ಬ್ರೇಕಿಂಗ್ ನ್ಯೂಸ್
13-03-25 09:20 pm Mangalore Correspondent ಕರಾವಳಿ
ಮಂಗಳೂರು, ಮಾ.13 : ನಗರದ ಬಿಜೈ ಕಾಪಿಕಾಡಿನಲ್ಲಿ ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿಯೊಬ್ಬರು ಹಳೆ ದ್ವೇಷದಲ್ಲಿ ನೆರೆಮನೆಯಾತನನ್ನು ಕೊಲ್ಲುವ ಉದ್ದೇಶದಿಂದ ಕಾರನ್ನು ವೇಗವಾಗಿ ಚಲಾಯಿಸಿ ಬೈಕ್ ಮತ್ತು ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿಸಿದ ಘಟನೆ ನಡೆದಿದ್ದು ಕೃತ್ಯದ ವಿಡಿಯೋ ಸೆರೆಯಾಗಿದೆ.
ಬಿಎಸ್ಸೆನ್ನೆಲ್ ಉದ್ಯೋಗಿ ಸತೀಶ್ ಕುಮಾರ್ ಮತ್ತು ಮುರಳಿ ಪ್ರಸಾದ್ ಎಂಬವರು ಅಕ್ಕಪಕ್ಕದ ನಿವಾಸಿಗಳಾಗಿದ್ದು ಯಾವುದೋ ವಿಚಾರಕ್ಕೆ ಜಗಳ ಉಂಟಾಗಿತ್ತು. ಆನಂತರ, ಎಲ್ಲಿ ಸಿಕ್ಕರೂ ಬೈದುಕೊಂಡು ಸಾಗುತ್ತಿದ್ದರು. ಇದೇ ಕೋಪದಲ್ಲಿ ಬೈಕಿನಲ್ಲಿ ಮನೆಯತ್ತ ಬರುತ್ತಿದ್ದ ಮುರಳಿಯನ್ನು ಕೊಲ್ಲುವ ಉದ್ದೇಶದಿಂದ ಸತೀಶ್ ಕುಮಾರ್ ತನ್ನ 800 ಕಾರಿನಲ್ಲಿ ಹಿಂಬದಿಯಿಂದ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು ಡಿಕ್ಕುಪಡಿಸಿದ್ದಾನೆ. ಬಿಜೈ ಆರನೇ ಕ್ರಾಸ್ ನಲ್ಲಿ ಬೈಕ್ ಸವಾರ ಮುಂದಿನಿಂದ ಹೋಗುತ್ತಿದ್ದಾಗ ಅತಿ ವೇಗದಿಂದ ಬಂದ ಕಾರು ಬೈಕಿಗೆ ಡಿಕ್ಕಿಪಡಿಸಿದ್ದಲ್ಲದೆ, ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೂ ಡಿಕ್ಕಿಯಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಬೈಕ್ ಸವಾರ ಮುರುಳಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರೆ, ಮಹಿಳೆ ಕಾಂಪೌಂಡ್ ಗೋಡೆಯ ಮೇಲಕ್ಕೆ ಎಸೆಯಲ್ಪಟ್ಟು ತಲೆ ಕೆಳಗಾಗಿ ಸಿಕ್ಕಿಕೊಂಡಿದ್ದಾರೆ. ಆನಂತರ ಸ್ಥಳೀಯ ನಿವಾಸಿಗಳು ಓಡಿ ಬಂದು ಗೋಡೆಯಲ್ಲಿ ಸಿಕ್ಕಿಕೊಂಡಿದ್ದ ಮಹಿಳೆಯನ್ನು ಕೆಳಕ್ಕಿಳಿಸಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಕಾಲಿಗೆ ಗಂಭೀರ ಗಾಯವಾಗಿದೆ.
ಉರ್ವಾ ಪೊಲೀಸರು ಆರೋಪಿ ಸತೀಶ್ ಕುಮಾರ್ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಿದ್ದು ಬಂಧಿಸಿದ್ದಾರೆ. ಆತನ ಕಾರನ್ನೂ ವಶಕ್ಕೆ ಪಡೆದಿದ್ದಾರೆ. 2023ರಲ್ಲಿ ಮುರುಳಿ ಪ್ರಸಾದ್ ಅವರ ತಂದೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸತೀಶ್ ತಾಗಿಸಿಕೊಂಡು ಸಾಗಿದ್ದು ಉರ್ವಾದಲ್ಲಿ ಕೇಸು ದಾಖಲಾಗಿತ್ತು. ಇದೀಗ ಕೊಲೆ ಮಾಡುವ ಉದ್ದೇಶದಿಂದ ಮುರುಳಿ ಪ್ರಸಾದ್ ಮೇಲೆ ಕಾರನ್ನು ಡಿಕ್ಕಿಯಾಗಿಸಿದ್ದಾರೆ. ಈ ಬಗ್ಗೆ ಉರ್ವಾ ಠಾಣೆಯಲ್ಲಿ ಕೊಲೆಯತ್ನ ಮತ್ತು ಪಶ್ಚಿಮ ಸಂಚಾರಿ ಠಾಣೆಯಲ್ಲಿ ಮಹಿಳೆಗೆ ಡಿಕ್ಕಿ ಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
#Mangalore #accident at #kapikad, Speeding Car Crashes into Cyclist, Woman Thrown Against Wall in Attempted #Murder Case pic.twitter.com/J3iYReOATK
— Headline Karnataka (@hknewsonline) March 13, 2025
Mangalore accident at kapikad, Speeding Car Crashes into Cyclist, Woman Thrown Against Wall in Attempted Murder Case.
14-03-25 03:39 pm
HK News Desk
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 11:02 am
Mangalore Correspondent
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm