Puttur pregnant girl, Ashok Rai: ಯುವತಿ ಹೇಳಿಕೆಯ ವಿಡಿಯೋ ವೈರಲ್ ; ಹುಡುಗನೇ ತನ್ನ ಮನೆಗೆ ಕರೆಸಿ ದೈಹಿಕ ಸಂಪರ್ಕ ನಡೆಸಿದ್ದ! ಎಫ್ಐಆರ್ ಬೇಡವೆಂದು ಮದುವೆಗೆ ಒಪ್ಪಿದ್ದ ಕುಟುಂಬಸ್ಥರು, ಆರೋಪಿ ಬಂಧಿಸಲು ಪೊಲೀಸರಿಗೆ ಶಾಸಕ ಅಶೋಕ್ ರೈ ಆಗ್ರಹ  

04-07-25 09:44 pm       Mangalore Correspondent   ಕರಾವಳಿ

ಬಿಎಸ್ಸಿ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ದೈಹಿಕ ಸಂಪರ್ಕ ನಡೆಸಿ ಗರ್ಭಿಣಿಯಾಗಿಸಿ ಮಗುವಿನ ಜನನಕ್ಕೆ ಕಾರಣನಾದ ಪ್ರಕರಣದಲ್ಲಿ ಆರೋಪಿಯಾದ ಯುವಕನನ್ನು ಕೂಡಲೇ ಬಂಧಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅವರಿಗೆ ಫೋನ್ ಕರೆ ಮಾಡಿ ಆಗ್ರಹ ಮಾಡಿದ್ದಾರೆ.

ಪುತ್ತೂರು, ಜುಲೈ 4 : ಬಿಎಸ್ಸಿ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ದೈಹಿಕ ಸಂಪರ್ಕ ನಡೆಸಿ ಗರ್ಭಿಣಿಯಾಗಿಸಿ ಮಗುವಿನ ಜನನಕ್ಕೆ ಕಾರಣನಾದ ಪ್ರಕರಣದಲ್ಲಿ ಆರೋಪಿಯಾದ ಯುವಕನನ್ನು ಕೂಡಲೇ ಬಂಧಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅವರಿಗೆ ಫೋನ್ ಕರೆ ಮಾಡಿ ಆಗ್ರಹ ಮಾಡಿದ್ದಾರೆ.

ಪ್ರಕರಣ ದಾಖಲಾಗಿ ಒಂದು ವಾರ ಕಳೆದರೂ ಆರೋಪಿ ಯುವಕನ ಬಂಧನ ಆಗದೇ ಇರುವುದು ಪೊಲೀಸ್ ಇಲಾಖೆಯ ವೈಫಲ್ಯವಾಗಿದೆ. ಆರೋಪಿ ಎಲ್ಲೇ ಅಡಗಿದ್ದರೂ ಬಂಧಿಸಿ ಕರೆತನ್ನಿ. ಇದಕ್ಕೆ ಬೇಕಾದರೆ ವಿಶೇಷ ಪೊಲೀಸ್ ತಂಡವನ್ನು ರಚಿಸಿ. ಯುವತಿ ಮಗುವಿಗೆ ಜನ್ಮವಿತ್ತರೂ ಆರೋಪಿಯನ್ನು ಹಿಡಿಯಲಾಗದೆ ಇರುವ ವಿಚಾರದಲ್ಲಿ ಸಾರ್ವಜನಿಕರು ತಪ್ಪು ಅಭಿಪ್ರಾಯದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಎರಡು ದಿನದೊಳಗೆ ಆರೋಪಿಯನ್ನು ಹಿಡಿದು ನ್ಯಾಯಾಂಗದ ಮುಂದೆ ತರಬೇಕೆಂದು ಅಶೋಕ್ ರೈ ಒತ್ತಾಯ ಮಾಡಿದ್ದಾರೆ.

