ಬ್ರೇಕಿಂಗ್ ನ್ಯೂಸ್
15-05-25 08:04 pm Mangalore Correspondent ಕರಾವಳಿ
ಮಂಗಳೂರು, ಮೇ 15 : ಕರಾವಳಿಯ ಜನರು ರಾಷ್ಟ್ರೀಯತೆ ಪರ ಇದ್ದಾರೆಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿದ್ದಾರೆ, ಪಿಎಫ್ಐ-ಉಗ್ರವಾದ- ವಿದೇಶಿ ನಂಟು ಇದೆಯೆಂಬ ಬಲವಾದ ಗುಮಾನಿ ಇದ್ದರೂ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸದೆ ಸೇಫ್ ಗಾರ್ಡ್ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪದೇ ಪದೇ ಇಂತಹ ಕೃತ್ಯಗಳನ್ನು ಮುಂದಿಟ್ಟು ತುಳುನಾಡಿನ ಜನರನ್ನು ಕೋಮುವಾದಿಗಳು ಅಂತ ಬಿಂಬಿಸಲು ಹೊರಟಿದ್ದಾರೆ. ಆಮೂಲಕ ಈ ಭಾಗದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದ್ದಾರೆ. ಈ ಜಿಲ್ಲೆಗೆ ವಿಸಿಟಿಂಗ್ ಉಸ್ತುವಾರಿ ಎನ್ನುವಂತೆ ದಿನೇಶ್ ಗುಂಡೂರಾವ್ ಇದ್ದಾರೆ. ಮುಖ್ಯಮಂತ್ರಿ ಆರು ತಿಂಗಳಿಗೊಮ್ಮೆ ಬಂದರೂ, ಒಂದು ಸಭೆಯನ್ನೂ ನಡೆಸದೆ, ಚಿಕ್ಕಾಸು ಅನುದಾನವನ್ನೂ ನೀಡದೆ ಯಾವುದೇ ಕಾಮಗಾರಿಗೂ ಶಿಲಾನ್ಯಾಸ ಮಾಡದೆ ಚುನಾಯಿತ ಜನಪ್ರತಿನಿಧಿಗಳನ್ನು ದೂರವಿಟ್ಟು ಸಂಜೆ ಎರಡು ಗಂಟೆ ಕಾಲಕ್ಕೆ ಬಂದು ಹೋಗುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿಯ ಅನುದಾನದಲ್ಲಿ ನಿರ್ಮಿಸಿದ ಎರಡು ಕಟ್ಟಡಗಳನ್ನು ಮುಖ್ಯಮಂತ್ರಿ ಬರುತ್ತಿರುವುದಕ್ಕೆ ಸ್ವಾಗತ ಇದೆ, ಆದರೆ ಈ ಭಾಗದ ಅಭಿವೃದ್ಧಿ ಮರೆತಿರುವುದು ಒಪ್ಪುವುದಿಲ್ಲ ಎಂದರು. .
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಆದಕೂಡಲೇ ಆತ ರೌಡಿಶೀಟರ್, ಫಾಜಿಲ್ ಕುಟುಂಬದ ಪಾತ್ರವಿಲ್ಲ ಎನ್ನುವ ಪ್ರೊಪಗಾಂಡ ಸೃಷ್ಟಿಸಿದ್ದರು. ಎನ್ಐಎ ತನಿಖೆಗೆ ಕೊಡುವುದೇ ಇಲ್ಲವೆಂದು ಗೃಹ ಸಚಿವರು, ಮುಖ್ಯಮಂತ್ರಿ ಹೇಳುತ್ತಿರುವುದರ ಹಿನ್ನೆಲೆ ಏನಿದೆ. ಎನ್ಐಎ ತನಿಖೆಯಾದರೆ ಇವರಿಗೇನು ಭಯ ಇದೆ. ಪಿಎಫ್ಐ ನಂಟು ಕಾಲ್ಪನಿಕ ಕತೆ ಎಂದು ದಿನೇಶ್ ಗುಂಡೂರಾವ್ ಹೇಳುತ್ತಿರುವುದರ ಅರ್ಥ ಏನು? ತನಿಖೆಯೇ ಆಗುವ ಮೊದಲು ಈ ಹೇಳಿಕೆ ಕೊಡುತ್ತಾರೇಕೆ. ಚುನಾವಣೆಯಲ್ಲಿ ಪಿಎಫ್ಐ ಲಾಭ ಮಾಡಿಕೊಟ್ಟಿದ್ದಕ್ಕೆ ರಿಟರ್ನ್ ಗಿಫ್ಟ್ ಕೊಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮಾಡಬೇಕಾಗುತ್ತದೆ. ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ಸಭೆಯನ್ನೂ ನಡೆಸದ ಉಸ್ತುವಾರಿ ಯಾಕಿರಬೇಕು ಎಂದು ಪ್ರಶ್ನಿಸಿದ್ದಾರೆ.
ಕರಾವಳಿಯ ಜನರು ರಾಷ್ಟ್ರೀಯತೆ ಪರ ಇದ್ದವರು ಎಂಬ ಕಾರಣಕ್ಕೆ ಅಭಿವೃದ್ಧಿ, ಅನುದಾನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದಕ್ಕಾಗಿ ಸುಹಾಸ್ ಶೆಟ್ಟಿ ಕೊಲೆಯ ನೆಪದಲ್ಲಿ ರಾತ್ರಿ 9 ಗಂಟೆಗೆ ಬಂದ್ ಮಾಡಿ ಜನರಲ್ಲಿ ಭೀತಿ ಸೃಷ್ಟಿಸುತ್ತಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ಷಡ್ಯಂತ್ರದ ಭಾಗವಾಗಿದ್ದು, ಜನರನ್ನು ಕತ್ತಲಲ್ಲಿಟ್ಟು ಅಭಿವೃದ್ಧಿ ವಿಚಾರವನ್ನೇ ಮರೆಸುವ ಕುತಂತ್ರ ಇದೆ. ಯಾವುದೇ ಪ್ರಕರಣದಲ್ಲಿ ದೇಶದ್ರೋಹದ ಸಂಶಯ ಇದ್ದರೆ ಅದನ್ನು ಕೇಂದ್ರ ತನಿಖಾ ಏಜನ್ಸಿಗೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ದೇಶದ ಪೊಲೀಸ್ ಮುಖ್ಯಸ್ಥರ ಸಭೆಯಲ್ಲಿ ಸೂಚಿಸಿದ್ದಾರೆ. ಎನ್ಐಎ, ಸಿಬಿಐ ಇರುವುದೇ ರಾಜ್ಯ ಪೊಲೀಸರ ಬೆಂಬಲಕ್ಕಾಗಿ. ಸಪೋರ್ಟಿವ್ ಆಗಿ ತನಿಖಾ ಕಾರ್ಯ ಮಾಡುತ್ತದೆ. ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಕರಾವಳಿ ಜನತೆ, ಆತನ ಕುಟುಂಬಸ್ಥರು, ಪ್ರತಿಪಕ್ಷವಾಗಿ ಬಿಜೆಪಿ ಒತ್ತಾಯಿಸುತ್ತಿದ್ದರೆ, ಕಾಂಗ್ರೆಸಿಗರು ಮಾತ್ರ ಎನ್ಐಎ ತನಿಖೆ ಮಾಡುವುದೇ ಇಲ್ಲ ಎಂದು ಹಠ ಹಿಡಿದು ಕುಳಿತಿದ್ದು ಏನಕ್ಕೆಂದು ಅರ್ಥವಾಗುತ್ತಿಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ರಾಜಗೋಪಾಲ ರೈ, ಯತೀಶ್ ಆರ್ವಾರ್, ವಸಂತ ಪೂಜಾರಿ ಇದ್ದರು.
On the eve of Chief Minister Siddaramaiah’s visit to Mangaluru, Member of Parliament Capt. Brijesh Chowta has taken to social media platform ‘X’ to criticise what he called the “negative branding” of coastal Karnataka as communal and “barren.”
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am