Mangalore Accident, Kolya: ಬೈಕ್ ಸ್ಕಿಡ್ ಆಗಿ ಸವಾರ ದಾರುಣ ಸಾವು ; ಕೊಂಡಾಣ ಕ್ಷೇತ್ರದ ಉತ್ಸವಕ್ಕೆ ತೆರಳಿ ಹಿಂತಿರುಗುತ್ತಿದ್ದಾಗ ಅವಘಡ 

24-05-25 12:41 pm       Mangalore Correspondent   ಕರಾವಳಿ

ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಸವಾರ ದಾರುಣವಾಗಿ ಮೃತಪಟ್ಟ ಘಟನೆ ರಾ.ಹೆ. 66ರ ಕೊಲ್ಯ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 

ಉಳ್ಳಾಲ, ಮೇ.24: ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಸವಾರ ದಾರುಣವಾಗಿ ಮೃತಪಟ್ಟ ಘಟನೆ ರಾ.ಹೆ. 66ರ ಕೊಲ್ಯ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 

ಸೋಮೇಶ್ವರ ಗ್ರಾಮದ ಪಿಲಾರು ಅಂಬಿಸಾದಿ ನಿವಾಸಿ ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದ ಮನೋಜ್ ಗಟ್ಟಿ(54) ಮೃತ ದುರ್ದೈವಿ. ಮನೋಜ್ ನಿನ್ನೆ ರಾತ್ರಿ ಕೋಟೆಕಾರಿನ ಕೊಂಡಾಣ ಕ್ಷೇತ್ರದ ಕಡೆಯ ಬಂಡಿ ಉತ್ಸವಕ್ಕೆ ತನ್ನ ಬೈಕಲ್ಲಿ ತೆರಳಿ ಹಿಂತಿರುಗುತ್ತಿದ್ದ ವೇಳೆ ಕೊಲ್ಯದಲ್ಲಿ ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದಿದೆ. ರಸ್ತೆಗೆಸೆಯಲ್ಪಟ್ಟ ಮನೋಜ್ ಅವರು ಗಂಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯರು ತಕ್ಷಣವೇ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತ ಮನೋಜ್ ತಾಯಿ, ಸಹೋದರ, ಸಹೋದರಿ, ಪತ್ನಿ ಮತ್ತು ಏಕೈಕ ಪುತ್ರನನ್ನ ಅಗಲಿದ್ದಾರೆ.

Tragic Death as Bike Skids, 54 year old killed while Returning from Kondana Festival near kolya in Mangalore. The deceased has been identified as Manoj Gatti.