ಬ್ರೇಕಿಂಗ್ ನ್ಯೂಸ್
05-05-25 03:24 pm Mangalore Correspondent ಕರಾವಳಿ
ಮಂಗಳೂರು, ಮೇ 5 : ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯಲ್ಲಿ ನಿಷೇಧಿತ ಸಂಘಟನೆ ಪಿಎಫ್ಐ ಕೈವಾಡ ಬಲವಾಗಿದ್ದು, ದೊಡ್ಡ ಮಟ್ಟದ ಫಂಡಿಂಗ್ ಮಾಡಿರುವ ಶಂಕೆ ಇದೆ. ಕೊಲೆಯಾಗುವುದಕ್ಕೂ ಮೂರು ದಿನ ಮೊದಲು ಸುಹಾಸ್ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಬಜ್ಪೆ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ರಶೀದ್ ಮೂಲಕವೇ ಆರೋಪಿಗಳಿಗೆ ಈ ಮಾಹಿತಿ ತಲುಪಿತ್ತೆಂಬ ಶಂಕೆ ಇದೆ. ಹೀಗಾಗಿ ಕೊಲೆ ಪ್ರಕರಣದ ಒಟ್ಟು ತನಿಖೆಯನ್ನು ಎನ್ಐಎ ಅಧಿಕಾರಿಗಳಿಂದಲೇ ನಡೆಸಬೇಕು. ಆಗಮಾತ್ರ ಇದರ ಹಿಂದಿನ ಶಕ್ತಿ, ಷಡ್ಯಂತ್ರ ಬಯಲಿಗೆ ಬರುತ್ತದೆ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಮುಖರಾದ ಕೆ.ಟಿ. ಉಲ್ಲಾಸ್ ಹೇಳಿದ್ದಾರೆ.
ಕದ್ರಿಯ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಸುಹಾಸ್ ಶೆಟ್ಟಿ ಕೊಲೆಯನ್ನು ಕೇವಲ ಫಾಜಿಲ್ ಹತ್ಯೆಗೆ ಪ್ರತೀಕಾರ ಎಂದು ಪೊಲೀಸರು ಸೀಮಿತಗೊಳಿಸಿದ್ದಾರೆ. ಆದರೆ ಫಾಜಿಲ್ ಕಾರಣಕ್ಕೆ ಮಾತ್ರ ಕೊಲೆಯಾಗಿದ್ದಲ್ಲ. ಇದರ ಹಿಂದೆ ಹಿಂದು ಸಮಾಜವನ್ನು ಭಯಪಡಿಸುವ ಅಜೆಂಡಾ ಇದೆ. ಅಷ್ಟೊಂದು ಜನರು ಸೇರಿರುವಾಗಲೇ ಯಾವುದೇ ಭಯ ಇಲ್ಲದೆ ಕೊಂದು ಮುಗಿಸಿದ್ದಾರೆ. ಈ ಕೃತ್ಯದಲ್ಲಿ ಹಿಂದೆ ಪ್ರಶಾಂತ ಪೂಜಾರಿ ಹತ್ಯೆ ಆರೋಪಿಯಾಗಿದ್ದ ಮುಸ್ತಫಾ ಮತ್ತು ಸುಖಾನಂದ ಶೆಟ್ಟಿ ಹತ್ಯೆ ಆರೋಪಿ ನೌಶಾದ್ ಫಂಡಿಂಗ್ ಮಾಡಿದ್ದಾರೆ. ಇವರಿಬ್ಬರು ಕೂಡ ಪಿಎಫ್ಐನಲ್ಲಿ ಸಕ್ರಿಯವಾಗಿದ್ದವರು. ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟ ಸಫ್ವಾನ್, ಪಿಎಫ್ಐನಲ್ಲಿ ಗುರುತಿಸಿಕೊಂಡಿರುವ ಇಸ್ಮಾಯಿಲ್ ಇಂಜಿನಿಯರ್ ಎಂಬ ವ್ಯಕ್ತಿಯ ಬಾಡಿಗೆ ಮನೆಯಲ್ಲಿದ್ದವನು.
ಮೊನ್ನೆ ಕುಡುಪು ಭಾಗದಲ್ಲಿ ಅನಿರೀಕ್ಷಿತವಾಗಿ ಯಾವುದೋ ವ್ಯಕ್ತಿಯ ಹತ್ಯೆ ಆಗಿದ್ದಕ್ಕೆ ಪ್ರತಿಯಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡುವುದಕ್ಕಾಗಿ ಪಿಎಫ್ಐ ಮಾಡ್ಯೂಲ್ ನಲ್ಲಿದ್ದವರು ಒಗ್ಗೂಡಿದ್ದಾರೆ. ಪಿಎಫ್ಐ ಕೇರಳ ಮೂಲದ ಸಂಘಟನೆಯಾಗಿದ್ದು ಹಿಂದುಗಳನ್ನು ಭಯಪಡಿಸುವುದು ಮತ್ತು ಹಿಂದು ನಾಯಕರನ್ನು ಟಾರ್ಗೆಟ್ ಮಾಡಿ ಕೊಲ್ಲಿಸುವುದು, ಆಮೂಲಕ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸುವುದು ಇದರ ಅಜೆಂಡಾ ಆಗಿತ್ತು. ಇದೇ ಕಾರಣಕ್ಕೆ ಪಿಎಫ್ಐ ನಿಷೇಧ ಮಾಡಲಾಗಿತ್ತು.
ಇದಲ್ಲದೆ, ಈ ಕೃತ್ಯದಲ್ಲಿ ಕಳಸ ಮೂಲದ ಇಬ್ಬರು ಹಿಂದುಗಳನ್ನು ಸೇರಿಸಿದ್ದಾರೆ. ಇವರಿಗೆ ಸುಹಾಸ್ ಶೆಟ್ಟಿ ಯಾರೆಂದೇ ತಿಳಿದಿಲ್ಲ. ಪಿಎಫ್ಐ ಬ್ಯಾನ್ ಆದಾಗಲೇ ಮುಂದೆ ಇಂತಹ ಕೃತ್ಯಗಳಲ್ಲಿ ಹಿಂದುಗಳನ್ನೂ ಸೇರಿಸಬೇಕು ಎನ್ನುವ ಪ್ಲಾನ್ ಆಗಿದ್ದ ಮಾಹಿತಿ ಇತ್ತು. ಹಿಂದುಗಳಿದ್ದಾರೆಂದು ತೋರಿಸುವುದಕ್ಕಾಗಿಯೇ ಇಬ್ಬರನ್ನು ಪ್ರಕರಣದಲ್ಲಿ ಸೇರಿಸಲಾಗಿತ್ತು. ಹಾಗಾಗಿ, ಇದೊಂದು ರೀತಿಯಲ್ಲಿ ವ್ಯವಸ್ಥಿತವಾಗಿ ನಡೆದಿರುವ ಕೊಲೆಯಾಗಿದ್ದು, ಕೇವಲ ಫಾಜಿಲ್ ಕಾರಣಕ್ಕೆ ಆಗಿದ್ದಲ್ಲ. ಪಿಎಫ್ಐ ಮಾಡ್ಯೂಲ್ ವ್ಯವಸ್ಥಿತ ರೂಪದಲ್ಲಿ ಕೆಲಸ ಮಾಡಿದೆ. ಫಾಜಿಲ್ ಹತ್ಯೆ ಬಳಿಕ ಕೋಟ್ಯಂತರ ರೂ. ಕಲೆಕ್ಷನ್ ಆಗಿದ್ದು ಅದೀಗ ಬಳಕೆಯಾಗಿದೆ. ಇದಕ್ಕಾಗಿ ಕೃತ್ಯದ ಬಗ್ಗೆ ಅಮೂಲಾಗ್ರ ತನಿಖೆ ಆಗಬೇಕಾಗಿದ್ದು, ತನಿಖೆಯನ್ನು ಎನ್ಐಎ ತಂಡಕ್ಕೇ ಕೊಡಬೇಕಾಗಿದೆ ಎಂದು ಒತ್ತಾಯಿಸಿದರು.
ಇದೇ ವೇಳೆ, ಗೃಹ ಸಚಿವರು ರಾಜ್ಯ ಪೊಲೀಸರೇ ಸಮರ್ಥರಿದ್ದಾರೆ, ಎನ್ಐಎ ತನಿಖೆ ಯಾಕೆ ಬೇಕೆಂದು ಪ್ರಶ್ನೆ ಮಾಡಿದ್ದಾರೆ. ಆದರೆ ನಮಗೆ ಇವರ ತನಿಖೆಯ ಮೇಲೆ ನಂಬಿಕೆ ಇಲ್ಲ. ಯಾಕಂದ್ರೆ, ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ಸರಕಾರದ ಸಚಿವರೊಬ್ಬರು ಬಾಂಬ್ ಹಾಕಿದವರು ನಮ್ಮ ಸೋದರರು ಎಂದು ಹೇಳಿದ್ದರು. ಬೆಂಗಳೂರಿನ ರಾಮೇಶ್ವರ ಕೆಫೆ ಪ್ರಕರಣದಲ್ಲಿಯೂ ಇವರು ನಿರ್ಲಕ್ಷ್ಯ ವಹಿಸಿದ್ದರು. ಎರಡು ಕಡೆಯೂ ಎನ್ಐಎ ತನಿಖೆಯಾದಾಗ ಬಂಧಿತರು ಐಸಿಸ್ ಉಗ್ರರು ಎಂದು ತಿಳಿದುಬಂದಿತ್ತು. ಆಡಳಿತ ನಡೆಸುತ್ತಿರುವವರಿಗೇ ಇಂಥ ಮನಸ್ಥಿತಿ ಇದ್ದ ಮೇಲೆ ಸೂಕ್ತ ತನಿಖೆಯಾಗುತ್ತದೆ ಎಂದು ನಂಬುವುದು ಹೇಗೆ..
ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲು ಉಗ್ರರಿಗೆ ಪರಾರಿಯಾಗಲು ಸ್ಥಳೀಯರೇ ಸಹಕಾರ ನೀಡಿದ್ದರು. ಅದೇ ರೀತಿ ಮೊನ್ನೆಯ ಘಟನೆ ಸಂದರ್ಭ ಆರೋಪಿಗಳಿಗೆ ಪರಾರಿಯಾಗಲು ಸ್ಥಳೀಯರೇ ಸಹಕರಿಸಿದ್ದು ವಿಡಿಯೋದಲ್ಲಿ ಕಂಡುಬರುತ್ತದೆ. ಅವರೆಲ್ಲ ಯಾರು ಎಂಬ ಬಗ್ಗೆ ತನಿಖೆ ನಡೆದಿಲ್ಲ. ಭಾರತ- ಪಾಕಿಸ್ತಾನ ಯುದ್ಧ ನಡೆದಲ್ಲಿ ಲಷ್ಕರ್ ತೊಯ್ಬಾ, ಜೈಶ್ ಮಹಮ್ಮದ್ ಉಗ್ರವಾದಿ ಸಂಘಟನೆಗಳು ತಮ್ಮ ಸ್ಲೀಪರ್ ಸೆಲ್ ಮೂಲಕ ಭಾರತದಲ್ಲಿ ದಂಗೆ ಎಬ್ಬಿಸಲು ಷಡ್ಯಂತ್ರ ನಡೆಸಿವೆ. ಅಲ್ಲದೆ, ಹೆದ್ದಾರಿಗಳನ್ನು ಕತ್ತರಿಸಿ ಆಂತರಿಕವಾಗಿ ದೇಶವನ್ನು ದುರ್ಬಲಗೊಳಿಸಲು ಸೂಚನೆ ಕೊಟ್ಟಿದ್ದಾರೆ. ಹಿಂದು- ಮುಸ್ಲಿಂ ಮಧ್ಯೆ ದ್ವೇಷ ಬಿತ್ತಿ ಹಿಂಸಾಚಾರ ಸೃಷ್ಟಿಸುವುದಕ್ಕೆ ಯೋಜನೆ ಹಾಕಿದ್ದಾರೆ. ಗಡಿಯಲ್ಲಿ ಸಂಘರ್ಷ ಸ್ಥಿತಿ ಇರುವಾಗ ಇಲ್ಲಿ ಅಂತಹದ್ದೇ ವಾತಾವರಣ ಸೃಷ್ಟಿಯಾಗಿದ್ದು ಕಾಕತಾಳೀಯ ಅನಿಸುತ್ತಿಲ್ಲ ಎಂದು ಕೆ.ಟಿ ಉಲ್ಲಾಸ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ವಿಶ್ವ ಹಿಂದು ಪರಿಷತ್ತಿನ ಶರಣ್ ಪಂಪ್ವೆಲ್, ಎಚ್.ಕೆ.ಪುರುಷೋತ್ತಮ್, ರವಿ ಅಸೈಗೋಳಿ, ಲಿಖಿತ್ ಮೂಡುಶೆಡ್ಡೆ ಇದ್ದರು.
Serious allegations have emerged regarding the involvement of the banned organization Popular Front of India (PFI) in the murder of Hindu activist Suhas Shetty says Hindu Jagarana Vedike K T Ullas. Sources suspect that the PFI not only orchestrated the killing but also provided substantial funding for the operation. According to reports, just three days before the murder, weapons in Suhas Shetty’s possession were seized by the police. It is now suspected that this sensitive information may have been leaked to the assailants through Rashid, a Head Constable at the Bajpe police station.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 07:15 pm
Mangalore Correspondent
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm