ಬ್ರೇಕಿಂಗ್ ನ್ಯೂಸ್
21-12-20 02:45 pm Mangalore Correspondent ಕರಾವಳಿ
ಉಳ್ಳಾಲ ಡಿ.21: ಇಲ್ಲಿನ ದೇರಳಕಟ್ಟೆಯ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರ ತಂಡದಿಂದ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಾಲ್ಕು ವರ್ಷದ ಮಗುವಿನ ಕಾಲಿನ ತೊಡೆಯಲ್ಲಿ ಕ್ಯಾನ್ಸರ್ ಬಾಧಿತ ಎಲುಬಿನ ಅಸ್ಥಿಮಜ್ಜೆಯ ಮೇಲೆ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದ್ದು ಇದೊಂದು ಅಪರೂಪದ ಮತ್ತು ಭಾರತದಲ್ಲೇ ಪ್ರಥಮ ಪ್ರಯೋಗವಾಗಿದೆ ಎಂದು ಯೆನೆಪೋಯ ಮೆಡಿಕಲ್ ಕಾಲೇಜಿ ವೈದ್ಯಕೀಯ ಅಧೀಕ್ಷಕ ಡಾ.ಪದ್ಮನಾಭ ಹೇಳಿದ್ದಾರೆ.
ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು. ನಾಲ್ಕು ವರ್ಷದ ಮಗುವಿನ ಕುಟುಂಬವು ಈ ಸಮಸ್ಯೆಯ ಬಗ್ಗೆ ಅರಿವಾಗಿ ಭಾರತದ ಹಲವಾರು ಪರಿಣಿತ ಕ್ಯಾನ್ಸರ್ ಶಸ್ತ್ರಚಿಕಿತ್ಸಕರನ್ನು ಸಂದರ್ಶಿಸಿದಾಗ ಕ್ಯಾನ್ಸರ್ ಬಾಧಿತ ಕಾಲಿನ ಭಾಗವನ್ನು ತುಂಡರಿಸುವುದೇ ಪರಿಹಾರ ಎಂದು ತಿಳಿಸಿದ್ದರು.
ಬಳಿಕ ಯೆನಪೋಯ ಮೆಡಿಕಲ್ ಕಾಲೇಜಿನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಜಲಾಲುದ್ದೀನ್ ಅಕ್ಬರ್ ಅವರನ್ನು ಭೇಟಿ ಮಾಡಿ ವಿಚಾರಿಸಿದ್ದರು. ಬಳಿಕ ಉಪಕುಲಪತಿ ಡಾ.ವಿಜಯಕುಮಾರ್ ಅವರ ಮಾರ್ಗದರ್ಶನದೊಂದಿಗೆ ಕಾಲು ಕತ್ತರಿಸದೆಯೇ ಮಗುವಿಗೆ ಚಿಕಿತ್ಸೆ ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಸತತ ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿ ಮಗುವಿನ ಕಾಲು ಮತ್ತು ಜೀವವನ್ನು ರಕ್ಷಿಸುವ ಪಣದೊಂದಿಗೆ ಅಪರೂಪದ ಯಶಸ್ವೀ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.
ಸುಮಾರು ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ ಆರು ಗಂಟೆಯ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಅಲ್ಲದೆ ಇಂತಹ ಕ್ಯಾನ್ಸರ್ ಪೀಡಿತ ಕಾಲಿನ ಅಂಗನ್ಯೂನ್ಯತೆ ಸರಿಪಡಿಸುವ ಬಹಳ ವಿರಳವಾಗಿ ನಡೆಯುವ ಶಸ್ತ್ರಚಿಕಿತ್ಸೆಯನ್ನು ಯೆನೆಪೋಯದ ಪರಿಣಿತ ವೈದ್ಯರುಗಳ ತಂಡವು ಯಶಸ್ವಿಯಾಗಿ ನಡೆಸಿ ನಾಲ್ಕು ವರ್ಷಗಳ ಮಗುವಿನ ಕಾಲು ಹಾಗೂ ಜೀವದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ.
ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಯೆನೆಪೋಯ ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ವಿಭಾಗದ ಡಾ.ರೋಹನ್ ಶೆಟ್ಟಿ ,ಡಾ.ಅಮರ್ ರಾವ್, ಡಾ.ನೂರ್ ಮಹಮ್ಮದ್, ಆರ್ಥೋಪೆಡಿಕ್ಸ್ ವಿಭಾಗ ಮುಖ್ಯಸ್ಥರಾದ ಡಾ.ಇಮ್ತಿಯಾಝ್ ಅಹ್ಮದ್, ಡಾ.ಅಭಿಷೇಕ್ ಶೆಟ್ಟಿ, ಅರಿವಳಿಕೆ ವಿಭಾಗದ ಡಾ.ಎಜಾಝ್, ಮಕ್ಕಳ ಚಿಕಿತ್ಸಾ ವಿಭಾಗದ ಡಾ.ಮಿಥುನ್ ಪಾಲ್ಗೊಂಡಿದ್ದರು.
ಭಾರತದಲ್ಲೇ ಪ್ರಥಮ ಪ್ರಯೋಗ
ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ.ಜಲಾಲುದ್ದೀನ್ ಅಕ್ಬರ್ ಅವರು ಮಾಹಿತಿ ನೀಡಿ ಸಾಮಾನ್ಯವಾಗಿ ಇಂತಹ ಕ್ಯಾನ್ಸರ್ ಬಾಧಿತ ಚಿಕಿತ್ಸೆಯನ್ನು ಕಾಲುಗಳನ್ನು ಕತ್ತರಿಸಿಯೇ ಪರಿಹಾರ ಕಂಡುಕೊಳ್ಳುವುದು ಕಾಣುತ್ತೇವೆ. ರೋಗಭಾದಿತ ಅಂಗಗಳ ಛೇದನ ಮಾಡದೆಯೇ ಪರಿಣಿತ ವೈದ್ಯರು ಮತ್ತು ಆಧುನಿಕ ವೈದ್ಯಕೀಯ ಪರಿಕರ ಮತ್ತು ಉಪಕರಣಗಳಿಂದ ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರುಗಳ ಸಾಧನೆಯಾಗಿದೆ. ಅಲ್ಲದೆ ಇದು ಬಹಳ ಅಪರೂಪದ ಮತ್ತು ಭಾರತದಲ್ಲಿ ಇಷ್ಟು ಸಣ್ಣ ವಯಸ್ಸಿನ ಮಕ್ಕಳಲ್ಲಿ ಇಂತಹ ಚಿಕಿತ್ಸೆ ನಡೆದಿರುವುದು ಇದೇ ಪ್ರಥಮ ಆಗಿದೆ ಎಂದರು.
Mangalore Yenepoya Hopsital Doctors perform a rare Leg operation of a little boy which is of First in India.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm