ಬ್ರೇಕಿಂಗ್ ನ್ಯೂಸ್
10-08-20 05:37 am Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 9: ಯಾವತ್ತೂ ಮಲ್ಲಿಗೆ ಹೂವಿನ ಕೊರತೆಯನ್ನೇ ಎದುರಿಸಿರದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿ ಈ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಮಲ್ಲಿಗೆ ಅಟ್ಟೆಯ ಅಭಾವ ಕಂಡಿದ್ದಳಂತೆ. ದೇವಿಯ ಪೂಜೆಗೂ ಹೀಗಾಯ್ತಲ್ಲ ಅಂತ ಅಲ್ಲಿನ ಅರ್ಚಕರು ಮರುಕವನ್ನೂ ಪಟ್ಟಿದ್ದರಂತೆ. ಈ ಮಾತು ಕೇಳಿದ ಶಾಸಕರೊಬ್ವರ ಮನವೂ ಕರಗಿತ್ತಂತೆ..
ಹೌದು.. ಮೂಲ್ಕಿ ಸೀಮೆಯ ತಾಯಿ ಬಪ್ಪನಾಡು ದೇವಿಗೆ ಇನ್ನು ಯಾವತ್ತೂ ಮಲ್ಲಿಗೆಯ ಕೊರತೆ ಎದುರಾಗಬಾರದು. ಯಾವುದೇ ಲಾಕ್ ಡೌನ್ ಬರಲಿ, ಮುಷ್ಕರವೇ ಎದುರಾಗಲಿ.. ಪ್ರತಿ ದಿನವೂ ಮಲ್ಲಿಗೆ ಅಟ್ಟೆ ದೇವಿಗೆ ಅರ್ಪಣೆಯಾಗಲೇಬೇಕು ಎಂದು ನಿರ್ಧರಿಸಿದ್ದು ಮೂಡುಬಿದ್ರೆಯ ಮಾಜಿ ಶಾಸಕ ಅಭಯಚಂದ್ರ ಜೈನ್. ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅರ್ಚಕರ ಮಾತು ಕೇಳಿದ ಅಭಯಚಂದ್ರ ಜೈನ್, ವರ್ಷದ 365 ದಿನವೂ ತಾನೇ ಮಲ್ಲಿಗೆ ಅಟ್ಟೆ ಅರ್ಪಿಸುತ್ತೇನೆ ಎಂದು ಅಭಯ ನೀಡಿದ್ದಾರೆ.


ಆದರೆ, ಅಭಯರು ತಾವು ಅರ್ಪಿಸುವ ಮಲ್ಲಿಗೆ ಅಟ್ಟೆಯ ಅರ್ಪಣೆಯ ಹಿಂದೆ ರಾಜಕೀಯ ಉದ್ದೇಶ ಇಟ್ಟುಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸಾರಥ್ಯ ವಹಿಸಿರುವ ಡಿ.ಕೆ.ಶಿವಕುಮಾರ್ ಹೆಸರಲ್ಲಿ ಮಲ್ಲಿಗೆ ಅಟ್ಟೆ ದೇವಿಗೆ ಅರ್ಪಣೆಯಾಗಲಿ ಎಂದಿದ್ದಾರೆ. ತಮ್ಮ ಹೆಸರು ಬೇಡ. ಡಿಕೆಶಿ ಹೆಸರಿನಲ್ಲಿಯೇ ದೇವಿಗೆ ಮಲ್ಲಿಗೆ ಸೇವೆ ರೂಪದಲ್ಲಿ ಅರ್ಪಿಸುವುದಾಗಿ ದೇವಸ್ಥಾನದಲ್ಲಿ ಬರೆಸಿಕೊಂಡಿದ್ದಾರಂತೆ. ದೇವಿಯ ಅಭಯ ಡಿಕೆಶಿಗೆ ಸದಾ ಇರಲೆಂದು ಅಭಯರು ಹಾರೈಸಿದ್ದಾರೆಂದು ಜೈನರ ಆಪ್ತರು ತಿಳಿಸಿದ್ದಾರೆ.
ಮುಲ್ಕಿ ಅರಸರಾದ ದುಗ್ಗಣ್ಣ ಸಾವಂತರ ಸಮ್ಮುಖದಲ್ಲಿ ಅಭಯಚಂದ್ರ ಜೈನ್ ಮತ್ತು ಕಾಂಗ್ರೆಸ್ ಪ್ರಮುಖರು ಸೇರಿ ಮಲ್ಲಿಗೆ ಸೇವೆ ಅರ್ಪಿಸಿದ್ದು ವಿಶೇಷ.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm