ಬ್ರೇಕಿಂಗ್ ನ್ಯೂಸ್
30-05-25 03:59 pm Mangalore Correspondent ಕರಾವಳಿ
ಉಳ್ಳಾಲ, ಮೇ 30 : ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದ ಪರಿಣಾಮ ಓರ್ವ ಮಹಿಳೆ ಮತ್ತು ಅವರ ಮೊಮ್ಮಕ್ಕಳಾದ ಇಬ್ಬರು ಪುಟಾಣಿ ಮಕ್ಕಳು ಮೃತಪಟ್ಟಿದ್ದು, ಮನೆಯಲ್ಲಿದ್ದ ಮೂವರು ರಕ್ಷಿಸಲ್ಪಟ್ಟಿದ್ದಾರೆ.
ಕೋಡಿ ಕೊಪ್ಪಲ ನಿವಾಸಿ ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ(58), ಮೊಮ್ಮಕ್ಕಳಾದ ಆರ್ಯನ್(2.5 ವರ್ಷ) ಮತ್ತು ಆರುಷ್(1 ವರ್ಷ) ಮೃತಪಟ್ಟ ದುರ್ದೈವಿಗಳು. ಕಾಂತಪ್ಪ ಪೂಜಾರಿ, ಪತ್ನಿ ಪ್ರೇಮಾ, ಮಗ ಸೀತಾರಾಮ, ಸೊಸೆ ಅಶ್ವಿನಿ ಮತ್ತು ಮೊಮ್ಮಕ್ಕಳಾದ ಆರ್ಯನ್, ಆರುಷ್ ಮನೆಯೊಳಗೆ ಮಲಗಿದ್ದರು. ನಸುಕಿನ ನಾಲ್ಕು ಗಂಟೆ ಸುಮಾರಿಗೆ ಮನೆ ಹಿಂಭಾಗದ ಮಾವಿನ ಮರ ಮನೆಯ ಮೇಲೆ ಉರುಳಿ ಬಿದ್ದಿದ್ದು ಅದರೊಂದಿಗೆ ಗುಡ್ಡವೂ ಕುಸಿದು ಬಿದ್ದಿದೆ. ಮನೆಯೊಳಗಿದ್ದ ಸೀತಾರಾಮ ಅವರು ಹೇಗೋ ತಪ್ಪಿಸಿಕೊಂಡು ನೆರೆ ಹೊರೆಯವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಕೂಡಲೇ ರಕ್ಷಣೆಗೆ ಧಾವಿಸಿದ್ದು ಮನೆ ಸಂಪೂರ್ಣ ಕುಸಿದ ಪರಿಣಾಮ ಅವರಿಂದ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಬಳಿಕ ಸ್ಥಳಕ್ಕೆ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ದೌಡಾಯಿಸಿ ರಕ್ಷಣಾ ಕಾರ್ಯ ಮಾಡಿದ್ದಾರೆ. ಜೆಸಿಬಿ, ಕ್ರೇನ್ ಸಾಗದ ದುರ್ಗಮ ಪ್ರದೇಶದಲ್ಲಿ ಮಧ್ಯಾಹ್ನದ ವರೆಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿದ್ದರು.
ಘಟನೆಯಿಂದ ಕಾಂತಪ್ಪ ಪೂಜಾರಿ ಅವರ ಎರಡೂ ಕಾಲುಗಳು ಮುರಿದಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಪ್ರೇಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಾಂತಪ್ಪ ಪೂಜಾರಿ ಅವರ ಪುತ್ರ ಸೀತಾರಾಮ ಅಪಾಯವಿಲ್ಲದೆ ಪಾರಾಗಿದ್ದಾರೆ. ಸೀತಾರಾಮ ಅವರ ಪತ್ನಿ ಅಶ್ವಿನಿ ಮತ್ತು ಇಬ್ಬರು ಪುಟ್ಟ ಕಂದಮ್ಮಗಳು ಕುಸಿದ ಮನೆಯ ಅವಶೇಷಗಳಡಿ ಸಿಲುಕಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡವು ಮೊದಲಿಗೆ ಹಿರಿಯ ಮಗು ಆರ್ಯನ್ ಮೃತದೇಹವನ್ನ ಹೊರ ತೆಗೆದಿದ್ದಾರೆ. ಬಳಿಕ ಹರಸಾಹಸ ಪಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದ ಸಣ್ಣ ಮಗುವನ್ನೂ ಹೊರ ತೆಗೆದಿದ್ದು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮಗು ಮೃತಪಟ್ಟಿದೆ.
ಕಟ್ಟಡದ ಅವಶೇಷದಡಿ ಸಿಲುಕಿದ್ದ ಅಶ್ವಿನಿ ಅವರನ್ನೂ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದು ಗಂಭೀರ ಗಾಯಗೊಂಡಿರುವ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಶ್ವಿನಿಯವರನ್ನ ಆಸ್ಪತ್ರೆಗೆ ಸಾಗಿಸುವಾಗಲೂ ಆಕೆ ತನ್ನ ಮಕ್ಕಳು ಎಲ್ಲಿ ಎಂದೇ ಕೇಳುತ್ತಿದ್ದರು. ಧಾರಾಕಾರ ಮಳೆಯ ನಡುವೆಯೂ ರಕ್ಷಣಾ ತಂಡಗಳು ಶ್ರಮ ಪಟ್ಟು ಕಾರ್ಯಾಚರಣೆ ನಡೆಸಿದ್ದು, ಅವಶೇಷಗಳಡಿ ಸಿಲುಕಿದ್ದ ತಾಯಿ, ಮಕ್ಕಳಿಗೆ ಉಸಿರಾಟಕ್ಕೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳೀಯರು, ಪೊಲೀಸರು ಮತ್ತು ರಕ್ಷಣಾ ತಂಡಗಳು ಸುದೀರ್ಘ ಒಂಬತ್ತು ಗಂಟೆಗಳ ಕಾಲ ಹರಸಾಹಸ ಪಟ್ಟರೂ ಇಬ್ಬರು ಕಂದಮ್ಮಗಳನ್ನ ಮಾತ್ರ ಉಳಿಸಲಿಕ್ಕಾಗಲಿಲ್ಲ.
ಮಕ್ಕಳು ಒದ್ದಾಡುತ್ತಲೇ ಪ್ರಾಣ ಬಿಟ್ಟರು !
ಬೆಳಗ್ಗೆ 11 ಗಂಟೆ ವೇಳೆಗೆ ಮಕ್ಕಳು ಅವಶೇಷಗಳ ಎಡೆಯಿಂದ ಒದ್ದಾಟ, ಚೀರಾಟ ಮಾಡುತ್ತಿದ್ದರೂ ಅವರನ್ನು ರಕ್ಷಣಾ ತಂಡಕ್ಕೆ ತೆರವು ಮಾಡಲು ಸಾಧ್ಯವಾಗಲಿಲ್ಲ. ಮಕ್ಕಳು ಚೀರಾಡುತ್ತಿದ್ದುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಎನ್ ಡಿಆರ್ ಎಫ್ ತಂಡದಲ್ಲಿ ನುರಿತವರು ಇರುತ್ತಾರಂತೆ. ಕಣ್ಣಿನ ಎದುರಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದರೂ ಮಕ್ಕಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ ಎನ್ನುವುದೇ ಇವರ ಕಾರ್ಯಾಚರಣೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಕಳೆದ ವರ್ಷ ಮಂಗಳೂರು ನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ಒಂದು ಪಾರ್ಶ್ವ ಕುಸಿದು ಬಿದ್ದು ಅದರಡಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಯುವಕರು ಸಿಲುಕಿದ್ದರು. ಕಾರ್ಯಾಚರಣೆ ದೀರ್ಘ ಕಾಲ ಆಗಿದ್ದರಿಂದಲೇ ಒಬ್ಬನ ಜೀವ ಹೋಗಿತ್ತು. ಮಣ್ಣಿನಡಿ ಸಿಲುಕಿದ್ದರೂ, ಅವರು ಒದ್ದಾಡುವುದು ಕಾಣುತ್ತಿದ್ದರೂ ರಕ್ಷಣೆ ಮಾಡಲು ಇವರಿಂದ ಸಾಧ್ಯವಾಗಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಜೀವದ ಹಂಗು ತೊರೆದು ತುರ್ತು ಕಾರ್ಯಾಚರಣೆ ಮಾಡುವುದೇ ಅಗತ್ಯವಾಗುತ್ತದೆ. ಅಂತಹ ಪರಿಣತಿ ನಮ್ಮ ಎನ್ ಡಿಆರ್ ಎಫ್ ತಂಡದ ಸದಸ್ಯರಲ್ಲಿ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗುತ್ತದೆ.
A devastating landslide triggered by heavy rains struck Montepadavu on Friday, claiming the lives of a grandmother and her grandchildren. The incident occurred when a hill behind their home collapsed, burying the house under debris. Despite desperate cries and emotional pleas from surviving children, rescue efforts were hindered by the intensity of the rain and unstable terrain. The National Disaster Response Force (NDRF) team launched a challenging rescue operation amid the chaos and heartbreak. Locals gathered at the scene in shock as authorities continued search operations. Officials have urged residents in hilly and vulnerable areas to remain alert and evacuate if necessary.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm