ಬ್ರೇಕಿಂಗ್ ನ್ಯೂಸ್
03-05-25 06:57 pm Mangalore Correspondent ಕರಾವಳಿ
ಉಳ್ಳಾಲ, ಮೇ 3 : ಪ್ರಾಣಿಗಳ ಸಂರಕ್ಷಣೆಯ ಬಗೆಗೆ ಜನಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನ ಯುವಕನೋರ್ವ ಪಾದಯಾತ್ರೆಯಿಂದಲೇ ದೇಶ ಪರ್ಯಟನೆ ಹಮ್ಮಿಕೊಂಡಿದ್ದು, ತನ್ನ ಬೆನ್ನ ಹಿಂದೆಯೇ ಪ್ರೀತಿ ತೋರಿ ಬಂದ ಬೀದಿ ಶ್ವಾನವನ್ನೂ ವೀಲ್ ಚೆಯರಲ್ಲಿ ಹೊತ್ತು ದೇಶದ 29 ರಾಜ್ಯಗಳನ್ನ ಸುತ್ತಲು ಹೊರಟಿದ್ದಾನೆ.
ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಇರಿಸಿಕೊಂಡಿರುವ ಬೆಂಗಳೂರಿನ ವರ್ತೂರು ನಿವಾಸಿ ಸುಮಂತ್ ಅಶ್ವಿನ್(22) ಎಂಬ ಹದಿಹರೆಯದ ಯುವಕ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸಲು ದೇಶ ಪರ್ಯಟನೆ ನಡೆಸುತ್ತಿದ್ದು, ತಾನು ದತ್ತು ತೆಗೆದಿರುವ ಬೀದಿ ಶ್ವಾನ ಭೈರವನನ್ನೂ ಗಾಳಿ ಕುರ್ಚಿಯಲ್ಲಿ ಕುಳ್ಳಿರಿಸಿ ದೇಶ ಸುತ್ತಿಸುತ್ತಿದ್ದಾನೆ.
2024 ರ ಎಪ್ರಿಲ್ 14 ರಂದು ಸುಮಂತ್ ದಕ್ಷಿಣ ಭಾರತದ ಕನ್ಯಾಕುಮಾರಿಯಿಂದ ಉತ್ತರ ಭಾರತದ ಲಡಾಖಿಗೆ ಪಾದಯಾತ್ರೆಯಲ್ಲೇ ಕ್ರಮಿಸುವ ದೇಶ ಪರ್ಯಟನೆ ಯಾತ್ರೆ ಕೈಗೊಂಡಿದ್ದಾನೆ. ಇದಕ್ಕೂ ಮೊದಲು ಸುಮಂತ್ ರಾಯಚೂರಿನ ಮಂತ್ರಾಲಯದಿಂದ ಹೊರಟು ಆಂಧ್ರ ಮಾರ್ಗವಾಗಿ ದಕ್ಷಿಣ ಭಾರತದ ಕನ್ಯಾಕುಮಾರಿಗೆ ತಲುಪಿದ್ದ. ಈ ಮಧ್ಯೆ ಆಂಧ್ರ ಪ್ರದೇಶದಲ್ಲಿ ಸುಮಂತ್ ಅವರಿಗೆ ಬಿಳಿ ಬಣ್ಣದ ಗಂಡು ಬೀದಿ ನಾಯಿಯೊಂದು ಸಿಕ್ಕಿದ್ದು, ಸುಮಾರು ಐದು ಕಿ.ಮೀ. ನಷ್ಟು ದೂರ ಸುಮಂತ್ ಅವರನ್ನೇ ಹಿಂಬಾಲಿಸಿಕೊಂಡು ಹೆಜ್ಜೆ ಹಾಕಿದೆಯಂತೆ. ಆ ಬೀದಿ ನಾಯಿಗೆ ಸುಮಂತ್ ಅವರು ಭೈರವ ಎಂದು ನಾಮಕರಣ ಮಾಡಿ ಅದಕ್ಕಾಗಿಯೇ ಒಂದು ಗಾಳಿ ಕುರ್ಚಿ ಖರೀದಿಸಿ ತನ್ನ ಜೊತೆಗೇ ದೇಶ ಸುತ್ತಿಸಲು ಹೊರಟಿದ್ದಾರೆ.
ಸುಮಂತ್ ಅವರು ಕನ್ಯಾಕುಮಾರಿಯಿಂದ ಲಡಾಖಿಗೆ ಪಾದಯಾತ್ರೆ ಕೈಗೊಂಡಿದ್ದು ಈಗಾಗಲೇ 2000 ಕಿ.ಮೀ ಕ್ರಮಿಸಿ ಶುಕ್ರವಾರ ಕರ್ನಾಟಕ- ಕೇರಳ ಗಡಿ ಪ್ರದೇಶ ತಲಪಾಡಿ ಪ್ರವೇಶಿಸಿದ್ದಾರೆ. ಇನ್ಸ್ ಟಾಗ್ರಾಂ ಪೇಜಲ್ಲಿ ಸುಮಂತ್ ಅವರು ಸಾಕಷ್ಟು ಫಾಲೋವರ್ಸ್ ಗಳನ್ನ ಹೊಂದಿದ್ದಾರೆ. ಕಳೆದ ಒಂದು ವರುಷದಿಂದ ಹೆದ್ದಾರಿಯಲ್ಲೇ ದಿನ ನಿತ್ಯ ಪಾದಯಾತ್ರೆ ಮಾಡುವ ಸುಮಂತ್ ಅವರು ದಾರಿ ಮಧ್ಯೆ ಸಿಗುವ ಪೆಟ್ರೋಲ್ ಬಂಕ್, ದೇವಾಲಯ, ರೈಲ್ವೇ ನಿಲ್ದಾಣ ಕೆಲವೊಮ್ಮೆ ರಸ್ತೆ, ಕಾಲೇಜು ಗ್ರೌಂಡುಗಳಲ್ಲೇ ವಿಶ್ರಾಂತಿ ಪಡೆದಿದ್ದಾರೆ. ಈಗ ಇನ್ಸ್ ಟಾ ಗ್ರಾಮ್ ಫಾಲೋವರ್ಸ್ ಗಳೇ ಸುಮಂತ್ ಅವರು ತೆರಳಿದಲ್ಲೆಲ್ಲಾ ಉಳಿದು ಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದಾರಂತೆ.
ತಿರುಪತಿಯಲ್ಲಿ ನಾಯಿಗಾಗಿ ಖರೀದಿಸಿದ್ದ ವೀಲ್ ಚೆಯರ್ ನ ಚಕ್ರವು ಕೆಟ್ಟು ಹೋಗಿತ್ತು. 45 ದಿನಗಳ ಹಿಂದಷ್ಟೆ ತಿರುವನಂತಪುರದಲ್ಲಿ ಇವರ ಫಾಲೋವರ್ ಓರ್ವರು ಖರೀದಿಸಿ ಕೊಟ್ಟ ವೀಲ್ ಚೆಯರ್ ನಿಂದ 600 ಕಿ.ಮೀ ಸುಮಂತ್ ಕ್ರಮಿಸಿದ್ದಾರೆ. ಪ್ರಾಣಿಗಳ ಬಗೆಗಿನ ಕಾಳಜಿ ಮತ್ತು ಜಾಗೃತಿಯನ್ನ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡುವಂತೆ ಹಿತೈಷಿಯೋರ್ವರು ಸುಮಂತ್ ಗೆ ಸಲಹೆ ನೀಡಿದ್ದರು. ಈಗ ಇನ್ ಸ್ಟ್ರಾಗ್ರಾಂ ಮೂಲಕ ತುಂಬಾ ಜನರಿಗೆ ಪ್ರಾಣಿಗಳ ಜಾಗೃತಿಯ ಬಗ್ಗೆ ಮಾಡುವ ವೀಡಿಯೋಗಳು ತಲುಪುತ್ತಿದ್ದು, ಫಾಲೋವರ್ಸ್ ಗಳು ಸುಮಂತ್ಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ.
ಮೂಕ ಪ್ರಾಣಿಗಳ ರಕ್ಷಣೆಯೇ ಯಾತ್ರೆಯ ಉದ್ದೇಶ
ಬೆಂಗಳೂರಿನಲ್ಲಿ ತಾಯಿ ಮತ್ತು ತಮ್ಮನೊಂದಿಗೆ ನಾನು ನೆಲೆಸಿದ್ದೇನೆ. ಇಂಜಿನಿಯರಿಂಗ್ ವ್ಯಾಸಂಗವನ್ನ ನಾನು ಮೂರನೇ ವರ್ಷಕ್ಕೆ ಮೊಟಕುಗೊಳಿಸಿದ್ದೇನೆ. ಪ್ರಾಣಿಗಳ ಜೊತೆ ಸಣ್ಣ ಪ್ರಾಯದಿಂದಲೇ ಅವಿನಾಭಾವ ಸಂಬಂಧ ಇತ್ತು. ಬೀದಿ ಶ್ವಾನಗಳಿಗೆ ಜನರು ಹೊಡೆಯುವಾಗ ಮತ್ತು ಅವುಗಳಿಗೆ ಮನುಷ್ಯರು ಎಂಜಲು ಅನ್ನ ಹಾಕುವಾಗ ಅತೀವ ಬೇಸರವಾಗುತ್ತಿತ್ತು. ನಾಯಿಗಳು ಕೂಡಾ ನಮ್ ತರಾನೇ ಜೀವಿಗಳು. ಅವುಗಳಿಗೂ ನಾವು ಉತ್ತಮ ಗುಣಮಟ್ಟದ ಆಹಾರವನ್ನೇ ಕೊಡಬೇಕು. ನಮ್ಮ ಎಂಜಲು ಆಹಾರಗಳನ್ನ ನಾಯಿಗಳಿಗೆ ಹಾಕಿದರೆ ನಮ್ಮಲ್ಲಿರುವ ಸೋಂಕು ಅವುಗಳಿಗೆ ಹರಡುತ್ತದೆ. ಪ್ರಾಣಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ನಾನು ಕೈಗೊಂಡಿರುವ ದೇಶ ಪರ್ಯಟನೆ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ 112 ಶಾಲಾ ಕಾಲೇಜುಗಳಲ್ಲಿ ಪ್ರಾಣಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ್ದೇನೆ. ಬೇರೆ ರಾಜ್ಯಗಳ ಜನರಿಗೆ ಹಿಂದಿ, ಇಂಗ್ಲೀಷಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ನನ್ನ ಈ ಯಾತ್ರೆಗೆ ತಾಯಿ ಮೊದಲಿಗೆ ಬೆಂಬಲ ನೀಡಿಲ್ಲ. ಇಂಜಿನಿಯರಿಂಗ್ ಮಾಡಿದರೆ ಬರೀ ಸರ್ಟಿಫಿಕೇಟ್ ಸಿಗುತ್ತೆ. ಜೀವನದಲ್ಲಿ ದುಡ್ಡು ಮಾಡುವ ಆಸೆ ನನಗಿಲ್ಲ. ಮೂಕ ಪ್ರಾಣಿಗಳಿಗಾಗಿ ಏನಾದರೂ ಮಾಡಬೇಕೆಂಬ ಮಹದಾಶೆ ಇದೆಯೆಂದು ಸುಮಂತ್ ಹೇಳುತ್ತಾರೆ.
ಒಂದು ಲಕ್ಷ ಪ್ರಾಣಿಗಳಿಗೆ ರೇಡಿಯಂ ಪಟ್ಟಿ ಗುರಿ
ಹೆದ್ದಾರಿಗಳಲ್ಲಿ ವಿಹರಿಸುವ ಪ್ರಾಣಿಗಳ ಕೊರಳಿಗೆ ಕಂಪನಿಗಳ ಪ್ರಾಯೋಜಕತ್ವದಲ್ಲಿ ಒಂದು ಲಕ್ಷ ರೇಡಿಯಮ್ ರಿಫ್ಲೆಕ್ಟರ್ ಬೆಲ್ಟ್ ಗಳನ್ನ ಹಾಕಿಸುವ ಗುರಿ ಹೊಂದಿದ್ದೇನೆ. ರಿಪ್ಲೆಕ್ಷನ್ ಬೆಲ್ಟ್ ಗಳಿಂದ ಪ್ರಾಣಿಗಳು ಅಪಘಾತಗಳಲ್ಲಿ ಸಾಯುವುದು ತಪ್ಪಿಸಿದಂತಾಗುತ್ತದೆ. ರತನ್ ಟಾಟಾ ಅವರೇ ಪ್ರಾಣಿಗಳಿಗೆ ಲಕ್ಷಾಂತರ ರಿಪ್ಲೆಕ್ಟಿವ್ ಕಾಲರ್ ಪಟ್ಟಿಗಳನ್ನ ಹಾಕಿಸಿದ್ದಾರೆ. ಅವರೇ ನನಗೆ ಸ್ಫೂರ್ತಿ ಎಂದು ಸುಮಂತ್ ಹೇಳುತ್ತಾರೆ.
ಕರ್ನಾಟಕಕ್ಕೆ ಪ್ರವೇಶ ಮಾಡಿದ ಸುಮಂತ್ ಅವರನ್ನ ರಾ.ಹೆ 66 ರ ತೊಕ್ಕೊಟ್ಟು, ಕಾಪಿಕಾಡುವಿನಲ್ಲಿ ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟ್ ಸದಸ್ಯರು ಸ್ವಾಗತಿಸಿ, ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ.
In a heartwarming and inspiring initiative, a young man from Bengaluru has set out on a nationwide padayatra (foot journey) to promote awareness about animal welfare. What makes his journey even more special is the companion he’s chosen — a street dog, rescued and now riding along in a specially designed wheelchair.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm