ಬ್ರೇಕಿಂಗ್ ನ್ಯೂಸ್
05-06-25 03:56 pm Mangaluru Staff ಕರಾವಳಿ
ಮಂಗಳೂರು, ಜೂನ್ 4: ಇಡೀ ರಾಜ್ಯದಲ್ಲಿ ಶಾಂತಿ ನೆಲೆಸಿರೋವಾಗ ಕರಾವಳಿಯಲ್ಲಿ ಯಾಕೆ ಹೀಗಾಗ್ತಿದೆ ಅನ್ನೋದನ್ನ ನೋಡಬೇಕಿದೆ. ಅಮಾಯಕರನ್ನ ಹೋಗಿ ಸಾಯಿಸೋಕೆ ಇದು ಉತ್ತರಪ್ರದೇಶ, ಮಣಿಪುರ ಅಲ್ಲ. ಮಂಗಳೂರಿಗೆ ಒಳ್ಳೆಯ ಹೆಸರಿದೆ, ಮಣಿಪುರ ಮಾಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ಹತ್ಯೆ, ಕಾಂಗ್ರೆಸಿನಲ್ಲಿ ಮುಸ್ಲಿಂ ಮುಖಂಡರ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಂ ಮುಖಂಡರು ರಾಜೀನಾಮೆ ವಾಪಸ್ ಪಡೆಯವಂತೆ ಮನವಿ ಮಾಡುತ್ತೇನೆ. ನಾನು ಯಾರೊಂದಿಗೂ ಸಭೆ ನಡೆಸಲು ಬಂದಿಲ್ಲ, ಪ್ರತೀ ಸಾರಿ ಬರುವಂತೆ ಯಥಾ ಪ್ರಕಾರ ಬಂದಿದ್ದೇನೆ. ಕೆಲವು ನಡೆಯಬಾರದ ಘಟನೆ ನಡೆದಿದೆ, ಯಾರೂ ದೃತಿಗೆಡೋದು ಬೇಡ ಅಂತ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ ಎಂದರು.
ನಿಮ್ಮನ್ನು ಜಿಲ್ಲೆಯ ಉಸ್ತುವಾರಿ ಮಾಡ್ತಾರೆಯೇ, ನಿಮ್ಮನ್ನು ಸಿಎಂ ಭೇಟಿಯಾದ ಉದ್ದೇಶವೇನು ಎಂಬ ಪ್ರಶ್ನೆಗೆ, ಉಸ್ತುವಾರಿ ಮಾಡ್ತಾರೆ ಅನ್ನೋ ಊಹಾಪೋಹಗಳನ್ನ ಬಿಟ್ಟು ಬಿಡಿ. ಮುಖ್ಯಮಂತ್ರಿಗಳು ಮತ್ರು ನನ್ನ ನಡುವಿನದ್ದು ಸೌಜನ್ಯದ ಭೇಟಿ, ಮಂಗಳೂರನ್ನ ಮಣಿಪುರ ಮಾಡಬೇಡಿ ಅಂತ ಹೇಳೋದಷ್ಟಕ್ಕೆ ಸೀಮಿತ ಆಗಿತ್ತು. ಕೊಲೆ, ಕೋಮು ದ್ವೇಷದ ಬಗ್ಗೆ ಕ್ರಮ ತಗೊಳ್ಳಿ ಅಂದಾಗ ಅವರೇ ಸ್ವಲ್ಪ ಹದಗೆಟ್ಟಿದೆ ಸರಿ ಮಾಡ್ತೀವಿ ಅಂದರು. ನೀವು ಹೋಗಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಮಾತನಾಡಿ ಎಂದು ಹೇಳಿ ಕಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡಬೇಡಿ. ನಾವು ಸಂವಿಧಾನ ಮತ್ತು ನ್ಯಾಯದ ಪರ ಇದೀವಿ, ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಲು ಬಂದಿದ್ದೇನೆ. ಮುಂದೆ ಹೆಜ್ಜೆ ಇಟ್ಟು ರಾಜೀನಾಮೆ ನೀಡಿ ಹಿಂದೆ ಸರಿಯೋದು ಬೇಕಾಗಿಲ್ಲ, ವಾಪಾಸ್ ತೆಗೋಳಿ. ಯಾರು ಸಹ ಉಗ್ರವಾಗಿ ಯೋಚನೆ ಮಾಡೋದು ಕೂಡ ಬೇಕಾಗಿಲ್ಲ. ಮಂಗಳೂರಿಗೆ ಕರ್ನಾಟಕದಲ್ಲಿ ಒಳ್ಳೆಯ ಹೆಸರಿದೆ, ಅದನ್ನ ಮಣಿಪುರ ಮಾಡೋದು ಬೇಡ.
ನಾನು ಎಲ್ಲರಿಗೂ ಮಾತನಾಡಿಸ್ತೀನಿ, ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನು ಕಳೆದುಕೊಳ್ಳಲು ತಯಾರಿಲ್ಲ. ಯಾವುದೋ ಭಾವನಾತ್ಮಕವಾಗಿ ಮನಸ್ಸಿಗೆ ನೋವಾದಾಗ ರಾಜೀನಾಮೆ ಕೊಟ್ಟಿದ್ದಾರೆ. ಎಲ್ಲರಿಗೂ ರಾಜೀನಾಮೆ ವಾಪಸ್ ಪಡೆಯಲು ಮನವಿ ಮಾಡ್ತೇನೆ. ಸರ್ಕಾರ ಜೊತೆಗಿರುವಾಗ ನಾವು ಕೆಲಸ ಮಾಡಿಲ್ಲ ಅಂದ್ರೆ ರಾಜೀನಾಮೆ ಕೊಡಬೇಕು. ನಾವು ಸೈದ್ದಾಂತಿಕವಾಗಿ ಬಹಳ ದೃಢವಾಗಿ ಇದ್ದಂಥವರು. ನಮ್ಮ ಸಿದ್ಧಾಂತಕ್ಕೆ ದಕ್ಕೆಯಾದಾಗ ಯಾರೂ ಸಹ ಹಾಗೆ ಮಾಡಬಹುದು.
ಇದರಲ್ಲಿ ಇರೋ ಪಾತ್ರಧಾರಿಗಳು ಮತ್ತು ಅವರ ಕುಟುಂಬದವರು ಪಾಪದವರು. ಸೂತ್ರಧಾರಿಗಳು ಯಾರ ಕೈಗೂ ಸಿಗದೇ ತಪ್ಪಿಸಿಕೊಳ್ತಾ ಇದಾರೆ. ಸೂತ್ರಧಾರಿಗಳ ಕೈಗೊಂಬೆಯಾಗಿ ನಮ್ಮ ಪಾತ್ರಧಾರಿಗಳು ಪ್ರಾಣ ಕಳೆದುಕೊಳ್ತಾ ಇದಾರೆ. ಸ್ವಲ್ಪ ದಿವಸದಲ್ಲಿ ಸೂತ್ರಧಾರಿಗಳು ಯಾರ್ಯಾರೆಂದು ನಾವು ಹೇಳ್ತೇವೆ. ಪೊಲೀಸರು ಒಳ್ಳೆಯ ಅಧಿಕಾರಿಗಳು ಇದಾರೆ, ಕ್ರಮ ಜರುಗಿಸ್ತಾರೆ. ಕಾನೂನು ಸುವ್ಯವಸ್ಥೆ ವಿಫಲ ಆದಾಗ ಸಿಎಂ ಮತ್ತು ಗೃಹ ಸಚಿವರು ಕ್ರಮ ಜರುಗಿಸಬೇಕಾಗುತ್ತದೆ. ಇದೊಂಥರ ಸೂಕ್ಷ್ಮ ಪ್ರದೇಶ ಆದ ಕಾರಣ ಬಹಳ ಯೋಚನೆ ಮಾಡಿ ಹೆಜ್ಜೆ ಇಟ್ಟಿದ್ದಾರೆ. ಎಲ್ಲಾ ಸರಿಯಾಗುತ್ತೆ, ಏನೂ ತೊಂದರೆ ಇಲ್ಲ, ನಾನಾದ್ರೂ ಅವರ ಪರ ನಿಲ್ತೀನಿ ಎಂದು ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬಿ.ಕೆ ಹರಿಪ್ರಸಾದ್ ಹೇಳಿದರು
Mangalore Has a Good Reputation, Don’t Turn It Into Manipur, BK Hariprasad Urges Congress Workers Not to Lose Heart
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm