ಬ್ರೇಕಿಂಗ್ ನ್ಯೂಸ್
13-06-25 03:46 pm Mangalore Correspondent ಕರಾವಳಿ
ಮಂಗಳೂರು, ಜೂನ್ 13 : ಒಂದು ವರ್ಷದ ಹಿಂದೆಯೇ ಕೋಮು ದ್ವೇಷ ನಿಗ್ರಹಕ್ಕಾಗಿ ವಿಶೇಷ ಕಾರ್ಯಪಡೆ ಒಂದನ್ನು ರಚಿಸಬೇಕು ಎಂದು ಹೇಳಿದ್ದೆ. ಕುಲದೀಪ್ ಜೈನ್ ಕಮಿಷನರ್ ಇದ್ದಾಗ ಇರುವ ಪೊಲೀಸರನ್ನೇ ಸೇರಿಸ್ಕೊಂಡು ವಿಂಗ್ ಒಂದನ್ನು ಮಾಡಲು ಹೇಳಿದ್ದೆ. ಅದು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಕೊಲೆ ಸರಣಿ ಆದಾಗ ಕಾರ್ಯಪಡೆ ಮಾಡೋಕೆ ತೀರ್ಮಾನ ಮಾಡಿದ್ದೆ. ಒಂದು ವಾರದೊಳಗೆ ರೂಪುರೇಷೆಯನ್ನು ತಯಾರಿಸಿ ಸ್ಪೆಷಲ್ ಏಕ್ಷನ್ ಫೋರ್ಸ್ ಅಂತ ಸಿದ್ಧಪಡಿಸಿದ್ದೇವೆ. ಇಡೀ ದೇಶದಲ್ಲೇ ಕೋಮು ದ್ವೇಷ ನಿಗ್ರಹಕ್ಕೆ ಸ್ಥಾಪನೆಯಾದ ಮೊದಲ ಕಾರ್ಯಪಡೆ ಇದಾಗಿದೆ ಎಂದು ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರು ಕಮಿಷನರ್ ಕಚೇರಿಯಲ್ಲಿ ಸ್ಪೆಷಲ್ ಏಕ್ಷನ್ ಫೋರ್ಸ್ ಎನ್ನುವ ವಿಶೇಷ ಕಾರ್ಯಪಡೆಯ ಕಚೇರಿಯನ್ನು ಉದ್ಘಾಟಿಸಿ, ಅತ್ತಾವರ ಪೊಲೀಸ್ ಲೇನ್ ನಲ್ಲಿ ಹೊಸ ಪೊಲೀಸ್ ವಸತಿ ಗೃಹವನ್ನು ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ಗೃಹ ಸಚಿವರು ಮಾತನಾಡಿದರು. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಕಡಿಮೆಯಾಗಿದ್ದರಿಂದ 12 ವರ್ಷಗಳ ಹಿಂದೆ ರಚಿಸಿದ್ದ ನಕ್ಸಲ್ ನಿಗ್ರಹ ಪಡೆಯನ್ನು ವಿಭಜಿಸಿ, ಅದರಲ್ಲಿದ್ದ 248 ಸಿಬಂದಿಯನ್ನು ಈ ಕಾರ್ಯಪಡೆಗೆ ನಿಯೋಜನೆ ಮಾಡಲಾಗಿದೆ.
ಆರು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದಾಗ, ಶಾಂತಿ ಸ್ಥಾಪನೆಗಾಗಿ ಸಮಾಜ ದ್ರೋಹಿಗಳನ್ನು ನಿಗ್ರಹಿಸಲು ಇಂಥದ್ದೊಂದು ಕಾರ್ಯಪಡೆಯನ್ನು ಮಾಡಲೇಬೇಕು ಎಂದು ನಿರ್ಧರಿಸಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯ ಜನ ಸುಂಸ್ಕೃತರು, ಸುಶಿಕ್ಷಿತರು. ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಗಳು ಬರುವ ಮುಂಚೆಯೇ ಇಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಇದ್ದವು. ಇಲ್ಲಿ ಎಲ್ಲವೂ ಇದೆ, ಆದರೆ ಶಾಂತಿ ಮಾತ್ರ ಇಲ್ಲ ಎನ್ನುವ ಸ್ಥಿತಿ ಇದೆ. ಇಲ್ಲಿರುವ ಮತೀಯ ಭಾವನೆ, ದ್ವೇಷದ ವಾತಾವರಣವನ್ನು ಹತ್ತಿಕ್ಕಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಅದಕ್ಕಾಗಿ ಬಲವಂತವಾಗಿಯೇ ಶಾಂತಿ ಸ್ಥಾಪನೆ ಮಾಡಲಿಕ್ಕಾಗಿ ಕಾರ್ಯಪಡೆ ರಚಿಸಲಾಗಿದೆ ಎಂದರು.
ಯಾರೇ ಮತೀಯ ದ್ವೇಷ ಹರಡಿಸಿದರೂ ಹತ್ತಿಕ್ಕುವ ಕೆಲಸವನ್ನು ಈ ಕಾರ್ಯಪಡೆ ಮಾಡಲಿದೆ. ಇಷ್ಟು ದಿನ ಶಾಂತವಾಗಿಯೇ ಪೊಲೀಸರು ಈ ಕೆಲಸ ಮಾಡುತ್ತಿದ್ದರು. ಆದರೆ ಶಾಂತಿಯ ವರ್ತನೆಯಿಂದ ಕೆಲವರು ಮನಸ್ಸು ಪರಿವರ್ತಿಸಿಲ್ಲ. ಹಾಗಾಗಿ ಕಾರ್ಯಪಡೆ ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಜನಸಾಮಾನ್ಯರಲ್ಲಿ ಒಂದು ಪ್ರಾರ್ಥನೆ ಮಾಡುತ್ತೇನೆ, ದಯವಿಟ್ಟು ಈ ಫೋರ್ಸ್ ಗೆ ಕೆಲಸ ಕೊಡಬೇಡಿ. ನೀವಾಗಿಯೇ ಸುಮ್ಮಿನಿದ್ದರೆ ಈ ಫೋರ್ಸ್ ಕೆಲಸ ಮಾಡೋಕೆ ಬರಲ್ಲ. ಆದರೆ ನಮ್ಮ ಮಾತನ್ನು ಕೇಳದಿದ್ದರೆ ಈ ಫೋರ್ಸ್ ಕೆಲಸ ತೋರಿಸುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಹೊಸ ಕಾರ್ಯಪಡೆ ಬಗ್ಗೆ ಅನೇಕರು ಟೀಕೆ ಮಾಡಬಹುದು. ಆದರೆ ನಮ್ಮ ಸಮಾಜ ಈ ಕಾರ್ಯಪಡೆಯನ್ನು ಒಪ್ಪಿಕೊಳ್ಳುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಇದ್ದರೆ, ಇಡೀ ಕರ್ನಾಟಕದಲ್ಲಿ ಶಾಂತಿ ಇರುತ್ತದೆ. ಯಾರು ಕೂಡ ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿರುವುದಿಲ್ಲ. ಸಣ್ಣ ವಿಷಯವನ್ನೇ ದೊಡ್ಡದು ಮಾಡಿ ವಿಭಜನೆ ಮಾಡೋದು ಸರಿಯಲ್ಲ. ಸದ್ಯಕ್ಕೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ವ್ಯಾಪ್ತಿಯಲ್ಲಿ ಈ ಕಾರ್ಯಪಡೆ ವ್ಯಾಪ್ತಿ ಇರಲಿದ್ದು ಅಗತ್ಯ ಬಿದ್ದರೆ ಇಡೀ ರಾಜ್ಯದಲ್ಲಿ ಮಾಡುತ್ತೇವೆ ಎಂದು ಸಚಿವ ಪರಮೇಶ್ವರ್ ಹೇಳಿದರು.
ಶೀಘ್ರದಲ್ಲೇ ಶಾಂತಿ ಸಭೆ – ಗುಂಡೂರಾವ್
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಇರುವ ಒಂದೇ ಒಂದು ಕಪ್ಪು ಚುಕ್ಕೆ ಅಂದ್ರೆ ಕೋಮು ದ್ವೇಷ. ಕುವೆಂಪು ಹೇಳಿದಂತೆ ದಕ್ಷಿಣ ಕನ್ನಡದಲ್ಲಿ ಸರ್ವ ಜನಾಂಗದ ಜನ ಇದ್ದಾರೆ, ಆದರೆ ಶಾಂತಿಯ ಕೊರತೆ ಇದೆ. ಕೋಮು ಭಾವನೆಯನ್ನು ಮುಂದಿಟ್ಟು ಅನೈತಿಕ ಕೆಲಸಕ್ಕೆ ರಕ್ಷಣೆ ತೆಗೆದುಕೊಳ್ಳುತ್ತಿದ್ದಾರೆ. ಕಾನೂನು ಕ್ರಮ ಕಟ್ಟುನಿಟ್ಟಾಗಿ ಆಗದಿದ್ದರೆ ಏನು ಮಾಡಿದರೂ ವ್ಯರ್ಥವೇ. ಈಗಾಗಲೇ ಈ ಫೋರ್ಸ್ ಪರಿಣಾಮ ಬೀರಿದ್ದು, ದ್ವೇಷದ ಪೋಸ್ಟ್ ಕಡಿಮೆಯಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಯಾರು, ಯಾವ ಪಕ್ಷದವರು ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ಎಲ್ಲ ಧರ್ಮದ ಪ್ರಮುಖರನ್ನು ಸೇರಿಸಿ ಗೃಹ ಸಚಿವರ ನೇತೃತ್ವದಲ್ಲೇ ಶಾಂತಿ ಸಭೆಯನ್ನು ಮಾಡುತ್ತೇವೆ ಎಂದರು.
ಸಮಾರಂಭದಲ್ಲಿ ಡಿಜಿಪಿ ಡಾ.ಎಂ.ಎ. ಸಲೀಂ, ಎಡಿಜಿಪಿ ಮುರುಗನ್, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಎಸ್ಪಿ ಡಾ.ಅರುಣ್, ಎಂಎಲ್ಸಿಗಳಾದ ಐವಾನ್ ಡಿಸೋಜ, ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಇದ್ದರು.
In a landmark move aimed at addressing rising communal tensions, Karnataka Home Minister Dr. G. Parameshwara inaugurated the country’s first-ever Special Action Force (SAF) dedicated to curbing communal hatred. The launch event took place at the Mangaluru Police Commissioner’s Office, followed by the inauguration of new police quarters in Attavar.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 07:37 pm
Mangalore Correspondent
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
Puttur Doctor Dr Keerthana Joshi, Suicide, Ma...
05-08-25 10:34 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm