ಬ್ರೇಕಿಂಗ್ ನ್ಯೂಸ್
23-04-25 09:36 pm Mangalore Correspondent ಕರಾವಳಿ
ಮಂಗಳೂರು, ಎ.23 : ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯು ನನ್ನ ಮನಸ್ಸಿಗೆ ತೀವ್ರ ನೋವು ನೀಡುವ ಜತೆಗೆ ಬಹಳ ಆಕ್ರೋಶವನ್ನುಂಟು ಮಾಡಿದೆ. ಇದು ಕೇವಲ ಒಂದು ಪ್ರದೇಶ ಅಥವಾ ಗುಂಪಿನ ಮೇಲೆ ನಡೆದ ದಾಳಿಯಲ್ಲ ; ಬದಲಿಗೆ ಇದು ಪ್ರತಿ ಭಾರತೀಯರ ಹೃದಯದ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಉಗ್ರರು ಮುಗ್ಧ ಜನರ ಮೇಲೆ ನಡೆಸಿರುವ ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ಕ್ಯಾ. ಚೌಟ, ಈ ದಾಳಿಯಲ್ಲಿ ಶಿವಮೊಗ್ಗ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ಹಲವೆಡೆಯಿಂದ ಕಾಶ್ಮೀರಕ್ಕೆ ಬಂದಿದ್ದ ಕುಟುಂಬಗಳು ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡಿದ್ದಾರೆ. ಕಾಶ್ಮೀರವು ಶಾರದಾ ದೇಶ, ಅದು ಅನಾದಿ ಕಾಲದಿಂದ ದೇವಾಲಯಗಳನ್ನು ಮಡಿಲಲ್ಲಿ ಹೊತ್ತುಕೊಂಡ ಪವಿತ್ರ ಜ್ಞಾನದ ಭೂಮಿ. ಅಷ್ಟೇ ಅಲ್ಲ, ಅದು ನಮ್ಮ ಭಾರತದ ಮುಕುಟ ಮಣಿ. ಆದರೆ ಈ ಸತ್ಯವು ಶತ್ರುಗಳನ್ನು ಕಂಗೆಡಿಸುತ್ತಿದೆ. ಹೀಗಾಗಿ, ಈ ಹೇಡಿ ಭಯೋತ್ಪಾದಕರು ನಿರಾಯುಧ ನಾಗರಿಕರನ್ನು ಕೊಂದು ಭಯ ಹುಟ್ಟಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಉಗ್ರರು ಹಾಗೂ ಅವರ ಹಿಂದಿನ ದುಷ್ಟರಿಗೆ ಜನರಲ್ಲಿ ಭಯ ಹುಟ್ಟಿಸುವುದೇ ಗುರಿ. ಕಾಶ್ಮೀರದ ಬೀದಿಗಳು ಬಿಕೋ ಎನ್ನಬೇಕು, ಅಲ್ಲಿ ವ್ಯಾಪಾರ ವಹಿವಾಟು- ಆರ್ಥಿಕತೆ ಹಾಳಾಗಬೇಕು, ಜನರು ನಿರಾಶರಾಗಬೇಕು ಎಂಬುದೇ ಅವರ ಮುಖ್ಯ ಉದ್ದೇಶ. ಆದರೆ ಭಾರತ ಬದಲಾಗಿದ್ದು ಜಗತ್ತು ಕೂಡ ಬದಲಾಗಿದೆ. ಇಂದು, ವಾಷಿಂಗ್ಟನ್ನಿಂದ ಪಶ್ಚಿಮ ಏಷ್ಯಾದ ವರೆಗೆ, ಜಾಗತಿಕ ಸಮುದಾಯವು ಭಾರತದೊಂದಿಗೆ ಹೆಗಲು ಕೊಟ್ಟು ನಿಂತಿದೆ. ಪ್ರಪಂಚದಾದ್ಯಂತ ಬಲಿಷ್ಠ ರಾಷ್ಟ್ರಗಳು ಈ ಭಯೋತ್ಪಾದಕ ಕೃತ್ಯವನ್ನು ಸ್ಪಷ್ಟವಾಗಿ ಖಂಡಿಸಿ ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ. ಆಧುನಿಕ ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ. ಭಾರತದಲ್ಲೂ ಇದಕ್ಕೆ ಕಿಂಚಿತ್ತೂ ಅವಕಾಶವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೋಸ್ಟ್ ವಾಂಟೆಡ್ ಉಗ್ರ ತಹವ್ವೂರ್ ರಾಣಾ ಭಾರತದಲ್ಲಿ ಕಾನೂನಿನಡಿ ಕ್ರಮ ಎದುರಿಸಬೇಕಾಗಿರುವುದು, ದಶಕಗಳ ಕಾಲದ ಅನಿಯಂತ್ರಿತ ದುರ್ಬಳಕೆಯನ್ನು ಕೊನೆಗೊಳಿಸುವ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿರುವುದು, ಕಾಶ್ಮೀರದಲ್ಲಿ ಜನರನ್ನು ಭಯದ ವಾತಾವರಣದಲ್ಲಿಡುವ 370ನೇ ವಿಧಿ ರದ್ದುಗೊಳಿಸಿರುವುದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಹೆಮ್ಮೆಯ ನವ ಭಾರತದ ಉದಯವನ್ನು ಸಹಿಸಲಾಗದೆ ರಣಹೇಡಿ ಉಗ್ರರು ಅಮಾಯಕರನ್ನು ಗುರಿಯಾಗಿಸಿದ್ದಾರೆ ಎಂದು ಕ್ಯಾ. ಚೌಟ ಕಿಡಿಕಾರಿದ್ದಾರೆ.
ಈ ಹಿಂದೆ ದೇಶ ಸೇವೆಗೈದ ಓರ್ವ ಯೋಧನಾಗಿ ಹಾಗೂ ಇಂದು ನಿಮ್ಮ ಜನಪ್ರತಿನಿಧಿಯಾಗಿ ನಾನು ಹೇಳುವುದೇನೆಂದರೆ, ಪ್ರತಿಯೊಬ್ಬ ಭಾರತೀಯನೂ ಮಾನಸಿಕವಾಗಿ ಸೈನಿಕನಾಗಬೇಕಾದ ಸಮಯವಿದು. ನಮ್ಮ ದೇಶದ ಪ್ರತಿಯೊಂದು ಮನೆಯಿಂದಲೂ ಒಗ್ಗಟ್ಟಿನ ಶಕ್ತಿ ಹೊರಹೊಮ್ಮಲಿ. ಏಕೆಂದರೆ ಈ ಹೋರಾಟ ಕೇವಲ ಕಾಶ್ಮೀರಕ್ಕೆ ಸೀಮಿತವಾಗಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದವರ ವಿಕೃತ ಮನಸ್ಥಿತಿಗಳು, ವಕ್ಫ್ ಸುಧಾರಣೆಯನ್ನು ವಿರೋಧಿಸಿದ ಅದೇ ಗುಂಪು ಈ ಕೃತ್ಯಗಳ ಹಿಂದೆಯೂ ಇದೆ. ನಮ್ಮ ಬಲಿಷ್ಠ, ಸ್ವತಂತ್ರ ಮತ್ತು ಸಂಸ್ಕೃತಿಯನ್ನು ಗೌರವಿಸುವ ಭಾರತವನ್ನು ಕಂಡು ಭಯಪಡುವ ಶಕ್ತಿಗಳೇ ಇವೆಲ್ಲವನ್ನೂ ಮಾಡುತ್ತಿವೆ ಎಂದು ನೇರ ಆರೋಪ ಮಾಡಿದ್ದಾರೆ.
ಪಹಲ್ಗಾಮ್ನಲ್ಲಿ ಹತ್ಯೆಯಾದ ಶಿವಮೊಗ್ಗದ ಮಂಜುನಾಥ್ ಇರಬಹುದು, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಜೀವನವನ್ನು ಆರಂಭಿಸುತ್ತಿದ್ದ ನವ ದಂಪತಿಗಳಿರಬಹುದು ಮತ್ತು ರಜೆಯ ಖುಷಿ ಅನುಭವಿಸಬೇಕಾದ ಮುದ್ದು ಮಗು ಇರಬಹುದು; ಅವರೆಲ್ಲರೂ ನಮ್ಮಂತೆಯೇ ಇದ್ದರು. ಅವರಿಗೂ ಕನಸುಗಳಿದ್ದವು, ಭವಿಷ್ಯವಿತ್ತು. ಈ ದಾಳಿ ಕೇವಲ ಒಂದು ಪ್ರದೇಶಕ್ಕೆ ಆದ ಗಾಯವಲ್ಲ, ಇದು ಇಡೀ ದೇಶಕ್ಕೆ ಆದ ನೋವು. ಈ ದುರಂತ ನಮ್ಮೆಲ್ಲರ ಹೃದಯವನ್ನು ತಟ್ಟಿದೆ. ಭಾರತವು ಈ ನೋವಿಗೆ ಒಗ್ಗಟ್ಟಿನಿಂದ, ತನ್ನೆಲ್ಲಾ ಶಕ್ತಿಯಿಂದ ಮತ್ತು ದೃಢವಾದ ನಿರ್ಧಾರದಿಂದ ಉತ್ತರಿಸುತ್ತದೆ. ನಾವು ಈ ದಾಳಿಯನ್ನು ಎಂದಿಗೂ ಮರೆಯುವುದಿಲ್ಲ ಮತ್ತು ನಮ್ಮೆಲ್ಲರ ಏಕತೆಯೇ ಇದಕ್ಕೆ ಪ್ರಬಲವಾದ ಉತ್ತರವಾಗಲಿದೆ ಎಂದು ಕ್ಯಾ. ಚೌಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Kashmir, India's Crown Jewel Under Siege, Mangalore MP Brijesh Chowta Commits to Justice Against Terrorism during the protest held in city.
20-08-25 10:54 pm
Bangalore Correspondent
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
20-08-25 10:56 pm
HK News Desk
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
20-08-25 10:19 pm
Mangalore Correspondent
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm