದೇಶಕರಾದ ಈಶ್ವರ ನಾಯಕ್, ಮಂಗಳೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಮ್ ತಿರುಮಲೇಶ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ರಾಜ್ಯ ಗೇರು ನಿಗಮದ‌ ಅಧ್ಯಕ್ಷರಾದ ಮಮತಾ ಡಿ.ಎಸ್ ಗಟ್ಟಿ, ಪಜೀರು ಗ್ರಾಪಂ ಅಧ್ಯಕ್ಷರಾದ ಮಹಮ್ಮದ್ ರಫೀಕ್ ಪಜೀರು ಮೊದಲಾದವರು ಉಪಸ್ಥಿತರಿದ್ದರು.

In light of the increasing number of high-rise buildings across Karnataka, the state government has taken a significant step to modernize fire safety infrastructure. To combat the challenges of firefighting in tall structures, the government has imported state-of-the-art fire safety equipment, including ladders up to 90 meters high, said Home Minister Dr. G. Parameshwara.