ಬ್ರೇಕಿಂಗ್ ನ್ಯೂಸ್
07-06-25 09:15 pm Mangalore Correspondent ಕರಾವಳಿ
ಮಂಗಳೂರು, ಜೂನ್ 7 : ಆರ್ ಸಿಬಿ ವಿಜಯೋತ್ಸವ ಸಂದರ್ಭ ಕಾಲ್ತುಳಿತ ಆಗುತ್ತಿದ್ದಾಗ ರಾಜ್ಯದ ಮುಖ್ಯಮಂತ್ರಿಯಾದವರು ದೋಸೆ ತಿನ್ನುತ್ತಿದ್ದರು ಅನ್ನುವ ಸುದ್ದಿ ಸತ್ಯವೇ ಆಗಿದ್ದರೆ, ದುರಂತದಲ್ಲಿ ಮಕ್ಕಳನ್ನು ಕಳಕೊಂಡ ಕುಟುಂಬದ ಶಾಪ ತಟ್ಟುತ್ತದೆ. ದೇವರು ಕೂಡ ಕ್ಷಮಿಸಲಿಕ್ಕಿಲ್ಲ. ಆದರೆ ಆ ರೀತಿ ಆಗಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ ಎಂಬುದಾಗಿ ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.
ಬೆಂಗಳೂರಿನ ಕಾಲ್ತುಳಿತ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ದೋಸೆ ಸವಿಯುತ್ತಿದ್ದರು ಎನ್ನುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಟಿ ರವಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಯಾರೇ ಆಗಲಿ, ಇಂಥ ದುರಂತ ಆಗಿದ್ದಾಗ ದೋಸೆ ಸವಿಯುವಂಥ ಕೆಲಸ ಮಾನವೀಯತೆ ಇದ್ದವರು ಮಾಡಲಿಕ್ಕಿಲ್ಲ. ಅದು ಸತ್ಯವೇ ಆಗಿದ್ದರೆ ಇದಕ್ಕೂ ಆಫ್ರಿಕಾದಲ್ಲಿ ಮಕ್ಕಳ ಮೆದುಳನ್ನು ತಿನ್ನುವ ಇದಿ ಅಮೀನ್ ಗೂ ವ್ಯತ್ಯಾಸ ಇಲ್ಲ ಎಂದು ಟೀಕಿಸಿದ್ದಾರೆ.
ಆರ್ ಸಿಬಿ ಗೆಲುವಿನ ವಿಜಯೋತ್ಸವ ಆಚರಿಸಲು ಅದರ ಮಾಲೀಕರು ಕರ್ನಾಟಕದವರಾ. ಸಿಎಂ ಅಥವಾ ಅವರ ಕಡೆಯವರು ಇದರಲ್ಲಿ ಸೀಕ್ರೆಟ್ ಇನ್ವೆಸ್ಟ್ ಮಾಡಿದ್ದಾರೆಯೇ.. ಎಂದು ಪ್ರಶ್ನಿಸಿದ ಸಿಟಿ ರವಿ, ಅಷ್ಟು ತರಾತುರಿಯಲ್ಲಿ ವಿಜಯೋತ್ಸವ ಮಾಡುವುದಕ್ಕೇನು ದರ್ದು ಇತ್ತು. ಇವರ ಬೇಜಾವಾಬ್ದಾರಿ ತೋರಿಸದೇ ಇರುತ್ತಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವ ಸ್ಥಿತಿ ಬರುತ್ತಿತ್ತಾ.. ಹೊರಗಡೆ ಜೀವ ಹೋಗುತ್ತಾ ಇದ್ರೂ ಡಿಸಿಎಂ ಟ್ರೋಫಿ ಎತ್ತಿ ಕುಣೀತಾ ಇದ್ರಲ್ವಾ.. ಈ ಘಟನೆಗೆ ಯಾರು ರೆಸ್ಪಾನ್ಸಿಬಲ್. ಕಾಲ್ತುಳಿತ ಆದಾಗ ಗಾಯಾಳುಗಳನ್ನು ಪೊಲೀಸರು ಕೈಯಲ್ಲಿ ಎತ್ಕೊಂಡು ಹೋಗುವ ಸ್ಥಿತಿಯಾಗಿತ್ತಲ್ವೇ.. ಆಂಬುಲೆನ್ಸ್ ಇಟ್ಕೊಳ್ಳೋಕೂ ಯೋಗ್ಯತೆ ಇರಲಿಲ್ವಾ ಎಂದರು.
ಪೊಲೀಸ್ ಅಧಿಕಾರಿಗಳನ್ನು ಕಾರಣಕರ್ತರೆಂದು ಸಸ್ಪೆಂಡ್ ಮಾಡಿದ್ದೀರಿ. ಆರ್ ಸಿಬಿ ಗೆಲುವಿನ ವಿಜಯೋತ್ಸವ ಆಯೋಜಿಸಿದ್ದು ಕಮಿಷನರ್ ದಯಾನಂದ್. ಒಟ್ಟು ಕಾರ್ಯಕ್ರಮವನ್ನು ಅವರೇ ಮಾಡಿದ್ರು ಅಂತ ಹೊಣೆ ಎಲ್ಲ ಅವರ ತಲೆಗೆ ಕಟ್ಟಿದಂತೆ ಸಿಎಂ, ಡಿಸಿಎಂ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
Siddaramaiah, DK Shivakumar Must Take Responsibility for RCB Stampede, Not Blame Police, CT Ravi.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm