ಬ್ರೇಕಿಂಗ್ ನ್ಯೂಸ್
06-12-20 03:36 pm Suman: Headline Karnataka ಕರಾವಳಿ
ನ್ಯೂಯಾರ್ಕ್, ಡಿ.6: ಆಕೆಗಿನ್ನೂ 15ರ ಹರೆಯ. ಆಕೆಯ ಹೆಸರು ಮಾತ್ರ ಇಡೀ ಜಗತ್ತಿನ ಗಮನ ಸೆಳೆದಿದೆ. ಮೂಲತಃ ಮಂಗಳೂರು ಮೂಲದ ಕುಟುಂಬದ ಕುಡಿಯಾಗಿರುವ 15 ವರ್ಷದ ಗೀತಾಂಜಲಿ ರಾವ್ ಅಮೆರಿಕದ ಅತಿ ಕಿರಿಯ ವಯಸ್ಸಿನ ವಿಜ್ಞಾನಿಯಾಗಿ ಗಮನ ಸೆಳೆದಿದ್ದಾರೆ. ಈಗ ನ್ಯೂಯಾರ್ಕಿನಿಂದ ಪ್ರಕಟಗೊಳ್ಳುವ ಪ್ರತಿಷ್ಠಿತ ಟೈಮ್ ಮ್ಯಾಗಜಿನ್, ಇದೇ ಮೊದಲ ಬಾರಿಗೆ ಅತಿ ಸಣ್ಣ ವಯಸ್ಸಿನ ಸಾಧಕಿಯನ್ನು ತನ್ನ ವಾರ್ಷಿಕ ನಿಯತಕಾಲಿಕದಲ್ಲಿ ಟಾಪ್ ಯಂಗ್ ಇನ್ನೋವೇಟರ್ 2020 ಆಗಿ ಗುರುತಿಸಿ ಮುಖಪುಟದಲ್ಲಿ ಪ್ರಕಟಿಸಿದೆ.
ಅಮೆರಿಕದ 5 ಸಾವಿರ ಮಂದಿ ಸಾಧಕ ಸ್ಪರ್ಧಿಗಳ ನಡುವೆ 15 ವರ್ಷದ ಇಂಡೋ- ಅಮೆರಿಕನ್ ಬಾಲಕಿ ಗೀತಾಂಜಲಿ ರಾವ್ ಟೈಮ್ ಮ್ಯಾಗಜಿನ್ ಮುಖಪುಟಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಮಂಗಳೂರು ಮೂಲದ ಕುಟುಂಬ ರಾಮ ರಾವ್ ಮತ್ತು ಭಾರತಿ ರಾವ್ ದಂಪತಿಯ ಪುತ್ರಿಯಾಗಿರುವ ಗೀತಾಂಜಲಿ ರಾವ್, ಪರಿಸರ ಮಾಲಿನ್ಯದಿಂದ ನೀರು ಕಲುಷಿತ ಆಗುತ್ತಿರುವುದನ್ನು ಗುರುತಿಸಿ ಕುಡಿಯುವ ನೀರಿನಲ್ಲಿ ಸೀಸದ ಅಂಶವನ್ನು ಗುರುತಿಸಬಲ್ಲ ಸಾಧನವೊಂದನ್ನು ಕಂಡುಹಿಡಿದಿದ್ದಾರೆ. 2017ರಲ್ಲಿ ಗೀತಾಂಜಲಿಯ ಈ ಆವಿಷ್ಕಾರ, ಅಮೆರಿಕದ ಯಂಗ್ ಸೈಂಟಿಸ್ಟ್ ಚಾಲೆಂಜ್ ಸ್ಪರ್ಧೆಯಲ್ಲಿ ಬಹುಮಾನ ಪಡೆದಿತ್ತು.
ಗೀತಾಂಜಲಿ ಹತ್ತು ವರ್ಷದ ಬಾಲಕಿಯಾಗಿದ್ದಾಗಲೇ ವಿಜ್ಞಾನದತ್ತ ಆಸಕ್ತಳಾಗಿದ್ದಳು. ಅದಕ್ಕೆ ಕಾರಣವಾಗಿದ್ದು ಆಕೆ ವಾಸವಿದ್ದ ಮಿಚಿಗನ್ ನಗರದ ಮಾಲಿನ್ಯ. ಈಕೆಯ ಪ್ರಶ್ನೆಗಳಿಗೆ ತಂದೆ- ತಾಯಿ ಬಳಿ ಉತ್ತರಗಳಿರಲಿಲ್ಲ. ಇಷ್ಟೆಲ್ಲ ವಿಜ್ಞಾನಿಗಳಿದ್ದರೂ, ನಮ್ಮ ಕುಡಿಯುವ ನೀರಿನಲ್ಲಿ ಮಾಲಿನ್ಯ ಎಷ್ಟಿದೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದ್ರೆ ವಿಜ್ಞಾನಿಗಳು ಜನರ ಒಳಿತಿಗಾಗಿ ಕೆಲಸ ಮಾಡುವುದಿಲ್ಲ ಎಂದು ಹತ್ತು ವರ್ಷದ ಬಾಲಕಿ ಹೇಳಿಕೊಂಡಿದ್ದಳು. ಹೀಗಾಗಿ ಆಕೆಯ ಗಮನ ಪರಿಸರ ಮಾಲಿನ್ಯದ ಬಗ್ಗೆ ಸೆಳೆದಿತ್ತು. ಇದೇ ವಿಚಾರವನ್ನು ಮುಂದಿಟ್ಟು ಸಂಶೋಧನೆಯಲ್ಲಿ ತೊಡಗಿದ ಗೀತಾಂಜಲಿ ಎರಡೇ ವರ್ಷದಲ್ಲಿ ಸಾಧನೆ ಮಾಡಿದ್ದಳು.
ಮಿಚಿಗನ್ ನಗರದಲ್ಲಿ ಕುಡಿಯುವ ನೀರಿಗೆ ಸೀಸದ ಅಂಶ ಬೆರೆತಿರುವುದು ಅಲ್ಲಿನ ಜನರು ಮತ್ತು ಆಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಗೀತಾಂಜಲಿ ತಯಾರಿಸಿದ್ದ Tethys ಎನ್ನುವ ಹೆಸರಿನ ಸಾಧನ ನೀರಿನಲ್ಲಿ ಸೀಸದ ಅಂಶ ಎಷ್ಟಿದೆ ಎಂಬುದನ್ನು ಸುಲಭದಲ್ಲಿ ಪತ್ತೆ ಮಾಡಿ, ತಮ್ಮ ಮೊಬೈಲಿನಲ್ಲಿ ತೋರಿಸುವಂತಿತ್ತು. ಕಾರ್ಬನ್ ನ್ಯಾನೋ ಟ್ಯೂಬ್ ಮೂಲಕ ಸೀಸದ ಅಂಶದ ಪ್ರಮಾಣವನ್ನು ಪತ್ತೆ ಮಾಡುವ ಈ ಉಪಕರಣ, ನೀರು ಅಪಾಯಕಾರಿಯೇ ಅಥವಾ ಕುಡಿಯಲು ಬಳಸಬಹುದೇ ಎನ್ನುವ ಬಗ್ಗೆ ವರದಿ ನೀಡುತ್ತಿತ್ತು. 12 ವರ್ಷದ ಬಾಲಕಿಯ ಈ ಸಾಧನೆ ಕಂಡ ಇಡೀ ಅಮೆರಿಕವೇ ಬೆರಗಾಗಿತ್ತು. 3M ಎನ್ನುವ ಅಮೆರಿಕದ ಪ್ರತಿಷ್ಠಿತ ಕಂಪನಿ ಸಮೂಹ ಪ್ರಾಯೋಜಿಸುತ್ತಿದ್ದ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ನಲ್ಲಿ ಗೀತಾಳ ಆವಿಷ್ಕಾರಕ್ಕೆ 20217ರಲ್ಲಿ 25 ಸಾವಿರ ಡಾಲರ್ ಬಹುಮಾನ ದೊರೆತಿತ್ತು.
ಗೀತಾಂಜಲಿ ಇದಲ್ಲದೆ, ಆರು ವಿವಿಧ ಆವಿಷ್ಕಾರಗಳನ್ನು ಮಾಡಿದ್ದಾರೆ. ಮಾನವ ವಂಶವಾಹಿ, ಡ್ರಗ್ ಚಟದ ಪತ್ತೆ ಕಾರ್ಯದ ವಿಚಾರದಲ್ಲೂ ಸಂಶೋಧನೆ ಮಾಡಿದ್ದಾರೆ. ಭಾರತದಲ್ಲಿ 60 ಲಕ್ಷಕ್ಕಿಂತಲೂ ಹೆಚ್ಚು ಪೈನ್ ಕಿಲ್ಲರ್, ನಿದ್ರೆ ಮಾತ್ರೆಗಳನ್ನು ಸೇವಿಸುವ ಚಟ ಹೊಂದಿದವರು ಇದ್ದಾರೆ. ವೈದ್ಯರಿಗೂ ಆರಂಭದಲ್ಲಿ ಈ ರೋಗಿಗಳನ್ನು ಪರೀಕ್ಷಿಸಿದಾಗ, ಅವರಲ್ಲಿ ಪೈನ್ ಕಿಲ್ಲರ್ ಸೇವಿಸುವ ಅಥವಾ ಇನ್ನಾವುದೇ ಚಟ ಇರುವುದನ್ನು ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಗೀತಾಂಜಲಿ ತಯಾರಿಸಿದ ಪೋರ್ಟೇಬಲ್ ಮಾದರಿಯ ಸಾಧನ, ಕೆಲವೇ ನಿಮಿಷಗಳಲ್ಲಿ ರೋಗಿಯ ಡ್ರಗ್ ಚಟ ಮತ್ತು ಅದರ ಪರಿಣಾಮದ ಬಗ್ಗೆ ವರದಿ ನೀಡುತ್ತದೆ.
ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಮತ್ತು ಮ್ಯಾಥೆಮೆಟಿಕ್ಸ್ (STEM) ಬಗ್ಗೆ ಖಚಿತ ವಿಶ್ವಾಸ ಇರಿಸಿರುವ ಗೀತಾಂಜಲಿ ರಾವ್, ಸಣ್ಣ ಪ್ರಾಯದಲ್ಲೇ ವಿಶ್ವದ ನೂರಾರು ಶಾಲೆಗಳ ಆಸಕ್ತರಿಗೆ ಮಾರ್ಗದರ್ಶಿ ಆಗಿದ್ದಾರೆ. ಸ್ಟೆಮ್ ಎನ್ನುವ ಸಂಘಟನೆಯ ಅಡಿಯಲ್ಲಿ ಜಗತ್ತಿನ ಅತಿ ದೊಡ್ಡ ಶಾಂಘೈ ಮೂಲದ ಯೂತ್ ಸೈನ್ಸ್ ಅಂಡ್ ಟೆಕ್ನಾಲಜಿ ಗ್ರೂಪ್ ಮತ್ತು ಲಂಡನ್ ನಗರದ ರಾಯಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ಮೂಲಕ ಹೊಸ ಆವಿಷ್ಕಾರಗಳತ್ತ ಯುವಜನರನ್ನು ಸೆಳೆಯಬಲ್ಲ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಗೀತಾಂಜಲಿ ರಾವ್ ವಾರಕ್ಕೊಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದು, ಜಗತ್ತಿನ 28 ಸಾವಿರ ಶಾಲೆಗಳ ಲಕ್ಷಾಂತರ ವಿಜ್ಞಾನ ಆಸಕ್ತ ಮಕ್ಕಳು ಆಕರ್ಷಣೆಗೆ ಒಳಗಾಗಿದ್ದಾರೆ. ಯಾವುದೇ ಒಂದು ಸಮಸ್ಯೆಗೆ ಫಿಕ್ಸ್ ಆಗಬೇಡಿ. ನಿಮ್ಮ ಆಸಕ್ತಿಗಳತ್ತ ಗಮನ ಕೊಡಿ. ನನಗೆ ಸಾಧ್ಯವಾಗಿದ್ದು ಯಾರಿಗೂ ಅಸಾಧ್ಯ ಆಗಿರುವುದಿಲ್ಲ ಎಂಬುದು ಗೀತಾಂಜಲಿಯ ವಿಶ್ವಾಸದ ನುಡಿ.
ಒಂಬತ್ತು ವರ್ಷದಲ್ಲಿದ್ದಾಗಲೇ ಸಂಗೀತ ತರಗತಿಗೆ ಸೇರಿದ್ದ ಗೀತಾಂಜಲಿ ರಾವ್, ಸದ್ಯ ಪಿಯಾನೋ ನುಡಿಸುತ್ತಾರೆ. ಭಾರತೀಯ ನೃತ್ಯ ಪ್ರಕಾರಗಳನ್ನು ಮಾಡುತ್ತಾರೆ. ಹಾಡುಗಾರಿಕೆ, ಈಜಿನಲ್ಲೂ ಸಾಧನೆ ಮಾಡಿದ್ದಾರೆ. ಕಳೆದ ಲಾಕ್ಡೌನ್ ಸಮಯದಲ್ಲಿ ಅಡುಗೆಯಲ್ಲೂ ತೊಡಗಿಸಿಕೊಂಡು ಸುದ್ದಿಗೆ ಗ್ರಾಸವಾಗಿದ್ದರು. ಮನೆಯಲ್ಲಿ ಕೆಲವೊಮ್ಮೆ ಮೊಟ್ಟೆ, ಗೋದಿ ಹಿಟ್ಟು ಇರುವುದಿಲ್ಲ. ಮೊಟ್ಟೆ, ಹಿಟ್ಟು ಇಲ್ಲದೆ ಫುಡ್ ರೆಡಿ ಮಾಡುವುದನ್ನು ಕಲಿತಿದ್ದೇನೆ, ಇತ್ತೀಚೆಗೆ ಬ್ರೆಡ್ ತಯಾರಿಸಿದ್ದು ಹೆಮ್ಮೆ ಎನಿಸಿತ್ತು ಎಂದು ಹೇಳುತ್ತಾರೆ.
2019ರಲ್ಲಿ ಗೀತಾಂಜಲಿ ರಾವ್, ಫೋರ್ಬ್ಸ್ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿದ್ದರು. ‘30 ಅಂಡರ್ 30’ ಎನ್ನುವ ಹೆಸರಿನಲ್ಲಿ ಪ್ರಕಟಗೊಂಡ 30 ವರ್ಷದ ಒಳಗಿನ ವಿಶ್ವದ ಅದ್ಭುತ ಸಾಧಕರ 30 ಮಂದಿಯ ಲಿಸ್ಟ್ ನಲ್ಲಿ ಗೀತಾಂಜಲಿ ರಾವ್ ಹೆಸರೂ ಇತ್ತು. ಸದ್ಯಕ್ಕೆ ಗೀತಾಂಜಲಿ ಕುಟುಂಬ ಅಮೆರಿಕದ ಕೊಲರಾಡೊ ನಗರದಲ್ಲಿ ವಾಸವಿದ್ದಾರೆ. ಅಮೆರಿಕದಲ್ಲಿ ಭಾರತೀಯ ಮೂಲದವರು ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಈಗ ಜಗತ್ತಿನ ಗಮನ ಸೆಳೆದಿರುವುದಂತೂ ಸತ್ಯ
Meet TIME's first-ever Kid of the Year https://t.co/o9Q5D0oUTH pic.twitter.com/BKTwPyx0R0
— TIME (@TIME) December 6, 2020
At only 15 years of age, Mangalore Based Gitanjali Rao has already invented a mobile device to detect lead in drinking water and was named America's Top Young Scientist. Now, she's the winner of Time Magazine's first "Kid of the Year" award.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm