Mangalore Subrahmanya train, Timings: ಎ.12ರಿಂದ ಮಂಗಳೂರು - ಸುಬ್ರಹ್ಮಣ್ಯ ರೈಲು ವಿಸ್ತರಣೆ ; ದಿನಕ್ಕೆ ನಾಲ್ಕು ಬಾರಿ ಸಂಚಾರ, ಸಮಯದ ವೇಳಾಪಟ್ಟಿ ಹೀಗಿದೆ 

11-04-25 02:49 pm       Mangalore Correspondent   ಕರಾವಳಿ

ಮಂಗಳೂರು - ಪುತ್ತೂರು ಎಕ್ಸ್ ಪ್ರೆಸ್ ರೈಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ವಿಸ್ತರಣೆಯಾಗಿದ್ದು ಎ.12ರಿಂದ ದಿನದಲ್ಲಿ ನಾಲ್ಕು ಬಾರಿ ಸಂಚರಿಸಲಿದೆ. ವಿಸ್ತರಣೆಗೊಂಡ ರೈಲನ್ನು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ ಅವರು ಏಪ್ರಿಲ್ 12ರಂದು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದಾರೆ. 

ಮಂಗಳೂರು, ಎ.11 : ಮಂಗಳೂರು - ಪುತ್ತೂರು ಎಕ್ಸ್ ಪ್ರೆಸ್ ರೈಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ವಿಸ್ತರಣೆಯಾಗಿದ್ದು ಎ.12ರಿಂದ ದಿನದಲ್ಲಿ ನಾಲ್ಕು ಬಾರಿ ಸಂಚರಿಸಲಿದೆ. ವಿಸ್ತರಣೆಗೊಂಡ ರೈಲನ್ನು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ ಅವರು ಏಪ್ರಿಲ್ 12ರಂದು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದಾರೆ. 

ಸಂಸದ ಬ್ರಿಜೇಶ್ ಅವರು ಈ ಯೋಜನೆಯನ್ನು ಕೇಂದ್ರ ರೈಲ್ವೇ ಸಚಿವಾಲಯದೊಂದಿಗೆ ನಿರಂತರ ಪ್ರಯತ್ನದ ಮೂಲಕ ಈಡೇರಿಸಲು ಪ್ರಯತ್ನಿಸಿದ್ದಾಗಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ. 

ರೈಲು ವೇಳಾಪಟ್ಟಿ ಹೀಗಿದೆ 

ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್‌ ರೈಲು (56625) ಮುಂಜಾನೆ 4ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕಬಕ-ಪುತ್ತೂರಿಗೆ 5.18ಕ್ಕೆ ತಲುಪಲಿದೆ. ಇಲ್ಲಿ 2 ನಿಮಿಷ ನಿಲುಗಡೆಯಾಗಿ 6.30ಕ್ಕೆ ಸುಬ್ರಹ್ಮಣ್ಯ ತಲುಪಲಿದೆ.

ಸುಬ್ರಹ್ಮಣ್ಯ- ಮಂಗಳೂರು (56626) ಪ್ಯಾಸೆಂಜರ್‌ ರೈಲು ಬೆಳಗ್ಗೆ 7ಕ್ಕೆ ಸುಬ್ರಹ್ಮಣ್ಯದಿಂದ ಹೊರಟು 7.48ಕ್ಕೆ ಕಬಕ-ಪುತ್ತೂರು ತಲುಪಲಿದೆ. 2 ನಿಮಿಷ ನಿಲುಗಡೆಯಾಗಿ 9.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ.

ಅದೇ ದಿನ ಸಂಜೆ 5.45ಕ್ಕೆ  ಮಂಗಳೂರು ಸೆಂಟ್ರಲ್‌- ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್‌ ರೈಲು (56627) ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸಂಜೆ 7.03ಕ್ಕೆ ಪುತ್ತೂರಿಗೆ ತಲುಪಲಿದೆ. 2 ನಿಮಿಷ ನಿಲುಗಡೆಯಾಗಿ ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ತಲುಪಲಿದೆ. 

ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಪ್ಯಾಸೆಂಜರ್‌ ರೈಲು (56628) ಅದೇ ದಿನ ರಾತ್ರಿ 8.40ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಹೊರಟು ರಾತ್ರಿ 9.28ಕ್ಕೆ ಕಬಕ-ಪುತ್ತೂರಿಗೆ ತಲುಪಿ 2 ನಿಮಿಷ ನಿಲುಗಡೆಯಾಗಿ ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ.

Minister of State (MoS) for Railways V Somanna will flag off extension of  services of Mangaluru Central-Kabaka Puttur passenger train to Subrahmanya Road at Mangaluru Central Railway Station on April 12, Dakshina Kannada MP Capt Brijesh Chowta said.