ಬ್ರೇಕಿಂಗ್ ನ್ಯೂಸ್
14-12-20 10:52 pm Mangaluru Correspondent ಕರಾವಳಿ
ಮಂಗಳೂರು, ಡಿ.14: ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತು ಸಂದರ್ಭಗಳಲ್ಲಿ ತುರ್ತು ಸೇವೆಗಾಗಿ ದೇಶದಾದ್ಯಂತ ಜಾರಿಗೊಳ್ಳುತ್ತಿರುವ 112 ತುರ್ತು ಸಹಾಯವಾಣಿ ಸೇವೆಗೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲೂ ಚಾಲನೆ ನೀಡಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸೋಮವಾರ ತಮ್ಮ ಕಚೇರಿ ಎದುರು 112 ತುರ್ತು ಸೇವೆಗೆ ನಿಯೋಜನೆಗೊಂಡಿರುವ 19 ವಾಹನಗಳಿಗೆ ಹಸಿರು ನಿಶಾನೆ ನೀಡಿದರು.
ದೇಶದಲ್ಲಿ ಒಂದೇ ತುರ್ತು ಕರೆ ಸಂಖ್ಯೆ ‘112’ ಜಾರಿಗೊಳ್ಳುತ್ತಿದೆ. ಅದರಂತೆ ಮಂಗಳೂರು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲೂ ಈ ಸೇವೆಗೆ ಚಾಲನೆ ನೀಡಲಾಗಿದೆ. ರವಿವಾರದಂದೇ ಸೇವೆ ಆರಂಭಗೊಂಡಿದ್ದು ಸೋಮವಾರ ಅಧಿಕೃತ ಚಾಲನೆ ನೀಡಲಾಗಿದೆ. ರವಿವಾರ ತುರ್ತು ಸೇವೆಗೆ 24 ಕರೆಗಳು ಬಂದಿದ್ದು ತುರ್ತಾಗಿ ಸ್ಪಂದಿಸಲಾಗಿದೆ ಎಂದು ಆಯುಕ್ತ ವಿಕಾಸ್ ಕುಮಾರ್ ತಿಳಿಸಿದರು.
ತುರ್ತು ಸಂದರ್ಭಗಳಿಗೆ 100ಗೆ ಕರೆ ಮಾಡಿದರೆ ಸೇವೆ ದೊರೆಯುತ್ತಿತ್ತು. ಮುಂದೆ 112ಗೆ ಕರೆ ಮಾಡಿದರೆ ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತು ತುರ್ತು ಸೇವೆಗಳು ದೊರೆಯಲಿವೆ. 100ಕ್ಕೆ ಕರೆ ಮಾಡಿದರೂ ಇದು 112 ಸಂಖ್ಯೆಗೆ ಸಂಪರ್ಕಗೊಂಡು ಸೇವೆ ದೊರೆಯುತ್ತದೆ ಎಂದರು.
ಅತ್ಯಂತ ಕಡಿಮೆ ಅವಧಿಯಲ್ಲಿ ಸೇವೆ ಒದಗಿಸುವುದು ಇದರ ಉದ್ದೇಶ. ತುರ್ತು ಸಂದರ್ಭದಲ್ಲಿ ಕರೆ ಮಾಡಿದಾಗ ಬೆಂಗಳೂರಿನಲ್ಲಿರುವ ನಿಯಂತ್ರಣ ಕೊಠಡಿಗೆ ಮಾಹಿತಿ ಹೋಗಿ ಅಲ್ಲಿಂದ ಜಿಪಿಎಸ್ ಆಧಾರದಲ್ಲಿ ಸಹಾಯ ಬೇಕಿರುವ ಪ್ರದೇಶದಲ್ಲಿರುವ ಸಹಾಯವಾಣಿ ವಾಹನ/ ಪೊಲೀಸ್ ತಂಡಕ್ಕೆ ತಕ್ಷಣ ಮಾಹಿತಿ ರವಾನೆಯಾಗುತ್ತದೆ. ಅಗ್ನಿಶಾಮಕ ಮತ್ತಿತರ ವಿಪತ್ತು ನಿರ್ವಹಣಾ ತಂಡಗಳಿಗೆ ಸಂಬಂಧಿಸಿದ ಮಾಹಿತಿ ಕೂಡ ಕೂಡಲೇ ಆಯಾ ವಿಭಾಗಗಳಿಗೆ ಹೋಗುತ್ತದೆ. ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ರವಾನೆಯಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ತುರ್ತು ಸೇವೆಯು ದಿನದ 24 ಗಂಟೆಯೂ ದೊರೆಯಲಿದ್ದು, ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ಗರಿಷ್ಠ 15ರಿಂದ 30 ನಿಮಿಷಗಳೊಳಗೆ ಸೇವೆ ಒದಗಿಸುವುದು ಇದರ ಉದ್ದೇಶ. ಸ್ಥಳ ಸಮೀಪದಲ್ಲಿದ್ದರೆ ಹೆಚ್ಚು ಬೇಗನೆ ಸೇವೆ ದೊರೆಯಲಿದೆ ಎಂದು ವಿಕಾಸ್ ಕುಮಾರ್ ತಿಳಿಸಿದರು.
ತುರ್ತು ಸೇವೆಗೆ ನಿಯೋಜನೆಗೊಂಡ 19 ವಾಹನಗಳು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರ್ಯಾಲಿ ನಡೆಸಿದವು. ಡಿಸಿಪಿಗಳಾದ ವಿನಯ ಗಾಂವ್ಕರ್, ಹರಿರಾಮ್ ಶಂಕರ್, ಸಂಚಾರ ವಿಭಾಗದ ಎಸಿಪಿಗಳಾದ ಎಂ.ಎ. ನಟರಾಜ್ ಉಪಾಸೆ, ಇನ್ಸ್ಪೆಕ್ಟರ್ ರಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.
Mangaluru city police commissioner Vikash Kumar Vikash on Monday, December 14 launched single emergency helpline number '112' under the Emergency Response Support System.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm