ಬ್ರೇಕಿಂಗ್ ನ್ಯೂಸ್
25-05-25 07:57 pm Mangalore Correspondent ಕರಾವಳಿ
ಮಂಗಳೂರು, ಮೇ 25 : ಕೆಫಟೇರಿಯಾ ಹೆಸರಲ್ಲಿ ಲೈಸನ್ಸ್ ಪಡೆದು ಹುಕ್ಕಾ ಬಾರ್ ನಡೆಸುತ್ತಿದ್ದುದಾಗಿ ಎಂಎಫ್ ಸಿ ಹೊಟೇಲ್ ಮಾಲೀಕನನ್ನು ಸಿಸಿಬಿ ಪೊಲೀಸರು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆಂಬ ಘಟನೆ ಬಗ್ಗೆ ಸ್ವತಃ ಎಂಎಫ್ ಸಿ ಮಾಲೀಕ ಸಿದ್ದಿಕ್ ಸ್ಪಷ್ಟನೆ ನೀಡಿದ್ದು ತನ್ನನ್ನು ಯಾರು ಕೂಡ ಬಂಧನ ಮಾಡಿಲ್ಲ. ತನಗೂ ಹುಕ್ಕಾ ಬಾರ್ ಗೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿದ್ದಾರೆ.
ಮಂಗಳೂರು ಸಿಸಿಬಿ ಮತ್ತು ಕದ್ರಿ ಪೊಲೀಸರು ಜಂಟಿಯಾಗಿ ಕಂಕನಾಡಿಯ ಮ್ಯಾಕ್ ಮಾಲ್ ಕಟ್ಟಡದ ಪಾರ್ಕಿಂಗ್ ನಲ್ಲಿ ಬ್ಲಾಕ್ ಮೂನ್ ರೆಸ್ಟೋ ಕೆಫೆ ಹೆಸರಲ್ಲಿ ಹುಕ್ಕಾ ಬಾರ್ ನಡೆಸುತ್ತಿದ್ದಲ್ಲಿಗೆ ದಾಳಿ ನಡೆಸಿದ್ದರು. ಹುಕ್ಕಾ ಬಾರ್ ಮಾಲೀಕನೆಂದು ಎಂಎಫ್ ಸಿ ಹೊಟೇಲ್ ಮಾಲೀಕ ಸಿದ್ದಿಕ್, ಅಬ್ದುಲ್ ನಾಸಿರ್, ಸಫ್ವಾನ್ ಎಂಬವರನ್ನು ಬಂಧಿಸಿದ್ದಾಗಿ ಪೊಲೀಸ್ ಕಮಿಷನರ್ ಪ್ರಕಟಣೆ ನೀಡಿದ್ದರು. ಇದರ ಜೊತೆಗೆ, ಆರೋಪಿ ಸಿದ್ದಿಕ್ ಫೋಟೊವನ್ನೂ ನೀಡಿದ್ದರು.


ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಹೊಟೇಲ್ ಮಾಲೀಕ ಸಿದ್ದಿಕ್ ಆಡಿಯೋ ಮೆಸೇಜ್ ಮೂಲಕ ಸ್ಪಷ್ಟನೆ ನೀಡಿದ್ದು ತನ್ನನ್ನು ಪೊಲೀಸರು ಬಂಧಿಸಿಲ್ಲ. ಅಲ್ಲದೆ, ತನಗೂ ಹುಕ್ಕಾ ಬಾರ್ ಕೆಫೆಗೂ ಸಂಬಂಧ ಇಲ್ಲ. ಸದ್ಯಕ್ಕೆ ನಾನು ಮಂಜೇಶ್ವರದ ವರ್ಕಾಡಿಯ ತಾಯಿ ಮನೆಯಲ್ಲಿದ್ದು ಯಾರೋ ತನಗೆ ಆಗದವರು ಪಿತೂರಿ ಮಾಡಿದ್ದಾರೆ. ಪೊಲೀಸರು ಬಂಧಿಸಿದ್ದಾಗಿ ಹೇಳಿ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿದಿದ್ದಾರೆ. ತೇಜೋವಧೆ ಮಾಡುವ ಯತ್ನ ಮಾಡಿದ್ದಾರೆ. ಹುಕ್ಕಾ ಬಾರ್ ಬಗ್ಗೆ ತನಗೆ ಗೊತ್ತೇ ಇಲ್ಲ. ನನ್ನ ಜೊತೆಗೆ ಬಂಧಿಸಿದ್ದಾಗಿ ತೋರಿಸಿರುವ ಇನ್ನಿಬ್ಬರು ಕೂಡ ಅರೆಸ್ಟ್ ಆಗಿಲ್ಲ. ಅವರು ತಮ್ಮ ಮನೆಯಲ್ಲೇ ಇದ್ದಾರೆ.
ಸಿಸಿಬಿ ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಿದ್ದಾರೆ. ನಾನು ಪೊಲೀಸರ ವಿರುದ್ಧ ಕೋರ್ಟಿನಲ್ಲಿ ಪ್ರಶ್ನಿಸುತ್ತೇನೆ. ಪೊಲೀಸ್ ಕಮಿಷನರ್ ವಿರುದ್ಧ ಮಾನನಷ್ಟ ಕೇಸು ಹಾಕುತ್ತೇನೆಂದು ಈ ಕುರಿತು ಸಂಪರ್ಕಿಸಿದ ಹೆಡ್ ಲೈನ್ ಕರ್ನಾಟಕಕ್ಕೆ ಸಿದ್ದಿಕ್ ತಿಳಿಸಿದ್ದಾರೆ.
ಪೊಲೀಸರು ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ಆರೋಪಿಗಳನ್ನು ಬಂಧನ ಮಾಡಿದರೆ ಮಾತ್ರ ಫೋಟೊ ನೀಡುತ್ತಾರೆ. ಠಾಣೆಯಲ್ಲೇ ಜಾಮೀನು ನೀಡಬಲ್ಲ ಗಂಭೀರವಲ್ಲದ ಪ್ರಕರಣದಲ್ಲಿ ಆರೋಪಿಗಳ ಬಂಧನ ಆದರೂ ಫೋಟೊ ನೀಡುವುದಿಲ್ಲ. ಹುಕ್ಕಾ ಬಾರ್ ಇಡೀ ರಾಜ್ಯದಲ್ಲಿ ನಿಷೇಧವಿದ್ದು ಅಕ್ರಮವಾಗಿ ನಡೆಸುತ್ತಿದ್ದರೆ ಗಂಭೀರ ವಿಚಾರ. ಆದರೆ ಈ ಪ್ರಕರಣದಲ್ಲಿ ಮಾಲೀಕ ಸಿದ್ದಿಕ್ ನನ್ನು ಬಂಧಿಸಿದ್ದಾಗಿ ಹೇಳಿ ಮಾಧ್ಯಮಕ್ಕೆ ಪ್ರಕಟಣೆ ಕೊಟ್ಟು ಪೊಲೀಸರು ತಾವೇ ಬೆನ್ನು ತಟ್ಟಿಕೊಂಡಿದ್ದರು. ಈಗ ಆರೋಪಿ ಎನ್ನಲಾದ ಸಿದ್ದಿಕ್ ತನ್ನನ್ನು ಬಂಧನ ಮಾಡಿಯೇ ಇಲ್ಲ ಎನ್ನುತ್ತಿದ್ದು ಪೊಲೀಸರಿಗೆ ಸವಾಲು ಹಾಕಿದ್ದಾನೆ. ಬಂಧನ ಮಾಡದೇ ಪೊಲೀಸರು ಪ್ರಕಟಣೆ ನೀಡಿದ್ದಾರೆಯೇ ಅಂತ ಪೊಲೀಸ್ ಕಮಿಷನರ್ ಅವರೇ ಹೇಳಬೇಕು.
Mangalore Black Moon Resto cafe raid, MFC Hotel Owner Siddique Denies Arrest, Calls It Fake News, Vows to Challenge in Court.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am