ಬ್ರೇಕಿಂಗ್ ನ್ಯೂಸ್
11-06-25 12:53 pm Mangalore Correspondent ಕರಾವಳಿ
ಬಂಟ್ವಾಳ, ಜೂನ್ 11 : ಕಳೆದ ಕೆಲವು ವರ್ಷಗಳಿಂದ ಪ್ರತಿ ಮಳೆಗಾಲದಲ್ಲು ನರಕ ಸದೃಶವಾಗಿದ್ದ ಕಲ್ಲಡ್ಕ ಪೇಟೆ ಈಗ ನಿರಾಳವಾಗಿದೆ. ಕರ್ಕಶ ಹಾರ್ನ್, ಬೃಹತ್ ಗಾತ್ರದ ಟ್ರಕ್, ಲಾರಿಗಳ ಟ್ರಾಫಿಕ್ ಸಮಸ್ಯೆ ಇಲ್ಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು- ಬೆಂಗಳೂರು ರಸ್ತೆಯಲ್ಲಿ ಸಿಗುವ ಬಂಟ್ವಾಳ ತಾಲೂಕಿನ ಪುಟ್ಟ ಪೇಟೆ ಕಲ್ಲಡ್ಕ ವಾಹನ ಪ್ರಯಾಣಿಕರಿಗೆ ಕಿರಿ ಕಿರಿ ರಹಿತ ಪ್ರಯಾಣಕ್ಕೆ ತೆರೆದುಕೊಂಡಿದೆ. ಕಲ್ಲಡ್ಕ ಮತ್ತೆ ಎಂದಿನಂತೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ನಾಲ್ಕೈದು ವರ್ಷಗಳಿಂದ ಸಂಕಷ್ಟ ಪಟ್ಟಿದ್ದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಸುಮಾರು 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣಗೊಂಡು ಒಂದು ಬದಿಯಲ್ಲಿ ಸಂಚಾರ ಆರಂಭಗೊಂಡ ಮೇಲೆ ಜನರು ಕೆಳಗಡೆ ಹೇಗಿದೆ ಅಂತಲೂ ತಿರುಗಿ ನೋಡುತ್ತಿಲ್ಲ. ಸಮಯದ ಮಿತಿಯೊಳಗೇ ಜೀವನ ನಡೆಯುವ ವೇಗದ ದಿನಗಳಲ್ಲಿ ಸುಲಭದ ಫ್ಲೈಓವರ್ ನಲ್ಲಿ ಮೇಲೇರುವ ಬದಲು ಸರ್ವೀಸ್ ರೋಡ್ ಗಿಳಿದು ಪೇಟೆ ಸೌಂದರ್ಯ ವೀಕ್ಷಿಸುವವರ ಸಂಖ್ಯೆ ಕಡಿಮೆ. ಕಲ್ಲಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವವರು, ಕಲ್ಲಡ್ಕದ ಪೇಟೆಯಲ್ಲಿ ವ್ಯವಹಾರ ಹೊಂದಿರುವವರು, ವಿಟ್ಲ ಭಾಗಗಳಿಗೆ ತೆರಳುವವರು, ಒಳರಸ್ತೆಗಳಿಗೆ ಸಾಗುವವರು ಮಾತ್ರ ಫ್ಲೈಓವರ್ ನಲ್ಲಿ ಸಾಗದೆ ಸರ್ವೀಸ್ ರಸ್ತೆಗಿಳಿದು ಪೇಟೆ ಸಂಚರಿಸುತ್ತಾರೆ. ನೇರ ಹಾದು ಹೋಗುವವರು ಮೇಲ್ಸೇತುವೆಯಲ್ಲೇ ಸಂಚರಿಸುತ್ತಾರೆ.


ಹೇಗಿದ್ದ ಪೇಟೆ, ಹೇಗಾಯ್ತು ಈಗ..?
ವಾಹನಗಳ ಸದ್ದಡಗಿದ್ದು ಮಾತ್ರವಲ್ಲ, ಮೇಲ್ಸೇತುವೆಯಿಂದಾಗಿ ಕಲ್ಲಡ್ಕ ಪೇಟೆಯ ಚಿತ್ರಣ ಬದಲಾಗಿದೆ. ಆದರೆ ಮೊದಲಿದ್ದ ಬ್ಯಾಂಕು, ಸೊಸೈಟಿ, ಅಂಗಡಿ ಕಚೇರಿ ಸ್ಥಾನ ಪಲ್ಲಟ ಆಗಿಲ್ಲ. ರಸ್ತೆ ಅಗಲಗೊಂಡ ಕಾರಣ, ಸಮಸ್ಯೆಗಳು ಕಡಿಮೆಯಾಗಿವೆ, ಜೊತೆಗೆ ಆಕರ್ಷಣೆ ಹೆಚ್ಚಿದೆ. ಮೇಲ್ಗಡೆ ಸೇತುವೆ ನೋಡುತ್ತ ನಿಂತರೆ ಆಧುನಿಕ ನಗರದ ಭಾವನೆ ಮನಸ್ಸಿಗೆ ಬರುತ್ತದೆ. ಕಲ್ಲಡ್ಕ ಪೇಟೆಯ ಹಳೆ ಸೊಗಡಿನ ಚಹಾದ ಹೋಟೆಲ್ ಗಳ ಮುಂದೆ ಪರವೂರಿನ ವಾಹನಗಳು ನಿಲ್ಲುವುದಕ್ಕೆ ಬ್ರೇಕ್ ಬಿದ್ದಿದೆ. ಹಿಂದಿನ ಕಲ್ಲಡ್ಕದಲ್ಲಿ ಲಾರಿಯೋ ಬಸ್ಸೋ ಹಾಳಾಗಿ ನಿಂತರೆ, ವಾಹನ ದಟ್ಟಣೆ ಆಗುತ್ತಿತ್ತು. ಈಗ ರಸ್ತೆ ಅಗಲಗೊಂಡಿದ್ದು ಮತ್ತು ಹೆಚ್ಚಿನ ದೊಡ್ಡ ವಾಹನಗಳು ಮೇಲಿನಿಂದ ಸಾಗುತ್ತಿರುವುದರಿಂದ ಹಿಂದಿನ ಸಮಸ್ಯೆ ಇಲ್ಲ.






ಸರ್ವೀಸ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಕೆಲವು ಬಸ್ಸುಗಳು ಫ್ಲೈಓವರ್ ಆದಿಯಲ್ಲೇ ಪ್ರಯಾಣಿಕರನ್ನು ಇಳಿಸಿಹೋಗುತ್ತಿವೆ. ಇದರಿಂದ ಪ್ರಯಾಣಿಕರು ಬಸ್ ಇಳಿದು ನಡೆದುಹೋಗುವ ಪ್ರಮೇಯ ಎದುರಾಗಿದೆ. ಕೆಲಸ ಮುಗಿದ ಬಳಿಕ ರಸ್ತೆ ಸಂಚಾರಕ್ಕೆ ತೆರವಾಗುವ ಕಾರಣ, ಇದು ತಾತ್ಕಾಲಿಕ ಸಮಸ್ಯೆ ಎಂದು ಅಧಿಕಾರಿಗಳು ಹೇಳುತ್ತಾರೆ. ವರ್ಷದ ಹಿಂದಿನ ಸ್ಥಿತಿ ನೋಡಿದರೆ ಮೇಲ್ಸೇತುವೆ ಬೇಗನೆ ಮುಗಿಯಲ್ಲ ಎನ್ನುವ ಸ್ಥಿತಿಯಿತ್ತು. ಕಳೆದೊಂದು ವರ್ಷದಲ್ಲಿ ಕಾಮಗಾರಿಗೆ ವೇಗ ಸಿಕ್ಕಿರುವುದು ಹೆದ್ದಾರಿ ಕಾರಣದಿಂದ ಧೂಳು, ಕೆಸರು, ಗುಂಡಿಯಿಂದ ಕಂಗೆಟ್ಟು ಹೋಗಿದ್ದ ಪ್ರಯಾಣಿಕರು, ವಾಹನ ಸವಾರರು ಹುಸ್ಸಪ್ಪಾ ಎನಿಸುವಂತಾಗಿದೆ.
ಕಲ್ಲಡ್ಕದ ಫ್ಲೈಓವರ್ ಎರಡು ಕಿಮೀ ಉದ್ದಕ್ಕೆ ದೀರ್ಘವಾಗಿರುವ ಹಿನ್ನೆಲೆಯಲ್ಲಿ ಅಡಿ ಭಾಗದಲ್ಲಿ ಪರ್ಯಾಯ ಸದುಪಯೋಗ ಏನು ಮಾಡಬಹುದು ಎಂಬ ಚಿಂತನೆಗಳು ಆಗಿಲ್ಲ. ಸದ್ಯ ಇದರೊಳಗೆ ವಾಹನಗಳು ಬಾರದೇ ಇರುವಂತೆ ನಡುವೆ ಮಣ್ಣು ಸುರಿಯಲಾಗಿದೆ. ಭವಿಷ್ಯದಲ್ಲಿ ಮಾದರಿ ಫ್ಲೈಓವರ್ ಮಾಡುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
Once a nightmare for commuters during the monsoon season, Kalladka town in Dakshina Kannada district has seen a remarkable transformation over the past year. Known for its traffic congestion, muddy roads, and dust-filled air, the small but busy town is now experiencing smoother and quieter travel, thanks to the newly constructed flyover.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am