ಬ್ರೇಕಿಂಗ್ ನ್ಯೂಸ್
19-05-25 12:31 pm Mangalore Correspondent ಕರಾವಳಿ
ಮಂಗಳೂರು, ಮೇ 19 : ಧರ್ಮಸ್ಥಳ ಮೂಲದ ಏರೋನಾಟಿಕ್ಸ್ ಇಂಜಿನಿಯರ್ ಆಕಾಂಕ್ಷಾ(22) ನಿಗೂಢ ಸಾವು ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದ್ದು ಪ್ರೇಮ ವೈಫಲ್ಯದಿಂದ ಕಾಲೇಜು ಕಟ್ಟಡದಿಂದಲೇ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪ್ರಬಲ ಶಂಕೆ ವ್ಯಕ್ತವಾಗಿದೆ.
ಧರ್ಮಸ್ಥಳ ಗ್ರಾಮದ ಬೊಳಿಯೂರು ನಿವಾಸಿ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ ಎಸ್ ನಾಯರ್ ಮೇ 17 ರಂದು ಪಂಜಾಬ್ನ ಫುಗ್ವಾರದ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಪೂರೈಸಿದ್ದು ದೆಹಲಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಈ ನಡುವೆ, ಜಪಾನ್ ಉದ್ಯೋಗಕ್ಕಾಗಿ ಆಯ್ಕೆಯಾಗಿದ್ದ ಆಕಾಂಕ್ಷಾ ತನ್ನ ಶೈಕ್ಷಣಿಕ ಪ್ರಮಾಣಪತ್ರ ಪಡೆಯಲು ಪಂಜಾಬಿನ ಕಾಲೇಜಿಗೆ ತೆರಳಿದ್ದಳು. ಮೇ 15ರಂದು ದೆಹಲಿಯಿಂದ ತೆರಳಿದ್ದು 16ರಂದು ಕಾಲೇಜು ತಲುಪಿದ್ದರೂ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ. ಹೀಗಾಗಿ ಗೆಳೆಯರ ಜೊತೆಗೆ ಉಳಿದುಕೊಂಡಿದ್ದ ಆಕಾಂಕ್ಷಾ ಮರುದಿನ 17ರಂದು ಕಾಲೇಜಿಗೆ ಬಂದಿದ್ದಳು. ಅದೇ ದಿನ ಮಧ್ಯಾಹ್ನ ಹೆತ್ತವರಿಗೂ ಫೋನ್ ಮಾಡಿದ್ದಳು. ಸಂಜೆಯ ವೇಳೆಗೆ ಜಲಂಧರ್ ಪೊಲೀಸರು ಕರೆ ಮಾಡಿ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ.

ಪ್ರೇಮ ವೈಫಲ್ಯಕ್ಕೆ ಜೀವ ತೆತ್ತರಾ ?
ಆಕಾಂಕ್ಷಾ ಅವರು ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಅದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದ ಕೇರಳ ಮೂಲದ ಬಿಜಿಲ್ ಮ್ಯಾಥ್ಯೂ ಎಂಬವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬಿಜಿಲ್ ಮ್ಯಾಥ್ಯೂ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದು, ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದಾರೆ. ಆದರೂ ಆಕಾಂಕ್ಷಾ ಪ್ರಾಧ್ಯಾಪಕ ಮ್ಯಾಥ್ಯೂ ಅವರ ಮನೆಗೆ ಹೋಗಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ಜಗಳ ಮಾಡಿದ್ದರಂತೆ.
ಶನಿವಾರ ಕಾಲೇಜಿನಲ್ಲೂ ಬಿಜಿಲ್ ಮ್ಯಾಥ್ಯೂ ಜೊತೆಗೆ ಜಗಳವಾಡಿದ್ದಾರೆ. ನಂತರ, ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತಂದೆ, ತಾಯಿ ಮತ್ತು ಸೋದರ ಆಕರ್ಶ್ ನಾಯರ್ ಪಂಜಾಬ್ ತೆರಳಿದ್ದು ಸಾವಿನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆಂದು ಮ್ಯಾಥ್ಯೂ ವಿರುದ್ಧ ಜಲಂಧರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಯುವತಿಯ ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಿ ಕುಟುಂಬಸ್ಥರ ವಶಕ್ಕೆ ನೀಡಿದ್ದಾರೆ.
ಕೇರಳ ಮೂಲದ ಸುರೇಂದ್ರ ನಾಯರ್ ಸಿವಿಲ್ ಇಂಜಿನಿಯರ್ ಆಗಿದ್ದು ಧರ್ಮಸ್ಥಳದ ಬೋಳಿಯೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಇದಕ್ಕು ಹಿಂದೆ ಬೆಳ್ತಂಗಡಿ ಕಾಶಿಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು. ತಾಯಿ ಸಿಂಧುದೇವಿ ಜೆಡಿಎಸ್ ನಲ್ಲಿ ಸಕ್ರಿಯವಾಗಿದ್ದರು. ಇತ್ತೀಚೆಗಷ್ಟೆ ಆಕಾಂಕ್ಷಾ ಸೋದರನ ಮದುವೆ ಮಂಗಳೂರಿನಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಕುಟುಂಬಕ್ಕೆ ಸಾವಿನ ಶಾಕ್ ಬಡಿದಿದೆ. ಮನೆಯವರು ಸೋಮವಾರ (ಮೇ 19) ಸಂಜೆ ವೇಳೆಗೆ ಧರ್ಮಸ್ಥಳ ಗ್ರಾಮದ ಬೊಳಿಯೂರಿನ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.
A tragic incident unfolded at a private engineering college in Punjab after a 21-year-old aerospace engineering student Akanksha from Dharmasthala Mangalore died following a fall from the 4th floor of the college building. The incident is being linked to an alleged romantic relationship with a faculty member that had reportedly ended recently.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am