Comprehensive development of Puttur constituency by strengthening  infrastructure is priority, says Ashok Kumar Rai - The Hindu

ಇದೇ ವೇಳೆ, ಸಂತ್ರಸ್ತ ಯುವತಿ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಪ್ರತಿಕ್ರಿಯೆ ನೀಡಿರುವ ವಿಡಿಯೋ ವೈರಲ್ ಆಗಿದ್ದು, ತನಗಾದ ಅನ್ಯಾಯದ ಬಗ್ಗೆ ಪೂರ್ತಿ ಮಾಹಿತಿ ನೀಡಿದ್ದಾರೆ. ನಾವು ಹೈಸ್ಕೂಲ್ ನಿಂದಲೂ ಪರಸ್ಪರ ಪ್ರೀತಿಸುತ್ತಿದ್ದೆವು. ಕಳೆದ ಒಂದು ವರ್ಷದಲ್ಲಿ ಐದು ಬಾರಿ ದೈಹಿಕ ಸಂಪರ್ಕ ಮಾಡಿದ್ದೆವು. ಅಕ್ಟೋಬರ್, ಜನವರಿ, ಫೆಬ್ರವರಿಯಲ್ಲಿ ಹುಡುಗನೇ ನನ್ನನ್ನು ಆತನ ಮನೆಗೆ ಕರೆಸಿಕೊಂಡು ದೈಹಿಕ ಸಂಪರ್ಕ ಮಾಡಿದ್ದ. ಮನೆಯಲ್ಲಿ ಯಾರೂ ಇಲ್ಲವೆಂದು ಕರೆದು ಕೃತ್ಯ ಎಸಗಿದ್ದ. ತನಗೆ ತಿಂಗಳ ಪೀರಿಯಡ್ಸ್ ಸರಿಯಾಗಿ ಆಗುತ್ತಿರಲಿಲ್ಲ. 3-4 ತಿಂಗಳಿಗೊಮ್ಮೆ ಆಗ್ತಾ ಇತ್ತು. ಹೀಗಾಗಿ ತಿಂಗಳ ಮುಟ್ಟು ಏರುಪೇರು ಆಗುತ್ತಿದ್ದರೂ ಸಹಜ ಎಂದೆನಿಸಿ ಟೆಸ್ಟ್ ಮಾಡಿರಲಿಲ್ಲ. ಆನಂತರ, ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಟೆಸ್ಟ್ ಕಿಟ್ ಅನ್ನು ಅದೇ ಯುವಕನೇ ತಂದುಕೊಟ್ಟಿದ್ದ. ಮಂಗಳೂರಿನ ಆಸ್ಪತ್ರೆಯಲ್ಲಿ ಚೆಕ್ ಮಾಡಿದಾಗ, 7 ತಿಂಗಳು ಪೂರ್ತಿಯಾಗಿರುವುದಾಗಿ ತಿಳಿಸಿದ್ದರು. ಏಳು ತಿಂಗಳ ಆದ ಬಳಿಕವೇ ಗರ್ಭ ಧರಿಸಿದ್ದು ತಿಳಿದುಬಂದಿತ್ತು.

ಇದರಂತೆ, ಮದುವೆ ಪ್ರಸ್ತಾಪ ಮಾಡಿದಾಗ ಹುಡುಗ ನನ್ನ ಮನೆಯವರಿಗೆ ಗೊತ್ತಾದರೆ ಕಷ್ಟ. ನಾನು ಆತ್ಮಹತ್ಯೆಯೇ ಮಾಡಬೇಕಾದೀತು ಎಂದು ಹೇಳಿದ್ದಾನೆ. ಆನಂತರ, ನಾವು ಸಂಘಟನೆಯ ಎಲ್ಲ ಪ್ರಮುಖರಿಗೂ ತಿಳಿಸಿದ್ದೆವು. ಆತನ ಮನೆಯವರಿಗೂ ತಿಳಿಸಿದ್ದು, ಮದುವೆಯಾಗಲು ನಿರಾಕರಿಸಿದ್ದಕ್ಕೆ ಪೊಲೀಸ್ ಠಾಣೆ ಹೋಗಿದ್ದೆವು. ಅಲ್ಲಿಗೆ ಹುಡುಗನ ತಂದೆ ಜಗನ್ನಿವಾಸ ರಾವ್ ಮತ್ತು ಆತನ ತಾಯಿ ಕೂಡ ಬಂದಿದ್ದು, ಅವನಿಗೆ 21 ವರ್ಷ ಆದಕೂಡಲೇ ಮದುವೆ ಮಾಡಿಸುವುದಕ್ಕೆ ಒಪ್ಪಿಗೆ ನೀಡಿದ್ದರು. ಅಲ್ಲದೆ, ಶಾಸಕ ಅಶೋಕ್ ರೈಯವರಿಗೆ ಫೋನ್ ಕರೆ ಮಾಡಿ, ಅವರಿಂದಲೇ ಮದುವೆಗೆ ಒಪ್ಪಿಗೆ ಇದೆ ಎಂದು ಹೇಳಿಸಿದ್ದರು. ಎಫ್ಐಆರ್ ಮಾಡದಂತೆಯೂ ಸಲಹೆ ನೀಡಿದ್ದರಿಂದ ಪೊಲೀಸರು ನಾವು ನೀಡಿದ್ದ ದೂರನ್ನು ಹರಿದು ಕಸದ ಬುಟ್ಚಿಗೆ ಹಾಕಿದ್ದರು.

ಈ ನಡುವೆ, ಹಿಂದು ಸಂಘಟನೆಯ ಕೆಲವರು ನಮಗೆ ಹಣದ ಆಫರ್ ಮಾಡಿದ್ದು ಗರ್ಭಪಾತ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಏಳೂವರೆ ತಿಂಗಳಲ್ಲಿ ಗರ್ಭಪಾತ ಮಾಡಿಸಲಾಗದು ಎಂದು ವೈದ್ಯರು ಹೇಳಿದರೂ, ಬಿಸಿ ರೋಡಿನ ಯಾರೋ ವೈದ್ಯರು ಮಗುವನ್ನು ತೆಗೆಸುತ್ತಾರೆಂದು ಸಲಹೆ ಮಾಡಿದ್ದರು. ಆದರೆ ನಾವು ಅದಕ್ಕೆ ಒಪ್ಪಿರಲಿಲ್ಲ. ಡೆಲಿವರಿಗೆ ದಿನ ಹತ್ತಿರ ಬಂದಾಗ ಮತ್ತೆ ಮದುವೆಗೆ ಒತ್ತಾಯಿಸಿದ್ದೆವು. ಈ ವೇಳೆ, ಆತನ ತಂದೆ ಮತ್ತು ಇತರರು ನಮ್ಮ ಮನೆಗೆ ಬಂದು ಮಾತುಕತೆ ನಡೆಸಿದ್ದರು. ಅದೇ ವೇಳೆ, ಹುಡುಗ ಕೃಷ್ಣ ರಾವ್ ಬಂದಿದ್ದು, ಮದುವೆಯಾಗಲ್ಲ ಎಂದು ನಿರಾಕರಣೆ ಮಾಡಿ ನನ್ನ ಬಗ್ಗೆಯೇ ಸಂಶಯದ ಮಾತುಗಳನ್ನಾಡಿದ್ದ. ಈ ನಡುವೆ ಡೆಲಿವರಿಗೆ ಜುಲೈ 4ರ ದಿನ ಕೊಟ್ಟಿದ್ದರೂ, ಮೊನ್ನೆ ಜೂನ್ 27ರಂದೇ ಡೆಲಿವರಿ ಮಾಡಿಸಿದ್ದಾರೆ. ಹುಡುಗ ಮದುವೆ ಆಗದೆ ವಂಚನೆ ಮಾಡಿರುವ ಬಗ್ಗೆ ಪೊಲೀಸ್ ದೂರು ಕೊಟ್ಟಿದ್ದೆವು. ಶಾಸಕ ಅಶೋಕ್ ರೈಯವರಿಗೆ ಹೇಳಿದಾಗ, ಇದು ನಿಮ್ಮ ಕುಟುಂಬದ ಖಾಸಗಿ ವಿಷಯ. ಮದುವೆ ಆಗದಿದ್ದರೆ ಕಾನೂನು ಪ್ರಕಾರ ಮುಂದುವರೆಯಿರಿ ಎಂದು ಹೇಳಿದ್ದಾಗಿ ಯುವತಿ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಒಟ್ಟು ಪ್ರಕರಣಕ್ಕೆ ಶಾಸಕ ಅಶೋಕ್ ರೈ ಸಾಕ್ಷಿ ಎನ್ನುವುದು ಬಿಂಬಿತವಾಗಿರುವುದು ಮತ್ತು ಜಗನ್ನಿವಾಸ ರಾವ್ ಬಿಜೆಪಿಯಲ್ಲಿದ್ದರೂ ಅಶೋಕ್ ರೈಯವರಿಗೆ ಆಪ್ತರಾಗಿದ್ದರಿಂದ ಶಾಸಕರೇ ಹಿಂದು ಯುವತಿಗೆ ನ್ಯಾಯ ಕೊಡಿಸುತ್ತಿಲ್ಲ ಎಂದು ಟೀಕೆ ಕೇಳಿಬಂದಿದೆ. ಇದೇ ವೇಳೆ, ಯುವತಿಯ ಸಮುದಾಯದ ವಿಶ್ವಕರ್ಮ ಸಂಘಟನೆಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದು, ನಮಗೆ ಒಬ್ಬರನ್ನು ಗೆಲ್ಲಿಸಲು ತಾಕತ್ ಇಲ್ಲದೇ ಇರಬಹುದು. ಆದರೆ ಸೋಲಿಸುವ ತಾಕತ್ತು ಇದೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ನ್ಯಾಯ ಸಿಗದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಹಿಂದು ಯುವತಿಗೆ ಅನ್ಯಾಯ ಆಗಿರುವಾಗ ಬಿಜೆಪಿ, ಹಿಂದು ಸಂಘಟನೆಯವರು ನಿರ್ಲಕ್ಷ್ಯ ಮಾಡಿದ್ದಾರೆಂಬ ಆರೋಪವೂ ಕೇಳಿಬಂದಿದ್ದು, ಈ ಬಗ್ಗೆ ಸ್ವತಃ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಗನ್ನಿವಾಸ ರಾವ್ ನಮ್ಮ ಪಕ್ಷದಲ್ಲಿ ಪುತ್ತೂರು ನಗರಸಭೆ ಸದಸ್ಯರಾಗಿದ್ದರೂ ನಾವು ಅನ್ಯಾಯಕ್ಕೊಳಗಾದ ಯುವತಿ ಪರವಾಗಿದ್ದೇವೆ. ಆಕೆಯನ್ನು ಅದೇ ಹುಡುಗ ಮದುವೆಯಾಗಬೇಕು ಎನ್ನುವ ನಿಲುವು ನಮ್ಮದೂ ಆಗಿದೆ. ಆದರೆ ಸದ್ಯ ಪುತ್ತೂರು ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿರುವುದರಿಂದ ನಾವು ಮಧ್ಯ ಪ್ರವೇಶ ಮಾಡಿಲ್ಲ. ಹಾಗಂತ, ನಾವು ದೂರ ನಿಂತಿದ್ದೇವೆ ಎಂದರ್ಥವಲ್ಲ. ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ. ಹಿಂದು ಸಂಘಟನೆಗಳ ನಾಯಕರು, ನಾವು ಯಾವುದೇ ಹಣದ ಆಫರ್ ಮಾಡಿಲ್ಲ. ಸಮಸ್ಯೆ ಇತ್ಯರ್ಥ ಪಡಿಸಲು ಮುಂದಾಗಿದ್ದು ಹೌದು. ಹಾಗಂತ, ನಮ್ಮ ಸಮಾಜದ ವಿಷಯದಲ್ಲಿ ಮುಸ್ಲಿಂ ಸಂಘಟನೆಗಳು ಮೂಗು ತೂರಿಸುವುದು ಬೇಡ ಎಂದಿದ್ದಾರೆ.

ಇದೇ ವೇಳೆ, ತಲೆಮರೆಸಿಕೊಂಡ ಆರೋಪಿ ಯುವಕ ಕೃಷ್ಣ ರಾವ್ ಕಾರು ಒಂದರಲ್ಲಿ ಬಿಜೆಪಿ ಮುಖಂಡನ ಜೊತೆಗೆ ತೆರಳುತ್ತಿರುವ ಫೋಟೋ ವೈರಲ್ ಆಗಿದೆ. ಆದರೆ ಈ ಫೋಟೊ ಹಳೆಯದು, ಪ್ರಕರಣಕ್ಕೂ ತನಗೂ ಸಂಬಂಧ ಇಲ್ಲವೆಂದು ಅದರಲ್ಲಿರುವ ಬಿಜೆಪಿ ವ್ಯಕ್ತಿ ಸ್ಪಷ್ಟನೆ ನೀಡಿದ್ದಾರೆ.

Puttur MLA Ashok Rai has urged the Dakshina Kannada SP to immediately arrest the youth accused of sexually exploiting a BSc student under the pretext of love, impregnating her, and causing the birth of a child. Despite an FIR being filed over a week ago, the accused remains absconding, which the MLA termed as police negligence. “No matter where the accused is hiding, arrest him at the earliest. If necessary, form a special police team to nab him,”