ಬ್ರೇಕಿಂಗ್ ನ್ಯೂಸ್
09-08-20 09:53 am Mangalore Reporter ಕರಾವಳಿ
ಪುತ್ತೂರು, ಆಗಸ್ಟ್ 9: ಪುತ್ತೂರಿನ ಬಿರುಮಲೆ ಗುಡ್ಡೆಯಲ್ಲಿ ಅನ್ಯಕೋಮಿನ ಯುವಕರೊಂದಿಗೆ ಮಂಗಳೂರಿನ ಯುವತಿ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಯುವಕರು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಎರಡು ದಿನ ಕೂಡಿಹಾಕಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರಿನ ಕೊಡಿಯಾಲ್ ಬೈಲಿನ 17 ವರ್ಷದ ಯುವತಿಯನ್ನು ಆರೋಪಿ ಯುವಕರು ಸೇರಿ ಅಪಹರಿಸಿದ ಬಗ್ಗೆ ಆಕೆಯ ತಂದೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ಮಹಮ್ಮದ್ ನಯೀಮ್, ಮಹಮ್ಮದ್ ತಾಸೀರ್, ಇಮ್ರಾನ್ ಎಂದು ಮೂವರನ್ನು ಬಂಧಿಸಿದ್ದು ಉಳಿದವರ ಬಂಧನಕ್ಕೆ ಬಲೆಬೀಸಿದ್ದಾರೆ.
ಯುವತಿಯ ತಂದೆಯ ದೂರಿನ ಪ್ರಕಾರ, 17 ವರ್ಷದ ಬಾಲಕಿ ಆಗಸ್ಟ್ 7ರಂದು ಸಂಜೆ 7 ಗಂಟೆಗೆ ತನ್ನ ಮನೆಯಿಂದ ಮಂಗಳೂರಿನ ಎಂಪಾಯರ್ ಮಾಲ್ ಗೆ ಹೋಗಿ ಬರುತ್ತೇನೆಂದು ಹೋದವಳು ರಾತ್ರಿಯಾದರೂ ಮನೆಗೆ ಬಂದಿಲ್ಲ. ಎಲ್ಲೆಡೆ ವಿಚಾರಿಸಿ ಹುಡುಕಿದರೂ ಮಗಳು ಪತ್ತೆಯಾಗಿಲ್ಲ. ಮಗಳ ಹುಡುಕಾಟದಲ್ಲಿ ಇರುವಾಗಲೇ ಆಕೆ ಪುತ್ತೂರಿನ ಬೀರಮಲೆ ಗುಡ್ಡೆಯಲ್ಲಿ ಇರುವುದಾಗಿ ಆಗಸ್ಟ್ 08 ರಂದು ಬೆಳಗ್ಗೆ ಗೊತ್ತಾಗಿದೆ. ಅದರಂತೆ ಮಧ್ಯಾಹ್ನ ಪುತ್ತೂರಿನ ಬೀರಮಲೆಗುಡ್ಡೆಗೆ ಬಂದು ಪರಿಶೀಲಿಸಿದಾಗ ಮಗಳು ಆರೋಪಿಗಳ ಜೊತೆ ಕಾರಿನಲ್ಲಿ (ನಂಬ್ರ ಕೆಎಲ್-57 ಪಿ-4414 ) ಪತ್ತೆಯಾಗಿದ್ದಾಳೆ ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
“ರಾತ್ರಿ ಬಿಜೈ ಬಳಿ ಒಂದು ಪ್ಲಾಟ್ ಗೆ ಮಗಳನ್ನು ಒತ್ತಾಯದಿಂದ ಕರೆದುಕೊಂಡು ಹೋಗಿ ಪಾರ್ಟಿ ಮಾಡಿ ರಾತ್ರಿ ಅಲ್ಲೇ ಉಳಿಸಿಕೊಂಡಿದ್ದಾರೆ. ಮರುದಿನ ಬೆಳಗ್ಗೆ 9 ಗಂಟೆಗೆ ಮಗಳು ಮನೆಗೆ ಹೋಗುತ್ತೇನೆಂದರೂ ಬಿಡದೆ ಪುತ್ತೂರಿನಲ್ಲಿ ಸ್ನೇಹಿತೆಯನ್ನು ಭೇಟಿಯಾಗಲಿದೆ ಎಂದು ಹೇಳಿ ಪುಸಲಾಯಿಸಿ ಪುತ್ತೂರಿನ ಪರ್ಲಡ್ಕ ಬಳಿಯ ಬೀರಮಲೆಗುಡ್ಡೆ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಅಪ್ರಾಪ್ತೆ ಎಂದು ತಿಳಿದಿದ್ದರೂ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದಲೇ ಅಕ್ರಮವಾಗಿ ಕಾರಿನಲ್ಲಿ ಅಪಹರಿಸಿಕೊಂಡು ಪುತ್ತೂರಿನ ಬೀರಮಲೆಗುಡ್ಡೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಅಪ್ರಾಪ್ತ ಬಾಲಕಿಯ ತಂದೆ ನೀಡಿದ ದೂರಿನಂತೆ ಪುತ್ತೂರಿನ ಮಹಿಳಾ ಠಾಣೆಯ ಪೊಲೀಸರು ಅಪಹರಣ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಕೇರಳ ಮೂಲದ್ದಾಗಿದ್ದು ಆರೋಪಿಗಳು ಎಲ್ಲಿಯವರೆಂದು ಗೊತ್ತಾಗಿಲ್ಲ. ಆದರೆ, ಆರೋಪಿಗಳು ಬಾಲಕಿಯನ್ನು ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್ ಮಾಡಿದ್ದು ಲವ್ ಜಿಹಾದ್ ಗುರಿ ಇರಿಸಿಕೊಂಡೇ ಇಂಥ ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಸಮಗ್ರ ತನಿಖೆ ನಡೆಸಿದರಷ್ಟೇ ಈ ಜಾಲದ ಸತ್ಯಾಸತ್ಯತೆ ಹೊರಬಂದೀತು.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm