ಬ್ರೇಕಿಂಗ್ ನ್ಯೂಸ್
03-07-25 10:39 pm Mangalore Correspondent ಕರಾವಳಿ
ಮಂಗಳೂರು, ಜುಲೈ.3: ಅಬ್ದುಲ್ ರಹಿಮಾನ್ ಹತ್ಯೆ ಮತ್ತು ಅಶ್ರಫ್ ವಯನಾಡ್ ಎಂಬಾತನ ಗುಂಪು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಜುಲೈ 4ರಂದು ಸಂಜೆ ಕೈಕಂಬ ಜಂಕ್ಷನ್ ನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಸಭೆಗೆ ಪೊಲೀಸ್ ಅನುಮತಿ ನಿರಾಕರಿಸಿದ್ದರೂ, ವಾಟ್ಸಪ್ ಗ್ರೂಪ್ ಗಳಲ್ಲಿ ಪ್ರತಿಭಟನಾ ಸಭೆ ಇದೆಯೆಂದು ಪ್ರಚಾರ ಮಾಡುತ್ತಿದ್ದು ಇದರ ಬಗ್ಗೆ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.
ಜುಲೈ 1ರಂದು ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಬಂಟ್ವಾಳ ನಿವಾಸಿ ಅಶ್ರಫ್ ತಲಪಾಡಿ (41) ಹಾಗೂ ಇನ್ನಿಬ್ಬರು ಆಗಮಿಸಿ, ಅಬ್ದುಲ್ ರಹಿಮಾನ್ ಹತ್ಯೆ ಮತ್ತು ಅಶ್ರಫ್ ವಯನಾಡ್ ಎಂಬಾತನ ಗುಂಪು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಜುಲೈ 4ರಂದು ಸಂಜೆ ಕೈಕಂಬ ಜಂಕ್ಷನ್ ನಲ್ಲಿ ಪ್ರತಿಭಟನೆ ಆಯೋಜಿಸಿದ್ದು ಧ್ವನಿವರ್ಧಕ ಬಳಸಲು ಅನುಮತಿ ಮತ್ತು ಸೂಕ್ತ ಬಂದೋಬಸ್ತ್ ಒದಗಿಸುವಂತೆ ಮನವಿ ಪತ್ರ ನೀಡಿರುತ್ತಾರೆ. ಮನವಿ ಸ್ವೀಕರಿಸಿದ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು, ಮನವಿದಾರರಿಗೆ ಪ್ರಕರಣಗಳಲ್ಲಿ ಸರಕಾರ ಪರಿಹಾರ ಮೊತ್ತವನ್ನು ನೀಡದಿರುವ ಬಗ್ಗೆ ಮೃತರ ಕುಟುಂಬಸ್ಥರು ಅಥವಾ ಯಾರಾದರೂ ಮನವಿ ನೀಡಿರುತ್ತಾರೆಯೇ ಎಂದು ಹೇಳಿದಾಗ ಯಾರು ನೀಡಿರುವುದಿಲ್ಲವೆಂಬುದಾಗಿ ಮತ್ತು ಷಡ್ಯಂತ್ರ ರೂಪಿಸಿದ ಆರೋಪಿತರ ಬಗ್ಗೆ ಮಾಹಿತಿ ಅಥವಾ ಸಾಕ್ಷಿಗಳು ಇದೆಯೇ ಎಂದು ಪ್ರಶ್ನಿಸಿದಾಗ ನಿರ್ದಿಷ್ಟ ಖಚಿತ ಮಾಹಿತಿ ಇರುವುದಿಲ್ಲ ಎಂಬುದಾಗಿ ಹೇಳಿರುತ್ತಾರೆ.
ಸದ್ರಿ ಘಟನೆಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುವುದರಿಂದ ಆರೋಪಿತರು ಮತ್ತು ಸಾಕ್ಷ್ಯಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಂಬಂಧಪಟ್ಟ ತನಿಖಾಧಿಕಾರಿಗೆ ಹಾಗೂ ಇತರೆ ಬೇಡಿಕೆಗಳಿದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಾನೂನಾತ್ಮಕವಾಗಿ ಸೂಕ್ತ ರೀತಿಯಲ್ಲಿ ಸಂಪರ್ಕಿಸುವಂತೆ ಸೂಚಿಸಿ, ದ.ಕ. ಜಿಲ್ಲೆಯಲ್ಲಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಕಳೆದ ಸುಮಾರು ವರ್ಷಗಳಿಂದ ನಡೆದಿರುವ ಕೋಮು ಸಂಬಂಧಿತ ಹತ್ಯೆ ಮತ್ತು ಸಂಘರ್ಷಗಳನ್ನು ಅವಲೋಕಿಸಿಕೊಂಡು ಬಂಟ್ವಾಳದಲ್ಲಿ ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೂಕ್ತ ಕಾನೂನು ತಿಳುವಳಿಕೆ ನೀಡಿ ಅನುಮತಿ ನಿರಾಕರಿಸಿ ಹಿಂಬರಹವನ್ನು ನೀಡಲಾಗಿರುತ್ತದೆ.
ಆದಾಗ್ಯೂ "ಬ್ರೇಕಿಂಗ್ ನ್ಯೂಸ್ ಮೈಕಾಲ” ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ “ನ್ಯಾಯ ಮರೀಚಿಕೆ, ಹುಸಿಯಾದ ಭರವಸೆ” ಅಬ್ದುಲ್ ರಹಿಮಾನ್ ಮತ್ತು ವಯನಾಡ್ ಅಶ್ರಫ್ ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರ್ಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನಾ ಸಭೆ, ದಿನಾಂಕ: 04.07.2025 ಶುಕ್ರವಾರ, ಸಂಜೆ: 4.00 ಗಂಟೆ, ಸ್ಥಳ: ಕೈಕಂಬ ಜಂಕ್ಷನ್ (ಬಿ.ಸಿ ರೋಡು) ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ ಎಂಬುದಾಗಿ ಪೋಸ್ಟ್ ಹರಿದಾಡುತ್ತಿರುವುದು ಕಂಡುಬಂದಿದೆ.
ಮನವಿ ನೀಡಲು ಬಂದಿದ್ದ ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಮತ್ತು ಇತರರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಹಿಂಬರಹ ನೀಡಲಾಗಿದ್ದರೂ ಜುಲೈ 4ರ ಶುಕ್ರವಾರ ಸಂಜೆ 4 ಗಂಟೆಗೆ ಕೈಕಂಬ ಜಂಕ್ಷನ್ ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆ ಎಂಬುದಾಗಿ ಬರಹ ಇರುವ ಪೋಸ್ಟರ್ ಅನ್ನು ಸಾರ್ವಜನಿಕರಿಗೆ ವಾಟ್ಸಾಪ್ ಮೂಲಕ ಪ್ರಸಾರ ಮಾಡುತ್ತಿದ್ದಾರೆ. ಜುಲೈ 4ರ ಸಂಜೆ ಕೈಕಂಬ ಜಂಕ್ಷನ್ ಬಿ.ಸಿ.ರೋಡು ಎಂಬಲ್ಲಿ ಅಕ್ರಮ ಕೂಟ ಸೇರಿ ಅಪರಾಧ ಎಸಗಲು ವಾಟ್ಸಾಪ್ ಸಂದೇಶದ ಮೂಲಕ ದುಷ್ಪ್ರೇರಣೆ ನೀಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 57 ಜೊತೆಗೆ ಕಲಂ: 189(2) BNS -2023 ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The Mangaluru police have taken suo moto action after a WhatsApp campaign circulated announcing an unauthorised protest on July 4 at Kaikamba Junction (BC Road). The protest, organised by the Social Democratic Party of India (SDPI), was linked to the murders of Abdul Rahiman and Ashraf of Wayanad.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm