ಬ್ರೇಕಿಂಗ್ ನ್ಯೂಸ್
20-12-20 11:11 am Mangaluru Correspondent ಕರಾವಳಿ
ಮಂಗಳೂರು, ಡಿ.20: ಪೊಲೀಸರೇನು ಕತ್ತೆ ಕಾಯ್ತಿದ್ದಾರೆಯೇ..? ಹೀಗಂತ, ಅಲ್ಲಿನ ಮಹಿಳೆಯರು ಪ್ರಶ್ನೆ ಮಾಡುತ್ತಾರೆ. ಯಾಕಂದ್ರೆ, ಹಾಡಹಗಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಿಂದ ಬೈಕಿನಲ್ಲಿ ಬಂದ ಆಗಂತುಕರು ಸರ ಕಿತ್ತು ಓಡುತ್ತಾರೆ. ಬೆಳಗ್ಗೆ ಒಂದು ರಸ್ತೆಯಲ್ಲಿ ಸರಗಳ್ಳತನ ನಡೆದರೆ, ಒಂದೇ ಗಂಟೆಯ ಅಂತರದಲ್ಲಿ ಅಲ್ಲಿಯೇ ಮತ್ತೊಂದು ರಸ್ತೆಯಲ್ಲಿ ಸರ ಕೀಳುವ ಕೃತ್ಯ ನಡೆಯುತ್ತದೆ.
ಹೌದು.. ಕಳೆದ ಎಂಟು ದಿನಗಳಲ್ಲಿ ಮಂಗಳೂರು ನಗರ ಒಂದರಲ್ಲೇ ಎಂಟು ಸರಕಳ್ಳತನ ಪ್ರಕರಣಗಳು ನಡೆದಿವೆ. ಕದ್ರಿ ಠಾಣೆಯ ವ್ಯಾಪ್ತಿಯಲ್ಲೇ ಮೂರು ಪ್ರಕರಣ ನಡೆದಿದ್ದರೆ, ಕಂಕನಾಡಿ ಒಂದು, ಕಾವೂರು ಮತ್ತು ಸುರತ್ಕಲ್ ಠಾಣೆಗಳ ವ್ಯಾಪ್ತಿಯಲ್ಲಿ ಎರಡೆರಡು ಪ್ರಕರಣ ದಾಖಲಾಗಿದೆ. ದಿನಕ್ಕೊಂದರಂತೆ ಮಹಿಳೆಯರ ಸರ ಎಗರಿಸುವ ಕೇಸು ಎದುರಾಗುತ್ತಿದ್ದರೂ, ಮಂಗಳೂರಿನ ಪೊಲೀಸರು ನಿದ್ದೆಯಿಂದ ಎದ್ದಿಲ್ಲ ಎನಿಸುತ್ತೆ. ಕರ್ತವ್ಯದಲ್ಲಿಯೂ ನಿದ್ದೆ ಮಾಡಿಕೊಂಡೇ ಇರುತ್ತಾರೆಯೇ ಎನ್ನುವ ಪ್ರಶ್ನೆ ಉಂಟಾಗಿದೆ.

ಈ ಪ್ರಶ್ನೆ ಯಾಕೆ ಕೇಳಿಬಂತು ಅಂದ್ರೆ, ಕಳೆದ ಒಂದು ವಾರದಲ್ಲಿ ಎರಡು ಬಾರಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ ನಡೆದಿದೆ. ವಾರದ ಹಿಂದೆ ಕಾರ್ ಸ್ಟ್ರೀಟ್ ಬಳಿಯ ನ್ಯೂಚಿತ್ರಾ ಟಾಕೀಸ್ ಮುಂದೆ ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ಇಬ್ಬರು ಹದಿಹರೆಯದ ಹುಡುಗರು ಕತ್ತಿ ಬೀಸಿದ್ದಾರೆ. ಇನ್ನೂ ಮೀಸೆ ಮೂಡದ ಹುಡುಗನೊಬ್ಬ ಪೊಲೀಸ್ ಪೇದೆಯ ಮೇಲೆ ಕತ್ತಿ ಬೀಸಿ ಓಡಿದ್ದಾನೆ. ಈ ಘಟನೆ ನಡೆದು, ವಾರ ಕಳೆದಿಲ್ಲ. ಶುಕ್ರವಾರ ರಾತ್ರಿ ಕಾವೂರಿನಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೇ ಕಾಲೇಜು ಹುಡುಗರು ಹಲ್ಲೆ ಮಾಡಿದ್ದಾರೆ.

ಪೊಲೀಸರ ಮೇಲೇ ಹುಡುಗರಿಂದ ಹಲ್ಲೆ !
ತಣ್ಣೀರುಬಾವಿಯಲ್ಲಿ ಬರ್ತ್ ಡೇ ಪಾರ್ಟಿ ಮುಗಿಸಿ, ಎಣ್ಣೆ ಮತ್ತಿನಲ್ಲಿ ಬರುತ್ತಿದ್ದ ಹುಡುಗರಿಂದ ದಂಡದ ನೆಪದಲ್ಲಿ ಹಣ ಪೀಕಿಸುವ ಕೆಲಸ ನಡೆದಿದೆಯೋ ಗೊತ್ತಿಲ್ಲ. ಕಾವೂರಿನಲ್ಲಿ ತಪಾಸಣೆ ನಿರತ ಪೊಲೀಸರ ಮೇಲೆ ಹುಡುಗರು ಕೈಮಾಡಿದ್ದಾರೆ. ರೈಫಲ್ ಹಿಡಿದು ನಿಂತಿದ್ದ ಪೇದೆಯ ಕೈಯಿಂದ ರೈಫಲ್ ಹಿಡಿದೆಳೆದು ನೆಲಕ್ಕೆ ಬಿಸಾಕಿದ್ದಾರಂತೆ. ನಡುಬೀದಿಯಲ್ಲಿ ಪುಂಡ ಹುಡುಗರು ಪೊಲೀಸರ ಮೇಲೆ ಕೈಮಾಡುತ್ತಾರೆ, ಕತ್ತಿ ಬೀಸುತ್ತಾರೆ, ರೈಫಲ್ ಹಿಡಿದೆಳೀತಾರೆ ಅಂದ್ರೆ, ಪೊಲೀಸರೇನು ಅಷ್ಟು ಪುಟಗೋಸಿಗಳೇ ? ದೈಹಿಕ ದಾರ್ಢ್ಯ ಇದ್ದವರನ್ನೇ ಆಯ್ದುಕೊಂಡು ಪೊಲೀಸ್ ಸೇವೆಗೆ ಬಳಸಿಕೊಳ್ಳಲಾಗುತ್ತೆ. ಹದ್ದುಮೀರಿ ವರ್ತಿಸುವ ಮಂದಿಯನ್ನು ಒದ್ದು ಒಳಗೆ ತಳ್ಳುವುದಕ್ಕಾಗೇ ಅವರಿಗೆ ದಂಡದ ಬಲ ನೀಡಲಾಗುತ್ತೆ. ಆತ್ಮರಕ್ಷಣೆ ಮತ್ತು ಅಗತ್ಯ ಬಿದ್ದರೆ ಹೊಡೆದು ಬಿಡು ಅಂತಲೇ ಕೈಗೆ ರೈಫಲ್ ಕೊಟ್ಟಿರುತ್ತಾರೆ. ಆದರೆ, ನಮ್ಮ ಮಂಗಳೂರು ಪೊಲೀಸರು ಯಾಕೆ ಪುಂಡರ ಎದುರು ಕಾಲು ಬಗ್ಗಿಸುತ್ತಿದ್ದಾರೆ ಎನ್ನೋ ಸಂಶಯ ಸಹಜವಾಗೇ ಏಳುತ್ತಿದೆ.

ಕೈಕೊಟ್ಟ ಸಿಸಿಟಿವಿ ಪೊಲೀಸರ ಕೈಕಟ್ಟಿತ್ತು !
ಸರಗಳ್ಳತನ ಬಗ್ಗೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಕೇಳಿದರೆ, ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಿದ್ದಾರಂತೆ. ಮಂಗಳೂರು ಸಿಸಿಬಿ, ಕದ್ರಿ ಮತ್ತು ಸುರತ್ಕಲ್ ಠಾಣೆಯ ಪೊಲೀಸರನ್ನು ಸೇರಿಸಿ ಮೂರು ತಂಡಗಳನ್ನು ರಚಿಸಿ, ಫೀಲ್ಡಿಗೆ ಬಿಟ್ಟಿದ್ದಾರಂತೆ. ಆದರೆ, ಹೀಗೆ ಫೀಲ್ಡಿಗೆ ಬಿಟ್ಟ ಮಾತ್ರಕ್ಕೆ ಆರೋಪಿಗಳು ಬಂದು ಬಲೆಗೆ ಬೀಳುತ್ತಾರೆಯೇ ? ಈಗಿನ ಕಳ್ಳರು ಕೂಡ ಖತರ್ನಾಕ್ ಆಗಿರುತ್ತಾರೆ. ಪೊಲೀಸರು ಚಾಪೆಯಡಿ ತೂರಿದ್ರೆ, ಅವ್ರು ರಂಗೋಲಿಯಡಿ ತೂರುವ ಮಂದಿ. ಸರ ಕಿತ್ತು ಓಡಿದ್ದನ್ನು ಹುಡುಕ ಹೋದರೆ, ಪೊಲೀಸರಿಗೆ ಇಲಾಖೆಯ ಸಿಸಿಟಿವಿ ಕೈಕೊಟ್ಟಿದ್ದೇ ಕೈಯನ್ನು ಕಟ್ಟಿಹಾಕಿಸುತ್ತೆ. ಇನ್ಯಾರದ್ದೋ ಸಿಸಿಟಿವಿ ಕೇಳಿ, ಆರೋಪಿಯ ಹಿಂದೆ ಬೀಳುವಾಗ ಆತ ಮತ್ತೊಂದು ಕಡೆ ಎಗರಿಸಿರುತ್ತಾನೆ.

ಒಂದೇ ದಿನ ನಡೆದಿತ್ತು ನಾಲ್ಕು ಕೇಸು !
ವಾರದ ಹಿಂದೆ ಉಡುಪಿ ಮತ್ತು ಮಣಿಪಾಲದಲ್ಲಿ ಒಂದೇ ದಿನದ ಅಂತರದಲ್ಲಿ ನಾಲ್ಕು ಪ್ರಕರಣಗಳು ನಡೆದಿದ್ದವು. ಮಣಿಪಾಲದಲ್ಲಿ ಬೆಳಗ್ಗೆ ಏಳು ಗಂಟೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಬ್ಬ ಮಹಿಳೆಯ ಸರ ಕಿತ್ತು ಓಡಿದರೆ, ಎಂಟು ಗಂಟೆಗೆ ಅಲ್ಲೇ ಪಕ್ಕದ ರಸ್ತೆಯಲ್ಲಿ ಅದೇ ಆಗಂತುಕ ಮತ್ತೊಬ್ಬ ಮಹಿಳೆಯ ಸರ ಕಿತ್ತು ಓಡಿದ್ದಾನೆ. ಎರಡು ಕಡೆಯೂ ಒಂದೇ ರೀತಿಯ ಬೈಕಿನಲ್ಲಿ ಬಂದಿದ್ದ ಒಬ್ಬಂಟಿಯದ್ದೇ ಕೃತ್ಯ. ಮರುದಿನ ಉಡುಪಿಯ ಕುಂಜಿಬೆಟ್ಟಿನಲ್ಲಿ ಅಂಥದ್ದೇ ಎರಡು ಪ್ರಕರಣ ನಡೆದಿದ್ದವು. ಬೈಕಿನಲ್ಲಿ ಬಂದು ಮಹಿಳೆಯಲ್ಲಿ ದಾರಿ ಕೇಳುವ ನೆಪದಲ್ಲಿ ಮಾತನಾಡಿ ಸರ ಕಿತ್ತು ಪರಾರಿಯಾಗಿದ್ದ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಸ್ಥಳೀಯರೇ ಆಗಿದ್ದಾರೆ. ತುಳು ಭಾಷೆಯಲ್ಲಿ ಮಾತನಾಡುತ್ತಾ ದಾರಿ ಕೇಳುವ, ನೀರು ಕೇಳುವ ನೆಪದಲ್ಲಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದಾರೆ. ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರದ್ದೇ ಸರಕಳವು ಹೆಚ್ಚು. ಕೆಲವೊಮ್ಮೆ ಬೈಕಿನಲ್ಲಿ ಒಬ್ಬನೇ ಬಂದು ಕೃತ್ಯ ಎಸಗುತ್ತಾರೆ. ಕೆಲವು ಬಾರಿ ಇಬ್ಬರು ಇರುತ್ತಾರೆ ಅಷ್ಟೇ. ಆದರೆ, ಸರ ಕಿತ್ತು ಓಡುವುದನ್ನೇ ಕಾಯಕ ಮಾಡಿಕೊಂಡಿರುವ ಹರಾಮಿಯ ಕಳ್ಳಹೆಜ್ಜೆ ಪತ್ತೆ ಮಾತ್ರ ಸಾಧ್ಯವಾಗಿಲ್ಲ. ಇನ್ನೊಂದಷ್ಟು ದಿನ ಸೈಲಂಟ್ ಆಗೋ ಕಳ್ಳ ಮಂಗಳೂರು, ಉಡುಪಿ ಬಿಟ್ಟು ಬೇರೆ ಕಡೆ ತನ್ನ ಕಳ್ಳಹೆಜ್ಜೆ ಇಡಬಹುದೇನೋ..
Continuous chain snatching has been reported in Mangalore. More than 10 cases have been reported in 10 days. Public allege that cops are least bothered.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am