ಬ್ರೇಕಿಂಗ್ ನ್ಯೂಸ್
19-06-24 01:05 pm Mangalore Correspondent ಕರಾವಳಿ
ಮಂಗಳೂರು, ಜೂನ್.19: ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಟಿಕಿತ್ಸೆ ಪಡೆಯುತ್ತಿರುವ ಉಪ್ಪಿನಂಗಡಿ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ತಪ್ಪು ಮಾಹಿತಿ ರವಾನೆಯಾಗಿದ್ದು, ಕುಟುಂಬಸ್ಥರು ವೆನ್ಲಾಕ್ ಶವಾಗಾರದಲ್ಲಿ ಹುಡುಕಾಡಿದ ಪ್ರಸಂಗ ನಡೆದಿದೆ. ಘಟನೆ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ತನಿಖೆಗೆ ಆದೇಶ ಮಾಡಿದ್ದು, ಪಾಂಡೇಶ್ವರ ಪೊಲೀಸರ ಎಡವಟ್ಟಿನಿಂದಲೇ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭಿಸಿದೆ.
ಉಪ್ಪಿನಂಗಡಿ ಬಳಿಯ ಅರ್ಪಿಲ ನಿವಾಸಿ ಶೇಖರ ಗೌಡ(55) ಎಂಬವರನ್ನು ತೀವ್ರ ಅನಾರೋಗ್ಯದಿಂದಾಗಿ ಜೂನ್ 9ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸುಧಾರಣೆಯಾಗದ ಕಾರಣ ಮತ್ತು ಬಡ ಕುಟುಂಬವಾಗಿದ್ದರಿಂದ ಜೂನ್ 15ರಂದು ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮರುದಿನ ಶೇಖರ ಗೌಡ ಅರೆ ಪ್ರಜ್ಞಾವಸ್ಥೆಯಲ್ಲಿದ್ದು ವಾರೀಸುದಾರರಿಗೆ ಮಾಹಿತಿ ನೀಡುವಂತೆ ವೆನ್ಲಾಕ್ ಆಸ್ಪತ್ರೆಯ ಪೊಲೀಸ್ ಔಟ್ ಪೋಸ್ಟ್ ಮೂಲಕ ಪಾಂಡೇಶ್ವರ ಠಾಣೆಗೆ ಸೂಚನೆ ನೀಡಲಾಗಿತ್ತು. ಪಾಂಡೇಶ್ವರ ಠಾಣೆಯ ಸಿಬಂದಿ ಇದೇ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಶೇಖರ ಗೌಡ ಸಾವನ್ನಪ್ಪಿದ್ದಾರೆಂದು ಧರ್ಮಸ್ಥಳ ಠಾಣೆಗೆ ಮಾಹಿತಿ ರವಾನಿಸಿದ್ದರು. ಅಲ್ಲಿಂದ ಮನೆಯವರಿಗೂ ಮಾಹಿತಿ ಹೋಗಿತ್ತು.
ಇದರಂತೆ, ವೆನ್ಲಾಕ್ ಆಸ್ಪತ್ರೆ ಶವಾಗಾರಕ್ಕೆ ಬಂದಿದ್ದ ಕುಟುಂಬಸ್ಥರು ಹುಡುಕಾಡಿದ್ದು, ಅಲ್ಲಿ ಶವ ಇರಲಿಲ್ಲ. ಅಲ್ಲಿನ ಸಿಬಂದಿಗೆ ಕೇಳಿದಾಗ, ಯಾವುದೇ ಮಾಹಿತಿ ಇಲ್ಲವೆಂದೇ ಹೇಳಿದ್ದರು. ಪೊಲೀಸರು, ಸಿಬಂದಿಯ ಗೊಂದಲದ ಹೇಳಿಕೆಯಿಂದಾಗಿ ಕುಟುಂಬಸ್ಥರು ಬಳಿಕ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಹೋಗಿ ನೋಡಿದಾಗ, ಶೇಖರ ಗೌಡ ಬೆಡ್ ನಲ್ಲಿ ಮಲಗಿದ ಸ್ಥಿತಿಯಲ್ಲೇ ಇದ್ದರು. ಈ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ಮರಣಿಸದ ವ್ಯಕ್ತಿಗಾಗಿ ಕಣ್ಣೀರು ಎಂಬ ಶೀರ್ಷಿಕೆಯ ವರದಿ ಆಧರಿಸಿ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಕೇಳಲಾಗಿತ್ತು.
ತನಿಖೆಯ ಸಂದರ್ಭದಲ್ಲಿ ಪಾಂಡೇಶ್ವರ ಪೊಲೀಸರು, ವೆನ್ಲಾಕ್ ಆಸ್ಪತ್ರೆಯಿಂದ ಸೀರಿಯಸ್ ಎಂದು ನೀಡಲಾಗಿದ್ದ ವರದಿಯನ್ನೇ ಮೃತಪಟ್ಟಿದ್ದಾರೆಂದು ಬದಲಿಸಿದ್ದೇ ಎಡವಟ್ಟಿಗೆ ಕಾರಣ ಎಂಬುದನ್ನು ಪತ್ತೆ ಮಾಡಲಾಗಿದೆ. ಆಮೂಲಕ ಬದುಕಿದ್ದ ವ್ಯಕ್ತಿಯನ್ನೇ ಸತ್ತಿದ್ದಾರೆಂದು ತಿಳಿದು ಕುಟುಂಬಸ್ಥರು ಕಣ್ಣೀರು ಹಾಕಿದ್ದರೆ, ಇನ್ನೊಂದೆಡೆ ಊರಿನಲ್ಲಿ ಅಂತ್ಯಕ್ರಿಯೆಗೂ ತಯಾರಿ ನಡೆಸಲಾಗಿತ್ತು. ನರರೋಗದ ಸಮಸ್ಯೆಯಾಗಿದ್ದರಿಂದ ವ್ಯಕ್ತಿ ರೋಗದಿಂದ ಪಾರಾಗಿ ಬರುವುದು ಖಚಿತವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಹಾಗಾಗಿ, ಸಾವಿನ ನಿರೀಕ್ಷೆಯಲ್ಲಿದ್ದರೂ ಕುಟುಂಬಸ್ಥರಿಗೆ ದಿಢೀರ್ ಸಾವು ಮತ್ತು ಸತ್ತ ವ್ಯಕ್ತಿ ಬದುಕುಳಿದ ಸುದ್ದಿ ಒಂದ್ಕಡೆ ಕಣ್ಣೀರು ಮತ್ತು ನಿಟ್ಟುಸಿರಿನ ಎರಡೂ ಭಾವವನ್ನು ತರಿಸುವಂತೆ ಮಾಡಿದೆ. ವೆನ್ಲಾಕ್ ಆಸ್ಪತ್ರೆಯಿಂದ ಬರೆದುಕೊಟ್ಟ ಲಿಪಿಯೂ ಹಾಗೆಯೇ ಇತ್ತು. ಏನು ಬರೆದಿದ್ದಾರೆಂದೇ ತಿಳಿಯದೆ, ಅದನ್ನು ಮರು ಪ್ರಶ್ನೆಯೂ ಮಾಡದೆ ಸಾವನ್ನಪ್ಪಿದ್ದಾಗಿ ಪೊಲೀಸರು ಮಾಹಿತಿ ರವಾನಿಸಿದ್ದೇ ಎಡವಟ್ಟು ಮಾಡಿತ್ತು. ಫೋನ್, ಇಂಟರ್ನೆಟ್ ಎಲ್ಲ ಇದ್ದಾಗ್ಯೂ ಆಧುನಿಕ ಕಾಲದಲ್ಲಿಯೂ ಇಂತಹ ಎಡವಟ್ಟು ಆಗುತ್ತಿರುವುದೇ ಚೋದ್ಯ.
A significant mix-up occurred when police erroneously informed the family of a patient that he had passed away, even though he was still alive and receiving treatment at the hospital. Shekar Gowda (55) from the Dharmasthala police jurisdiction was admitted to Wenlock Hospital on June 15 due to severe health issues. There were no relatives present with him at the hospital.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm